ಮಡಿಕೇರಿ, ಜು. 2: ನಗರದಿಂದ ಮೂರ್ನಾಡುವಿಗೆ ತೆರಳುವ ಒಂದನೇ ಮೈಲು ಹೆದ್ದಾರಿಯಲ್ಲಿ ಇಂದು ಬೆಳಗ್ಗಿನ ಜಾವ ಐದು ಗಂಟೆ ಸುಮಾರಿಗೆ ಎರಡು ದೈತ್ಯ ಗಂಡಾನೆಗಳು ಕಾಣಿಸಿಕೊಂಡಿವೆ. ಇದುವರೆಗೆ ಕಡಗದಾಳು, ಮೋದೂರು ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಕಾಡಾನೆಗಳ ಹಿಂಡಿನಿಂದ ಬೇರ್ಪ ಟ್ಟಿರುವ ಈ ಗಂಡಾನೆಗಳು ಇತ್ತ ಬಂದಿರುವ ಶಂಕೆಯನ್ನು ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.ಈ ಮಾರ್ಗದಲ್ಲಿ ಕಾಡಾನೆಗಳ ದರ್ಶನದೊಂದಿಗೆ ಸಾರ್ವಜನಿಕರು ತಿಳಿಸಿದ ಮೇರೆಗೆ, ಅರಣ್ಯ ಇಲಾಖೆಯು ಕಾರ್ಯಚರಣೆಯಲ್ಲಿ ತೊಡಗಿದ್ದು, ಎರಡು ಗಜಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಮುಂದಾಗಿ ದ್ದಾರೆ. ಮಧ್ಯಾಹ್ನದ ವೇಳೆಗೆ ಈ ಗಜಗಳು ರಮ್ಯ ಗ್ಯಾರೇಜ್ ಬಳಿಯಿಂದ ಶಾಂತಿ ಎಸ್ಟೇಟ್‍ನೊಳಗೆ ನುಸುಳಿಕೊಂಡಿವೆ.

ಮಧ್ಯಾಹ್ನ ಬಳಿಕವೂ ಮಡಿಕೇರಿಯ ಅರಣ್ಯ ಸಿಬ್ಬಂದಿ ಯೊಂದಿಗೆ, ಕುಶಾಲನಗರ ದಿಂದ ಹೆಚ್ಚಿನ ಅರಣ್ಯ ಇಲಾಖೆ ನೌಕರರನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದು, ಕಾಡಾನೆಗಳು ತೀರಾ ಇಕ್ಕಟ್ಟಿನಿಂದ ಕೂಡಿರುವ ಪ್ರಪಾತದೊಳಗೆ ಸೇರಿಕೊಂಡಿವೆ

(ಮೊದಲ ಪುಟದಿಂದ) ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಕಾರ್ಯಾಚರಣೆಗೆ ತೊಡಕಾಗಿದೆ ಎಂದು ವಿವರಿಸಿದರು.

ಶಾಂತಿ ಎಸ್ಟೇಟ್‍ನಿಂದ ಕಾಡಾನೆಗಳು ಹೊರಬಂದರೆ ಮತ್ತೆ ಚೆಟ್ಟಳ್ಳಿ ಹೆದ್ದಾರಿಗೆ ಹೊಂದಿಕೊಂಡಂತೆ ಕಡಗದಾಳು, ಮೋದೂರು ಮೂಲಕ ಮೀನುಕೊಲ್ಲಿ ಅರಣ್ಯದತ್ತ ಹಿಮ್ಮೆಟ್ಟಿಸಲು ಪ್ರಯತ್ನಿಸಲಾಗುವದು ಎಂದು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ಇನ್ನು ಈ ಸಂಬಂಧ ಕಾರ್ಯಾಚರಣೆ ಮುಂದುವರಿದಿದೆ.

ಕೆಲವು ತಿಂಗಳ ಹಿಂದೆ ನಗರದ ಮ್ಯಾನ್ಸ್ ಕಾಂಪೌಂಡ್ ಸುತ್ತಮುತ್ತ ಕಾಣಿಸಿಕೊಂಡಿದ್ದ ಜೋಡಿ ಕಾಡಾನೆಗಳೇ ಆ ಮಾರ್ಗವಾಗಿ ಮತ್ತೆ ಇತ್ತ ಬಂದಿರುವದಾಗಿ ಅರಣ್ಯಾಧಿಕಾರಿಗಳು ಖಚಿತ ಪಡಿಸಿದ್ದಾರೆ.

ಅಲ್ಲದೆ ಮಳೆಯಿಂದಾಗಿ ಕಾರ್ಯಾಚರಣೆಯನ್ನು