ನಾಪೆÇೀಕ್ಲು, ಜು. 1: ತಾ. 25 ರಂದು ನಾಪೆÇೀಕ್ಲುವಿನಲ್ಲಿ ಮೂರನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ತಿಳಿಸಿದ್ದಾರೆ.

ನಾಪೆÇೀಕ್ಲು ಬಿದ್ದಾಟಂಡ ದಿ. ಬೋಪಯ್ಯ ಅವರ ‘ಭಟ್ಟಿ ಆಕ’ ಗದ್ದೆಯಲ್ಲಿ ಕ್ರೀಡಾಕೂಟ ಆಯೋಜಿಸುವ ಸಲುವಾಗಿ ಭತ್ತದ ಗದ್ದೆಯನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು, ಕೆಸರು ಗದ್ದೆ ಕ್ರೀಡಾಕೂಟವನ್ನು ಕೊಳಕೇರಿ ಗ್ರಾಮದ ಬಿದ್ದಾಟಂಡ ಭತ್ತದ ಗದ್ದೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ತಾ. 25 ರಂದು ನಡೆಯುವ ಕ್ರೀಡಾಕೂಟದಲ್ಲಿ ಕೆಸರು ಗದ್ದೆ ಓಟ, ಹ್ಯಾಂಡ್ ಬಾಲ್, ಹಗ್ಗಜಗ್ಗಾಟ ಮತ್ತಿತರ ಸ್ಪರ್ಧೆಗಳು ನಡೆಯಲಿವೆ. ಏಳು ಜನ ಆಟಗಾರರ ತಂಡ ಭಾಗವಹಿಸಬಹುದು ಎಂದರು.

ಈ ಸಂದರ್ಭ ಕೆಸರು ಗದ್ದೆಯ ಉಸ್ತುವಾರಿ ವಹಿಸಲಿರುವ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಪತ್ರಕರ್ತರಾದ ಪುತ್ತರಿರ ಕರುಣ್ ಕಾಳಯ್ಯ, ಪಪ್ಪು ತಿಮ್ಮಯ್ಯ, ಕೆ.ಎಂ. ರಮೇಶ್, ಪಿ.ವಿ. ಪ್ರಭಾಕರ್, ಕೆ.ಡಿ. ಸಂಪತ್ ಇದ್ದರು.