ಮಡಿಕೇರಿ, ಜೂ. 30: ಕೇಂದ್ರ ಸರ್ಕಾರದಿಂದ, ಭಾರತದ ಸಾಂಖ್ಯಿಕ ತಜ್ಞ ಫ್ರೊಫೆಸರ್ ಪ್ರಶಾಂತಚಂದ್ರ ಮಹಾಲನೋಬಿಸ್ ಅವರ ಜನ್ಮ ದಿನಾಚರಣೆಯನ್ನು ಸಾಂಖ್ಯಿಕ ದಿನಾಚರಣೆಯನ್ನಾಗಿ ಆಚರಿಸಲು ನಿರ್ದೇಶನ ನೀಡಿದ ಪ್ರಯುಕ್ತ, ರಾಜ್ಯ ಸರ್ಕಾರದ ಸೂಚನೆಯಂತೆ ಮಡಿಕೇರಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ಸಾಂಖ್ಯಿಕ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯಯೋಜನಾಧಿಕಾರಿ ಸಂಧ್ಯಾ ಕೆ.ಎಸ್. ಮಾತನಾಡಿ, ಸಾಂಖ್ಯಿಕ ತಜ್ಞ ಪ್ರೋ. ಪಿ.ಸಿ. ಮಹಾಲನೋಬಿಸ್ ಅವರು ವಿಶ್ವಕ್ಕೆ ಸಾಂಖ್ಯಿಕ ಮಾದರಿಗಳ ಮಹತ್ವದ ಕೊಡುಗೆ ನೀಡಿದ ಪ್ರಮುಖರಾಗಿದ್ದಾರೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ದಯಾನಂದ ಮಾತನಾಡಿ, ಯಾವದೇ ಕ್ಷೇತ್ರದ ಅಭಿವೃದ್ಧಿಗೆ ಅಂಕಿ ಅಂಶಗಳು ಅಗತ್ಯವಾಗಿ ಬೇಕು. ಸಂಖ್ಯಾ ಸಂಗ್ರಹಣಾಕಾರರು ನಿಖರತೆಯಿಂದ ಮಾಹಿತಿ ಸಂಗ್ರಹಿಸಿದರೆ ದೇಶದ ಅಭಿವೃದ್ಧಿಗೆ ನೇರವಾಗುತ್ತದೆ. ಸರಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲಪುತ್ತದೆ ಎಂದು ಉದಾಹರಣೆಗಳ ಸಹಿತ ವಿವರಣೆ ನೀಡಿದರು. ಇಂದಿನ ವಿಷಯವಾದ ‘ಆಡಳಿತಾತ್ಮಕ ಅಂಕಿ ಅಂಶಗಳ ಗುಣಮಟ್ಟದ ಖಾತ್ರಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಸಾರ್ವಜನಿಕ ಯೋಜನೆಗಳನ್ನು ತಯಾರಿಸಲು ಈಗಾಗಲೇ ಲಭ್ಯವಿರುವ ಅಂಕಿ ಅಂಶಗಳನ್ನು ಉಪಯೋಗಿಸುವದರಿಂದ, ಅಂಕಿ ಅಂಶ ಸಂಗ್ರಹಣೆ ಮಾಡುವಾಗ ನಿಖರತೆ ವiತ್ತು ಪಾರದರ್ಶಕತೆ ಬಹಳ ಮುಖ್ಯವಾಗಿರುತ್ತದೆಎಂದು ತಿಳಿಸಿದರು.
ಸಾಂಖ್ಯಿಕ ನಿರೀಕ್ಷಕಿ ರೂಪ ಸಂಖ್ಯಾ ಶಾಸ್ತ್ರದ ಪಿತಾಮಹ, ಶ್ರೇಷ್ಠ ಸಂಖ್ಯಾ ಶಾಸ್ತ್ರಜ್ಞರಾಗಿ ಗುರುತಿಸಿಕೊಂಡ ಮಹಲನೋಬಿಸ್ ಅವರು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಜನಗಣತಿ, ಕೃಷಿ ಗಣತಿ ಮತ್ತಿತರ ಗಣತಿಯ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ನಿರ್ದೇಶಕರಾದ ಶ್ರೀಯುತ ಭೀಮಯ್ಯರವರು, ಜಿಲ್ಲಾ ಸಾಂಖ್ಯಿಕ ಕಚೇರಿ ಮತ್ತು ವಿವಿಧ ಇಲಾಖೆಗಳಲ್ಲಿ ಕಾಂiÀರ್iನಿರ್ವಹಿಸುತ್ತಿರುವ ಸಾಂಖ್ಯಿಕ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಮುಖ್ಯ ಯೋಜನಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ಸಂಖ್ಯಾ ಸಂಗ್ರಹಾಣಾಧಿಕಾರಿ ಎಂ. ಪ್ರಕಾಶ್ರವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮತನಾಡಿದರು. ಕಚೇರಿಯ ಸಹಾಯಕ ಸಾಂಖ್ಯಿಕ ಅಧಿಕಾರಿ ಮಮತ ವಂದಿಸಿದರು.