ಕುಶಾಲನಗರ, ಜು. 2: ತಾವರೆಕೆರೆ ಮೇಲೆ ಮಣ್ಣು ಸುರಿದು ಅಕ್ರಮವಾಗಿ ರಸ್ತೆ ನಿರ್ಮಿಸಿದ ಹಿನ್ನಲೆಯಲ್ಲಿ ತೆರವು ಕಾರ್ಯಚರಣೆ 3ನೇ ದಿನಕ್ಕೆ ಮುಂದುವರೆದಿದೆ. ಎರಡು ಜೆಸಿಬಿ ಯಂತ್ರಗಳು ಕೆರೆಯಿಂದ ಮಣ್ಣನ್ನು ಟ್ರಾಕ್ಟರ್‍ಗಳ ಮೂಲಕ ತೆರವುಗೊಳಿಸುತ್ತಿದ್ದು ಇನ್ನೂ ಕೆಲವು ದಿನಗಳ ಕಾಲ ಈ ಕಾರ್ಯ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡುರಾವ್ ಬಡಾವಣೆ ಯಿಂದ ಖಾಸಗಿ ಬಡಾವಣೆಯೊಂದಕ್ಕೆ ಅಕ್ರಮವಾಗಿ ರಸ್ತೆ ನಿರ್ಮಾಣಗೊಂಡಿದ್ದು ಜಿಲ್ಲಾಧಿಕಾರಿಗಳ ಆದೇಶದ ಹಿನ್ನಲೆಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ.