ಕುಶಾಲನಗರ, ಜು. 1: ತಾವರೆಕೆರೆಯ ತಟದ ಸ್ವಚ್ಛತಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಕುಶಾಲನಗರ ಐತಿಹಾಸಿಕ ಕೆರೆ ಪೊದೆಗಂಟಿಗಳಿಂದ ಕೂಡಿದ್ದು ಅವುಗಳನ್ನು ತೆರವುಗೊಳಿಸುವ ಕಾರ್ಯ ಸಂರಕ್ಷಣಾ ವೇದಿಕೆ ಆಶ್ರಯದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಸಮಿತಿಯ ಹಿರಿಯರಾದ ಕೆ.ಆರ್.ಶಿವಾನಂದನ್ ಚಾಲನೆ ನೀಡಿದರು. ವೇದಿಕೆಯ ಸದಸ್ಯರು ಶ್ರಮದಾನ ಮೂಲಕ ಕೆರೆ ತಟವನ್ನು ಸ್ವಚ್ಛಗೊಳಿಸುವದರೊಂದಿಗೆ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭ ಪಟ್ಟಣ ಪಂಚಾಯ್ತಿ ಸದಸ್ಯರಾದ ಎಂ.ಎಂ. ಚರಣ್, ಪಿ.ಪಿ. ಸತ್ಯನಾರಾಯಣ, ವೇದಿಕೆಯ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ಕೆ.ಜಿ. ಮನು, ಮಂಜುನಾಥ್, ಎಂ.ಡಿ.ಕೃಷ್ಣಪ್ಪ, ಕೆ.ಎನ್. ದೇವರಾಜ್, ವಿನೋದ್, ಗೋವಿಂದ, ಡಿ.ಆರ್. ಸೋಮಶೇಖರ್, ಎಂ.ಬಿ. ಜೋಯಪ್ಪ, ಕೆ.ಎಸ್.ನಾಗೇಶ್ ಮತ್ತಿತರರು ಪಾಲ್ಗೊಂಡಿದ್ದರು.