ಸುಂಟಿಕೊಪ್ಪ, ಜು. 2: ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ 2017-18ನೇ ಸಾಲಿನ ಪರಿಶಿಷ್ಟ ಜಾತಿ ಪಂಗಡದವರಿಗೆ ಶೇ.25ರ ಅನುದಾನದಡಿ 47 ಫಲಾನುಭವಿಗಳಿಗೆ ಸಿಂಟೆಕ್ ಟ್ಯಾಂಕ್‍ನ್ನು ವಿತರಿಸ ಲಾಯಿತು. ಕೊಡಗರಹಳ್ಳಿ ಗ್ರಾ. ಪಂ. ಅಧ್ಯಕ್ಷ ಹೆಚ್.ಇ. ಅಬ್ಬಾಸ್ ಮಾತನಾಡಿ, ಬಡವರಿಗೆ ಆಶ್ರಯ ಮನೆ ಬಸವ ಯೋಜನೆಯಡಿ ಮನೆ ನಿರ್ಮಿಸಿ ಕೊಡಲಾಗಿದ್ದು, ಬಡವರ ಉಪಯೋಗಕ್ಕಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಈ ಸಲ ಸಿಂಟೆಕ್ ಟ್ಯಾಂಕ್‍ನ್ನು ನೀಡಿದ್ದೇವೆ. ಕಳೆದ ವರ್ಷ ಸಿಲಿಂಡರ್, ಗ್ಯಾಸ್, ಹೊಲಿಗೆ ಯಂತ್ರ, ಸೋಲಾರ್ ದೀಪ ವಿತರಿಸಲಾಗಿದೆ. ಹಂತ-ಹಂತವಾಗಿ ಮುಂದೆಯೂ ಉಳಿದ ಪಲಾನುಭವಿಗಳಿಗೆ ಆದ್ಯತೆ ಮೇರೆ ಪರಿಕರಗಳನ್ನು ವಿತರಿಸುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಂದೀಶ್, ಉಪಾಧ್ಯಕ್ಷೆ ಪ್ರೇಮ, ಕಾರ್ಯದರ್ಶಿ ಅಂಜನಾ ದೇವಿ, ಸದಸ್ಯರುಗಳಾದ ಎನ್.ಡಿ.ನಂಜಪ್ಪ, ಸಲೀಮ್, ಉಸ್ಮಾನ್, ವಸಂತ, ಸುಮಿತ್ರ, ಜಯಲಕ್ಷ್ಮಿ, ಹಾಗೂ ಸದಸ್ಯರು ಹಾಜರಿದ್ದರು.