ಸುಂಟಿಕೊಪ್ಪ, ಜು. 1: ಮಹಮ್ಮದ್ ಆಲಿ ಶಿಹಾಬ್ ತಂಙಳ್ ಜೂನಿಯರ್ ಶೆರೀಅತ್ತ್ ಕಾಲೇಜ್ನ್ನು ಉಸ್ಮಾನ್ ಫೈಜಿ ಉದ್ಘಾಟಿಸಿದರು. ಧಾರ್ಮಿಕ ಹಾಗೂ ಲೌಕಿಕ ವಿದ್ಯೆಯನ್ನು ಸಮನ್ವಯವಾಗಿ ನೀಡುವ ಕೊಡಗಿನ ಏಕೈಕ ಕಾಲೇಜು ಇದಾಗಿದೆ ಎಂದು ಉಸ್ಮಾನ್ ಫೈಝಿ ಹೇಳಿದರು. ಹತ್ತನೇ ತರಗತಿಯಿಂದ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಸ್ತುತ ಕಾಲೇಜಿನಲ್ಲಿ ಪಿಯುಸಿ, ಬಿ.ಎ ತನಕ ವಿದ್ಯಾಭ್ಯಾಸವನ್ನು ನೀಡಿ ನಂತರ ಮಂಗಳೂರು ವಿಶ್ವ ವಿದ್ಯಾಲಯದಿಂದ ಪಿ.ಜಿ. ಪದವಿ ನೀಡಲಾಗುತ್ತಿದೆ. ಧಾರ್ಮಿಕವಾಗಿ ಆರು ವರ್ಷಗಳ ತರಬೇತಿಯನ್ನು ಪ್ರಸ್ತುತ ಕಾಲೇಜಿನಿಂದಲೂ ಎರಡು ವರ್ಷದ ವಿದ್ಯಾಭ್ಯಾಸವನ್ನು ಕೇರಳದ ಜಾಮೀಯ ನೂರಿಯ ಕಾಲೇಜಿನಿಂದ ನೀಡಲಾಗುತ್ತಿದೆ. ವಸತಿ, ಆಹಾರ, ಪಠ್ಯಪುಸ್ತಕಗಳು, ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. 60 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 2018 ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಶೇ. 100 ರಷ್ಟು ಲಭಿಸಿದೆ. ಈ ವರ್ಷ ಹಿಫೆಳುಲ್ಖುರ್ ಅನ್ನು ಕೋರ್ಸ್ನ್ನು ಪ್ರಾರಂಭಿಸಲಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಅಧ್ಯಕ್ಷ ಉಮ್ಮರ್ ಫೈಝಿ ವಹಿಸಿದ್ದರು. ಪ್ರಾಂಶುಪಾಲ ಝೆನುದ್ದೀನ್ಫೈಝಿ, ಉಪನ್ಯಾಸಕರು, ಕಾಲೇಜು ಕಾರ್ಯದರ್ಶಿ ಸಿ.ಎಂ. ಹಮ್ಮೀದ್ ಮೌಲವಿ, ಸದಸ್ಯರುಗಳಾದ ಇಕ್ಬಾಲ್ ಮೌಲವಿ, ಎಸ್.ಎಂ. ಮಹಮ್ಮದ್ ಹಾಜರಿದ್ದರು.