ಮಡಿಕೇರಿ, ಜು. 1: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ರಾಜ್ಯದ ಬೆಂಗಳೂರು, ಮೈಸೂರು, ಮಡಿಕೇರಿ, ಮೂಡಬಿದ್ರೆ, ಶಿವಮೊಗ್ಗ, ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಈ ಸ್ಥಳಗಳಲ್ಲಿ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಸಂಸ್ಥೆಗಳನ್ನು ನಡೆಸುತ್ತಿದ್ದು, ಸಹಕಾರ ಸಂಘ-ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮಾತ್ರ “6 ತಿಂಗಳು/180 ದಿನಗಳ”À ಅವಧಿಯ ದೂರ ಶಿಕ್ಷಣದ ಮೂಲಕ “ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್” ತರಬೇತಿಯು ಜುಲೈ ಮಾಹೆಯಿಂದ ಪ್ರಾರಂಭವಾಗಲಿದ್ದು, ತರಬೇತಿ ಪಡೆಯಲಿಚ್ಚಿಸುವ ಅರ್ಹ ಸಿಬ್ಬಂದಿಗಳಿಂದ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ.

ತಾ. 29 ರಿಂದ ಅರ್ಜಿ ವಿತರಿಸಲಾಗುವದು. ದೂರ ಶಿಕ್ಷಣ ಡಿ.ಸಿ.ಎಂ., ತರಬೇತಿಯ ಅರ್ಜಿ ಫಾರಂ ಮತ್ತು ಕೈಪಿಡಿ ಪುಸ್ತಕವನ್ನು ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಮಡಿಕೇರಿ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ ಮತ್ತು ಹಾಸನ ಜಿಲ್ಲಾ ಸಹಕಾರ ಯೂನಿಯನ್ ನಿ., ಹಾಸನ ಇಲ್ಲಿ ಅರ್ಜಿ ಮತ್ತು ಕೈಪಿಡಿ ಪುಸ್ತಕವನ್ನು ನಗದು ಶುಲ್ಕ ರೂ. 200 ಪಾವತಿಸಿ ಪಡೆಯಬಹುದು. ಅಂಚೆಯ ಮೂಲಕ ಅರ್ಜಿ ಸಲ್ಲಿಸಲಿಚ್ಚಿಸುವ ಅಭ್ಯರ್ಥಿಗಳು ರೂ. 10 ಮೌಲ್ಯದ ಸ್ಟಾಂಪ್ ಅಂಟಿಸಿದ ಸ್ವ-ವಿಳಾಸವಿರುವ 12”x10” ಅಳತೆಯ ಲಕೋಟೆಯನ್ನು ಮತ್ತು ರೂ. 200 ಗಳ ಡಿ.ಡಿ/ಪೋಸ್ಟಲ್ ಆರ್ಡರ್‍ನ್ನು ಪ್ರಾಂಶುಪಾಲರು, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಮಡಿಕೇರಿ, ಇವರ ಹೆಸರಿನಲ್ಲಿ ಪಡೆದು ಜೊತೆಗೆ ಲಗತ್ತಿಸಿ ಕಳುಹಿಸಿ ಪಡೆಯಬಹುದು. ಜುಲೈ 16 ರೊಳಗೆ ಸಿಬ್ಬಂದಿಗಳು ಭರ್ತಿ ಮಾಡಿದ ಅರ್ಜಿಯನ್ನು ಪ್ರಾಂಶುಪಾಲರಿಗೆ ಸಲ್ಲಿಸುವದು. ಹೆಚ್ಚಿನ ಮಾಹಿತಿಗೆ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಮಡಿಕೇರಿ, ಮುತ್ತಪ್ಪ ದೇವಸ್ಥಾನದ ಹತ್ತಿರ, ಅಬ್ಭಿಫಾಲ್ಸ್ ರಸ್ತೆ, ಮಡಿಕೇರಿ. ದೂರವಾಣಿ ಸಂಖ್ಯೆ: 08272-228437, ಮೊಬೈಲ್ ಸಂಖ್ಯೆ: 9902189872, 8762110952 ರಲ್ಲಿ ಸಂಪರ್ಕಿಸಬಹುದು ಎಂದು ಮಡಿಕೇರಿ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್‍ನ ಪ್ರಾಂಶುಪಾಲರು ಪುಟ್ಟಸ್ವಾಮಿ ತಿಳಿಸಿದ್ದಾರೆ.

ಕಾನೂನು ತರಬೇತಿಗೆ

ಪ್ರಸಕ್ತ (2018-19)ಸಾಲಿಗೆ ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಆಡಳಿತ ನ್ಯಾಯಾಧೀಕರಣ ಯೋಜನೆಯಡಿ ತರಬೇತಿ ನೀಡಲು ಪರಿಶಿಷ್ಟ ಜಾತಿ ಅರ್ಹ ಕಾನೂನು ಪದವೀಧರರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆಗಳು: ಅಭ್ಯರ್ಥಿಯು ಕೊಡಗು ಜಿಲ್ಲೆಯವರಾಗಿರಬೇಕು, 40 ವರ್ಷ ವಯೋಮಿತಿಯೊಳಗಿರಬೇಕು, ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಮೊದಲು 3 ಅಥವಾ 5 ವರ್ಷದೊಳಗೆ ಕಾನೂನು ಪದವಿ ಪಡೆದಿರಬೇಕು.

ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪ್ರಾಸಿಕ್ಯೂಟ್ ಬಳಿ ಅಥವಾ 20 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ವಕೀಲರ ಬಳಿ ತರಬೇತಿಗೆ ನಿಯೋಜಿಸಲಾಗುವದು. ಆಯ್ಕೆಯಾದ ಅಭ್ಯರ್ಥಿಗಳು ಯಾವದೇ ಕಾರಣಕ್ಕೂ ತರಬೇತಿಯನ್ನು ಪೂರ್ಣಗೊಳಿಸದೆ ಬಿಟ್ಟು ಹೋಗಬಾರದು. ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರಿ ಸಿಕ್ಕಿದಲ್ಲಿ ಮಾತ್ರ ನಿಯಮಾನುಸಾರ ಸಡಿಲಗೊಳಿಸಲಾಗುವದು. ಒಂದು ವೇಳೆ ತರಬೇತಿ ಬಿಟ್ಟು ಹೋದಲ್ಲಿ ಅಂತವರ ಶಿಷ್ಯ ವೇತನವನ್ನು ನಿಯಮಾನುಸಾರ ವಸೂಲಿ ಮಾಡಲಾಗುವದು. ತರಬೇತಿ ಅವಧಿಯು 4 ವರ್ಷಗಳಾಗಿದ್ದು ಮಾಸಿಕ ರೂ. 5 ಸಾವಿರಗಳ ಶಿಷ್ಯವೇತನ ನೀಡಲಾಗುವದು.

ಅಭ್ಯರ್ಥಿಯು ಕಾನೂನು ಪದವಿಯಲ್ಲಿ ತೇರ್ಗಡೆ ಹೊಂದಿದ 3 ವರ್ಷದೊಳಗೆ ಬಾರ್‍ಕೌನ್ಸಿಲ್‍ನಲ್ಲಿ ಹೆಸರು ನೋಂದಾಯಿಸಿದ ನಂತರ ಶಿಷ್ಯವೇತನ ಮತ್ತು ಎನ್‍ರೋಲ್‍ಮೆಂಟ್ ಫೀಯನ್ನು ನೀಡಬೇಕು. ಸದಸ್ಯ ಕಾರ್ಯದರ್ಶಿಯು ಅಧ್ಯಕ್ಷರ ಪೂರ್ವಾನುಮತಿ ಪಡೆದು ಅಭ್ಯರ್ಥಿಯ ಶಿಷ್ಯವೇತನ ಸಂಬಂಧ ದೂರು ಬಂದಲ್ಲಿ ಅಥವಾ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿದ್ದಲ್ಲಿ ಮತ್ತು ತರಬೇತಿಗೆ ಮಾಹಿತಿ ನೀಡದೇ ಗೈರು ಹಾಜರಾದಲ್ಲಿ ತಡೆಯಬಹುದು. ಅಧ್ಯಕ್ಷರು ಈ ಬಗ್ಗೆ ಪರಿಶೀಲಿಸಿ ಅಭ್ಯರ್ಥಿಯ ಕಡೆ ಯಾವದೇ ಲೋಪವಿಲ್ಲವೆಂದು ಕಂಡುಬಂದಲ್ಲಿ ತಡೆ ಹಿಡಿದಿರುವ ಶಿಷ್ಯವೇತನವನ್ನು ಮರುಪಾವತಿಸಲು ಆದೇಶಿಸಬಹುದು. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಕಾನೂನು ಪದವೀಧರ ತರಬೇತಿಗೆ ಆಯ್ಕೆಯಾದ ಮಹಿಳಾ ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ಗರ್ಭಿಣಿ ಸ್ಥಿತಿಯಲ್ಲಿರುವ ವೇಳೆ ಮಹಿಳಾ ಅಭ್ಯರ್ಥಿಗಳಿಗೆ 135 ದಿನಗಳ ತರಬೇತಿ ಭತ್ಯೆ ರಹಿತ ರಜೆಯನ್ನು (4 ವರ್ಷಗಳ ತರಬೇತಿಗೆ 1 ಬಾರಿ ಮಾತ್ರ) ವೈದ್ಯಕೀಯ ಪ್ರಮಾಣ ಪತ್ರ ಪಡೆದು ರಜೆ ಮಂಜೂರುಗೊಳಿಸಿ ತರಬೇತಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಇಲಾಖಾ ವೆಬ್‍ಸೈಟ್‍ನಲ್ಲಿ ತಿತಿತಿ.sತಿ.ಞಚಿಡಿ.ಟಿiಛಿ.iಟಿ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ, ಮೈಸೂರು ಇವರ ಸಹಯೋಗದಲ್ಲಿ ಕೊಡಗು ಜಿಲ್ಲೆಯ ಪೆನ್‍ಶನ್ ಲೈನ್, ಪೊಲೀಸ್ ವಸತಿ ಗೃಹ ಸಂಖ್ಯೆ. 12/35, ಮಡಿಕೇರಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.

ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಗೌರವಧನ ಆಧಾರದ ಮೇಲೆ ಯೋಜನಾ ಸಂಯೋಜಕರು 1 ಹುದ್ದೆ ವಿದ್ಯಾರ್ಹತೆ ಸ್ನಾತಕೋತ್ತರ ಪದವಿ, ಕೌನ್ಸಿಲರ್/ ಸಮಾಜ ಸೇವಕರು 3 ಹುದ್ದೆ ವಿದ್ಯಾರ್ಹತೆ ಸ್ನಾತಕೋತ್ತರ ಪದವಿಯಲ್ಲಿ ಸಮಾಜ ಕಾರ್ಯ, ಕಚೇರಿ ಸೇವಕರು/ ಸ್ವಚ್ಛತಾಗಾರರು 1 ಹುದ್ದೆ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2 ವರ್ಷದ ಅನುಭವ ಹೊಂದಿರಬೇಕು.

ಸಂದರ್ಶನ ತಾ. 30 ರಂದು ನಡೆಯಲಿದೆ. ಅರ್ಜಿಯನ್ನು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಿಂದ ಪಡೆದು ಭರ್ತಿ ಮಾಡಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಪೆನ್‍ಶನ್ ಲೈನ್, ಪೊಲೀಸ್ ವಸತಿ ಗೃಹ ಸಂಖ್ಯೆ.12/35, ಮಡಿಕೇರಿಗೆ ಸಲ್ಲಿಸುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ.08272 221215, 1090, 9448425408, 9900667482 ನ್ನು ಸಂಪರ್ಕಿಸಬಹುದು.

ಕೈಮಗ್ಗ-ವಿದ್ಯುತ್ ಮಗ್ಗ ತರಬೇತಿಗೆ

ಸರ್ಕಾರವು ನೂತನ ಜವಳಿ ನೀತಿಯಡಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ 2018-19ನೇ ಸಾಲಿಗೆ ಸೀವಿಂಗ್ ಮೆಷಿನ್ ಆಪರೇಟರ್ (ಯಾಂತ್ರೀಕೃತ ಹೊಲಿಗೆ ತರಬೇತಿ) ಹಾಗೂ ಕೈಮಗ್ಗ/ ವಿದ್ಯುತ್ ಮಗ್ಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಸೀವಿಂಗ್ ಮಷಿನ್ ಆಪರೇಟರ್ ತರಬೇತಿಗೆ ಮಡಿಕೇರಿ, ಕುಶಾಲನಗರ, ಮೂರ್ನಾಡು, ಶನಿವಾರಸಂತೆ, ಸೋಮವಾರಪೇಟೆ, ಗೋಣಿಕೊಪ್ಪ ಹಾಗೂ ವೀರಾಜಪೇಟೆಯಲ್ಲಿರುವ ಇಲಾಖೆಯಿಂದ ಅನುಮೋದನೆಗೊಂಡಿರುವ ತರಬೇತಿ ಕೇಂದ್ರಗಳಲ್ಲಿ ಹಾಗೂ ಕೈಮಗ್ಗ ತರಬೇತಿಯನ್ನು ಕುಶಾಲನಗರ ಹಾಗೂ ಶಿರಂಗಾಲದಲ್ಲಿರುವ ತರಬೇತಿ ಕೇಂದ್ರಗಳಲ್ಲಿ, ವಿದ್ಯುತ್ ಮಗ್ಗ ತರಬೇತಿಯನ್ನು ಪೊನ್ನಂಪೇಟೆಯಲ್ಲಿರುವ ಕೇಂದ್ರದಲ್ಲಿ ಪಡೆಯಬಹುದಾಗಿದೆ. ತರಬೇತಿ ಪಡೆಯಲಿಚ್ಚಿಸುವ ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆಗಳು: ಮುಖ್ಯಮಂತ್ರಿಯವರ ಕೌಶಲ್ಯಾ ಕರ್ನಾಟಕ ಯೋಜನೆಯಡಿ ವಾಹಿನಿ-2 ರ ಕೈಮಗ್ಗ ಮತ್ತು ಜವಳಿ ಇಲಾಖೆಯನ್ನು ಸೇರಿಸಲಾಗಿದ್ದು ಎಲ್ಲಾ ಅನುಷ್ಠಾನಾಧಿಕಾರಿಗಳು ತಿತಿತಿ.ಞಚಿushಚಿಟಞಚಿಡಿ.ಛಿom ನಲ್ಲಿ ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುವದು. ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ದ್ವಿಪ್ರತಿಯಲ್ಲಿ ಸಲ್ಲಿಸತಕ್ಕದ್ದು, ಸೀವಿಂಗ್ ಮಷಿನ್ ಆಪರೇಟರ್ (ಎಸ್.ಎಂ.ಒ) ಮತ್ತು ಕೈಮಗ್ಗ ತರಬೇತಿಯು 45 ದಿನಗಳ ಅವಧಿಯಾಗಿದೆ, ತರಬೇತಿ ಪಡೆಯಲು ಅಭ್ಯರ್ಥಿಯು ಕನಿಷ್ಟ 5ನೇ ತರಗತಿ ಉತ್ತೀರ್ಣರಾಗಿರಬೇಕು, ಅಭ್ಯರ್ಥಿಯ ವಯಸ್ಸು 18 ರಿಂದ 35 ವರ್ಷದ ಒಳಪಟ್ಟಿದ್ದು ಸೂಕ್ತ ದಾಖಲೆಗಳನ್ನು ಒದಗಿಸತಕ್ಕದ್ದು, ಅಭ್ಯರ್ಥಿಗಳು ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಸಲ್ಲಿಸುವದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ನೀಡಬೇಕು. ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಕಡ್ಡಾಯವಾಗಿ ಆದಾಯ ದೃಢೀಕರಣ ಪತ್ರ ನೀಡಬೇಕು. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಪೂರ್ಣವಾದ ನಂತರ ರೂ. 3500 ಗಳ ಶಿಷ್ಯವೇತನವನ್ನು ನೀಡಲಾಗುವದು.

ತರಬೇತಿ ಪಡೆದ ಅಭ್ಯರ್ಥಿಗಳಿಗೆ ಶೇ. 100 ರಷ್ಟು ಸಿದ್ಧ ಉಡುಪು ತಯಾರಿಕಾ ಘಟಕ, ಕೈಮಗ್ಗ ಉತ್ಪನ್ನಗಳ ಘಟಕಗಳಲ್ಲಿ ಉದ್ಯೋಗ ಕಲ್ಪಿಸಿಕೊಡಲಾಗುವದು. ಅರ್ಜಿಗಳನ್ನು ಕಚೇರಿ ವೇಳೆಯಲ್ಲಿ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ ಕೊಹಿನೂರು ರಸ್ತೆ, ಮಡಿಕೇರಿ ಇವರ ಕಚೇರಿಯಲ್ಲಿ ಅಥವಾ ತರಬೇತಿ ಸಂಸ್ಥೆಗಳಲ್ಲಿ ಪಡೆಯಬೇಕು. ಅರ್ಜಿ ಸಲ್ಲಿಸಲು ಜುಲೈ 15 ಕೊನೆ ದಿನವಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ತಿಳಿಸಿದ್ದಾರೆ.

ಮಹಿಳಾ ಸಿಬ್ಬಂದಿ ನೇಮಕಕ್ಕೆ

ಜಿಲ್ಲೆಯಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು, ಕಾನೂನು ನೆರವು, ಸಮಾಲೋಚನೆ ಮತ್ತು ಮಹಿಳಾ ಸಹಾಯವಾಣಿ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆಯಲ್ಲಿ ಗೌರವಧನದ ಆಧಾರದ ಮೇಲೆ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ನೇಮಕಾತಿಯು 2018-19ನೇ ಸಾಲಿಗೆ ತಾತ್ಕಾಲಿಕವಾಗಿದ್ದು, 2019 ರ ಮಾರ್ಚ್ 31 ಕ್ಕೆ ಕೊನೆಗೊಳ್ಳುತ್ತದೆ. ಸಿಬ್ಬಂದಿಯ ವಿವರ; ಮಹಿಳಾ ಮತ್ತು ಆಪ್ತ ಸಮಾಲೋಚಕರು ಹುದ್ದೆ 1 ವಿದ್ಯಾರ್ಹತೆ ಎಂ.ಎಸ್.ಡಬ್ಲ್ಯೂ,ಎಂ.ಎ. (ಸೈಕಾಲಜಿ, ಸೋಷಿಯಾಲಜಿ) ಜೊತೆಗೆ ಕಂಪ್ಯೂಟರ್ ಜ್ಞಾನ ಒಂದು ವರ್ಷದ ಅನುಭವ, ಗೌರವಧನ ಮಾಸಿಕ 15 ಸಾವಿರ ರೂ., ಮಹಿಳಾ ಸಮಾಜಸೇವಾ ಕಾರ್ಯಕರ್ತರು ಹುದ್ದೆಯ ಸಂಖ್ಯೆ 2, ವಿದ್ಯಾರ್ಹತೆ ಬಿ.ಎಸ್.ಡಬ್ಲ್ಯೂ, ಬಿ.ಎ (ಸೈಕಾಲಜಿ), ಜೊತೆಗೆ ಕಂಪ್ಯೂಟರ್ ಜ್ಞಾನ ಒಂದು ವರ್ಷದ ಅನುಭವ ಹಾಗೂ ರಾತ್ರಿ ಪಾಳಿಯಲ್ಲಿ ಸದರಿ ಮೇಲೆ ಕೆಲಸ ನಿರ್ವಹಿಸಲು ಸಿದ್ಧರಿರಬೇಕು. ಗೌರವಧನ 10 ಸಾವಿರ ರೂ.

ಮಹಿಳಾ ಕಾನೂನು ಸಲಹೆಗಾರರು ಹುದ್ದೆಯ ಸಂಖ್ಯೆ 1 ವಿದ್ಯಾರ್ಹತೆ ಪದವಿ/ಎಲ್.ಎಲ್.ಬಿ (ಅರೆಕಾಲಿಕ) ಗೌರವಧನ ಮಾಸಿಕ 5 ಸಾವಿರ ರೂ. ಅರ್ಜಿದಾರರು ಅರ್ಜಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ಜೂನ್ 30 ರೊಳಗೆ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್ ಬಳಿ, ಮೈಸೂರು ರಸ್ತೆ. ಮಡಿಕೇರಿ (ದೂರವಾಣಿ; 08272-228010) ಕಚೇರಿಗೆ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಸ್ವಾಮಿ ಅವರು ತಿಳಿಸಿದ್ದಾರೆ.

ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ

ಪ್ರಸಕ್ತ (2018-19) ಸಾಲಿಗೆ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 2ಬಿ, 3ಎ ಹಾಗೂ 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಗಳಿಗೆ ಸೇರಿದ ಅರ್ಹ ಅಭ್ಯಥಿರ್üಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ-1 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ರೂ.2.50 ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ರೂ.1 ಲಕ್ಷ ಒಳಗಿರಬೇಕು.

ವಿದ್ಯಾರ್ಥಿಗಳು ಕಡ್ಡಾಯವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 20 ಆಗಿದ್ದು ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್‍ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ಅನ್ನು ನೋಡುವದು. ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆಗಳಾದಲ್ಲಿ bಛಿತಿhosಣeಟಚಿಜmissioಟಿ @gmಚಿiಟ.ಛಿom ಗೆ ಇ-ಮೇಲ್ ಮುಖಾಂತರ ದಾಖಲೆಗಳೊಂದಿಗೆ ಸಂಪರ್ಕಿಸುವದು. ಸಹಾಯವಾಣಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ; 080-65970006. ಹೆಚ್ಚಿನ ಮಾಹಿತಿಗಾಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ದೂರವಾಣಿ ಸಂಖ್ಯೆ, ಮಡಿಕೇರಿ ತಾಲೂಕು 9448205919. ಕಚೇರಿ; 08272-298037, ವೀರಾಜಪೇಟೆ ತಾಲೂಕು 9448205919. ಕಚೇರಿ; 08272-249211. ಸೋಮವಾರಪೇಟೆ ತಾಲೂಕು 9481772143. ಕಚೇರಿ; 08272-284820, ಜಿಲ್ಲಾ ಕಚೇರಿ 08272-225628 ಸಂಪರ್ಕಿಸಬಹುದಾಗಿದೆ.