ಕೂಡಿಗೆ, ಜು. 3: ಸಮೀಪದ ಕಣಿವೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದ ಪದ್ಮಾವತಿ ನಿವೃತ್ತಿ ಹೊಂದಿದ ಹಿನ್ನೆಲೆ ಕಣಿವೆ, ಹುಲುಸೆ ವ್ಯಾಪ್ತಿಯ ಸ್ತ್ರೀ ಶಕ್ತಿ, ಸ್ವ ಸಹಾಯ ಗುಂಪುಗಳ ಮಹಿಳೆಯರು ಅಂಗನವಾಡಿ ಆವರಣದಲ್ಲಿ ಗೌರವಿಸಿ, ಬೀಳ್ಕೊಟ್ಟರು.
ಈ ಸಂದರ್ಭ ಸ್ತ್ರೀ ಶಕ್ತಿ, ಸ್ವ ಸಹಾಯ ಗುಂಪುಗಳ ಸದಸ್ಯರು, ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್, ಗ್ರಾಮದ ಮುಖಂಡ ಕೃಷ್ಣಮೂರ್ತಿ, ನಾಗರಾಜಶೆಟ್ಟಿ, ಪ್ರಶಾಂತ್ ಇದ್ದರು.