ಬೆಟ್ಟಗೇರಿ ಕುಂಬಾರಕೊಪ್ಪಲು ನಿವಾಸಿ ದಿ. ಹೆಚ್.ಎ. ಸುಬ್ಬಯ್ಯ ಅವರ ಧರ್ಮಪತ್ನಿ ಜಾನಕಿ (80) (ಮಾಜಿ ಅಂಗನವಾಡಿ ಕಾರ್ಯಕರ್ತೆ) ತಾ. 1 ರಂದು ನಿಧನರಾದರು. ಮೃತರು ಮೂವರು ಪುತ್ರರನ್ನು ಅಗಲಿದ್ದಾರೆ.

ಟಮೂಲತಃ ಕಿರುಂದಾಡು ನಿವಾಸಿ, ನಾಳಿಯಂಡ ದಿ. ಬೋಪಯ್ಯ ಅವರ ಪತ್ನಿ ಪೊನ್ನಮ್ಮ (ಕಾಳವ್ವ-98) ಅವರು ತಾ. 3 ರಂದು ಮಡಿಕೇರಿಯಲ್ಲಿ ನಿಧನರಾದರು. ಮಡಿಕೇರಿಯ ಹೊಸಬಡಾವಣೆ (ಸಬ್ ರಿಜಿಸ್ಟ್ರಾರ್) ರಸ್ತೆಯಲ್ಲಿರುವ ಮೃತರ ಸಹೋದರ ಪೊನ್ನಚ್ಚಂಡ ಕರ್ನಲ್ ನಾಣಯ್ಯ (ರಘು) ಅವರ ಮನೆಯಲ್ಲಿ ಅಂತಿಮ ದರ್ಶನದ ಬಳಿಕ ತಾ. 4 ರಂದು (ಇಂದು) 11.30ಕ್ಕೆ ಮಡಿಕೇರಿ ಕೊಡವ ಸಮಾಜದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.