ಮಡಿಕೇರಿ, ಜು. 1: ಜೆಡಿಎಸ್ ಪಕ್ಷದ ಮಡಿಕೇರಿ ನಗರದ 23 ವಾರ್ಡ್‍ಗಳ ಕಾರ್ಯಕರ್ತರ ಸಭೆಯು ಜೂ. 30 ರಂದು ನಗರದ ದಾಸವಾಳ ಕೂರ್ಗ್ ಕಮ್ಯುನಿಟಿ ಸಭಾಂಗಣದಲ್ಲಿ ನಡೆಯಿತು. ಕಳೆದ ವಿಧಾನಸಭಾ ಚುನಾವಣೆಯ ಹಿನ್ನೆಲೆ ಬಗ್ಗೆ ಸಭೆಯಲ್ಲಿ ಅವಲೋಕನ ನಡೆಸಲಾಯಿತು ಎಂದು ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಎಂ. ಧರ್ಮಪ್ಪ ತಿಳಿಸಿದರು.

ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳಾದ ತಿರುಮಲ ಸೋನ, ಹೆಚ್.ಎನ್. ಬಸವರಾಜು, ಬಿ.ಎ. ಗಣೇಶ್ ಮೊದಲಾದವರು ಪಾಲ್ಗೊಂಡು ಮಾತನಾಡಿದರಲ್ಲದೆ, ಚುನಾವಣೆಯ ಹಿನ್ನೆಡೆ ಬಗ್ಗೆ ಚರ್ಚಿಸಿದ್ದಾಗಿಯೂ ತಿಳಿಸಿದರು.