ಮಡಿಕೇರಿ, ಜು. 1: ಕಾರ್ಕಳದಿಂದ ರಾಮನಗರಕ್ಕೆ ತೆರಳುತ್ತಿದ್ದ ಪೊಲೀಸ್ ಇಲಾಖೆಯ ವಾಹನವೊಂದಕ್ಕೆ (ಕೆಎ 42 ಜಿ 926) ಇಲ್ಲಿನ ಹೊರವಲಯದ ಇಬ್ಬನಿ ರೆಸಾರ್ಟ್ ಬಳಿ ಹೆದ್ದಾರಿಯಲ್ಲಿ ಲಾರಿಯೊಂದು (ಕೆಎ 09 ಡಿ 0741) ಪರಸ್ಪರ ಡಿಕ್ಕಿಯಾದ ಘಟನೆ ಸಂಭವಿಸಿದೆ. ಅಪಘಾತದಿಂದ ಎರಡು ವಾಹನಗಳು ಜಖಂಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಕಾನೂನು ಕ್ರಮಕೈಗೊಂಡಿದ್ದಾರೆ.