*ಸಿದ್ದಾಪುರ, ಜು. 2: ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೋರ್ವರ ಬೈಕ್ ಅನ್ನು ಠಾಣೆಯೆದುರೇ ದುಷ್ಕರ್ಮಿಗಳು ಸುಟ್ಟು ಹಾಕಿರುವ ಘಟನೆ ಸಂಭವಿಸಿದೆ.
ಇಲ್ಲಿಗೆ ಸಮೀಪದ ಚೆನ್ನಯ್ಯನಕೋಟೆ ಉಪಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ವಸಂತ್ ಕುಮಾರ್ ತಮ್ಮ ಹೀರೋಹೊಂಡಾ ಬೈಕನ್ನು ಠಾಣೆಯೆದುರು ನಿಲ್ಲಿಸಿ ಕರ್ತವ್ಯದಲ್ಲಿ ನಿರತರಾಗಿದ್ದರು. ಮಧ್ಯರಾತ್ರಿ 12.30ರ ವೇಳೆ ಬೈಕ್ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದುದನ್ನು ಗಮನಿಸಿ, ಬಂದು ನಂದಿಸಲು ಪ್ರಯತ್ನಿಸಿದರಾದರೂ ಅಷ್ಟರಾಗಲೇ ಬೈಕ್ ಬೆಂಕಿಗಾಹುತಿಯಾಗಿತ್ತು. ದುಷ್ಕøತ್ಯವೆಸಗಿದವರ ಬಗ್ಗೆ ಪೊಲೀಸರಿಗೆ ಸುಳಿವು ಲಭಿಸಿದ್ದು, ಸೆರೆ ಹಿಡಿಯಲು ಬಲೆ ಬೀಸಿದ್ದಾರೆ.
-ಸುಧಿ