ನಾಪೆÇೀಕ್ಲು, ಜು. 1: ಸ್ಥಳೀಯ ಗ್ರಾಮ ಪಂಚಾಯಿತಿಯ ಲೆಕ್ಕ ಪರಿಶೋಧನೆ ಸಭೆ ನೋಡಲ್ ಅಧಿಕಾರಿ ಚಂದ್ರಹಾಸ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ಅಧಿಕಾರಿ ವಿ.ಡಿ. ದಿನೇಶ್ ಇಲ್ಲಿಯವರೆಗೆ ನಡೆಸಲಾದ ಕಾಮಗಾರಿಗಳು ಮತ್ತು ಮುಂದೆ ನಡೆಸಬೇಕಾದ ಕಾಮಗಾರಿಗಳ ವಿವರಣೆ ನೀಡಿದರು. ಸಾರ್ವಜನಿಕರಾದ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮತ್ತು ಕೇಟೋಳಿರ ಹರೀಶ್ ಪೂವಯ್ಯ ಕಾಮಗಾರಿಗಳ ಮಾಹಿತಿ ಪಡೆದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೇಯಂಡ ಸಾಬ ತಿಮ್ಮಯ್ಯ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಾಚೇಟಿರ ಕುಶು ಕುಶಾಲಪ್ಪ, ಶಿವಚಾಳಿಯಂಡ ಜಗದೀಶ್, ಚೋಕಿರ ರೋಷನ್, ಟಿ.ಎ. ಅಹಮ್ಮದ್, ಪುಲ್ಲೇರ ಪದ್ಮಿನಿ, ಬೊಟ್ಟೋಳಂಡ ಚಿತ್ರ, ಎಂ.ಎಂ. ಆಮೀನಾ, ವನಜಾಕ್ಷಿ, ಶಹನಾಜ್, ಮೋಹಿನಿ ಟಿ.ಆರ್. ಪುಷ್ಪ ಕೃಷ್ಣಪ್ಪ, ಇದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಆರ್. ಕೇಶವ ಸ್ವಾಗತಿಸಿ, ವಂದಿಸಿದರು.