ಮಡಿಕೇರಿ: ಕಡಗದಾಳುವಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. ಕಡಗದಾಳು ಗ್ರಾಮದ ಗ್ಲ್ಯಾಂಡಲ್ ಎಸ್ಟೇಟ್ ಮಾಲೀಕರಾದ ಲೈಲಾ ಅಲ್ವಾರೀಸ್ ಸ್ಥಳೀಯ ಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ ಪ್ರಾಥಮಿಕ ಶಾಲೆಯ ಎಲ್ಲಾ 230 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಇತರೆ ಕಲಿಕಾ ಸಾಮಗ್ರಿ ನೀಡಿದರು.

ಲೈಲಾ ಆಲ್ವಾರೀಸ್ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯನ್ನು ಮನಗಂಡು ಹತ್ತು ವರ್ಷಗಳಿಂದ ಕಡಗದಾಳು ಗ್ರಾಮದ ಸರಕಾರಿ ಶಾಲೆಯ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಆಯಾ ವರ್ಷಕ್ಕೆ ಬೇಕಾಗುವ ಬರವಣಿಗೆ ಪುಸ್ತಕಗಳು, ಇತರ ಶೈಕ್ಷಣಿಕ ಪರಿಕರಗಳನ್ನು ಶೈಕ್ಷಣಿಕ ವರ್ಷಾರಂಭದಲ್ಲಿ ನೀಡುತ್ತಾ ಬಂದಿದ್ದಾರೆ.

ಸಮಾರಂಭದಲ್ಲಿ ಲೈಲಾ ಅಲ್ವಾರೀಸ್ ಮಕ್ಕಳಾದ ಕ್ಲೇರಾ, ಕಿರಣ್ ಉಪಸ್ಥಿತರಿದ್ದರು. ಎಸ್.ಡಿ.ಎಂ.ಸಿ.ಯ ಅಧ್ಯಕ್ಷ ಅಬ್ದುಲ್ ಜಲೀಲ್, ಉಪಾಧ್ಯಕ್ಷೆ ರತ್ನಾವತಿ, ಸದಸ್ಯರು, ಪೆÇೀಷಕರು, ಎರಡೂ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಗೋಣಿಕೊಪ್ಪಲು: ಬಲ್ಯಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಚಮಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಚಕ್ಕಮುಂಡೂರು ಗ್ರಾಮದ ದಾನಿ ನಿವೃತ್ತ ಸರ್ವೆ ಉದ್ಯೋಗಿ ಅಜ್ಜಿಕುಟ್ಟಿರ ಭೀಮಯ್ಯ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿದರು.

ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ವಿತರಿಸಿ ಮಾತನಾಡಿದ ಭೀಮಯ್ಯ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಹಾಯ ಹಸ್ತ ನೀಡುವ ಕೆಲಸ ಮಾಡಿದ್ದೇನೆ. ಮುಂದೆಯೂ ಸಹಕಾರ ನೀಡುವದಾಗಿ ಭರವಸೆ ನೀಡಿದರು. ದಾನಿಗಳಾದ ಚಿಮ್ಮಣಮಾಡ ಪ್ರೇಮ್ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿ ವಿತರಿಸಿದರು.

ಅತಿಥಿಗಳಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ ತಮ್ಮ ಪತ್ನಿ ಮೀನಾಕ್ಷಿ ಜ್ಞಾಪಕಾಥರ್Àವಾಗಿ ದತ್ತಿ ನಿಧಿಯನ್ನು ವಿತರಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು, ಹಾಜರಿದ್ದರು. ಮುಖ್ಯೋಪಾಧ್ಯಾಯಿನಿ ಸಿ.ಎಂ. ಪದ್ಮ ಸ್ವಾಗತಿಸಿ, ವಂದಿಸಿದರು.ಸೋಮವಾರಪೇಟೆ: ಸೋಮವಾರಪೇಟೆಯ ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ನೀಡಿದ ಉಚಿತ ಪುಸ್ತಕಗಳನ್ನು ತಾಲೂಕಿನ ಚಿಕ್ಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಇಬ್ರಾಹಿಂ, ಮುಖ್ಯೋಪಾಧ್ಯಾಯಿನಿ ತಾರಾ, ಚೈಲ್ಡ್ ಲೈನ್ ಕಾರ್ಯಕರ್ತೆ ಕುಮಾರಿ, ಯೋಗೇಶ್ ಅವರುಗಳು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು.

ಮಡಿಕೇರಿ: ಮಡಿಕೇರಿಯ ಅಂಜುಮಾನೇ ತನ್‍ಜೀಮೇ ಮಿಲ್ಲತ್ ಸಂಸ್ಥೆಯ ವತಿಯಿಂದ ಈ ಬಾರಿಯೂ ಪ್ರತಿವರ್ಷದಂತೆ ಸಮಾಜದ ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.

ನಗರದ ಕೂರ್ಗ್ ಕಮ್ಯೂನಿಟಿ ಹಾಲ್‍ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ 7 ರಿಂದ ಪದವಿಯ ತನಕದ ಸುಮಾರು 200 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ನಗರದ ಲೆಕ್ಕ ಪರಿಶೋಧಕ ಜಿ.ಹೆಚ್. ಮೊಹಮದ್ ಹನೀಫ್, ವಕೀಲ ಟಿ.ಹೆಚ್. ಅಬೂಬಕರ್, ಜಿಲ್ಲಾ ನೋಂದಣಾಧಿಕಾರಿ ಕಚೇರಿಯ ನಿವೃತ್ತ ಉದ್ಯೋಗಿ ಲಿಯಾಖತ್ ಖಾನಂ ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ನಗರದ ಮಕ್ಕಾ ಮಸೀದಿಯ ಧರ್ಮಗುರು ಮೌಲಾನ ಅಬ್ದುಲ್ ಹಕೀಂ ಅವರು ಪ್ರಾರ್ಥನಾ ಕಾರ್ಯ ನೆರವೇರಿಸಿದರು. ಸಂಸ್ಥೆಯ ಕಾರ್ಯದರ್ಶಿ ಎಂ.ಹೆಚ್. ಮೊಹಮದ್ ಸ್ವಾಗತಿಸಿ, ವಂದಿಸಿದರು.

ವೀರಾಜಪೇಟೆ: ತೋಮರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವೀರಾಜಪೇಟೆ ಚಿಕ್ಕಪೇಟೆಯ ಉದ್ಯಮಿ ಕೂತಂಡ ರಾಜಪ್ಪ ಅವರು ನೋಟ್ ಪುಸ್ತಕಗಳನ್ನು ಉದಾರವಾಗಿ ನೀಡಿದರು. ಈ ಸಂದರ್ಭ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಮುಖ್ಯ ಶಿಕ್ಷಕಿ ಉಷಾರಾಣಿ ಹಾಜರಿದ್ದರು.