ಮಡಿಕೇರಿ, ಜು. 4: ಬಹುಜನ ಸಮಾಜ ಪಾರ್ಟಿಯ ನೂತನ ಜಿಲ್ಲಾಧ್ಯಕ್ಷರಾಗಿ ಸಿ.ಜೆ. ಮೋಹನ್ ಮೌರ್ಯ ಹಾಗೂ ಉಪಾಧ್ಯಕ್ಷರಾಗಿ ಜಯಪ್ಪ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಕುಂಞ, ಕಾರ್ಯದರ್ಶಿಯಾಗಿ ಮೊಣ್ಣಪ್ಪ, ಖಜಾಂಚಿಯಾಗಿ ದಿಲೀಪ್ ಕುಮಾರ್ ಅವರನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅರಕಲವಾಡಿ ನಾಗೇಂದ್ರ, ಮಾದೇಶ್‍ಉಪ್ಪರ್, ವಲಯ ಉಸ್ತುವಾರಿ ಸೋಸಲೆ ಸಿದ್ಧರಾಜು, ವಿಭಾಗ ಉಸ್ತುವಾರಿಗಳಾದ ಅಮೃತ್ ಅತ್ರಡಿ ಮತ್ತು ರಾಹುಲ್ ಇವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

ಬಿಎಸ್‍ಪಿಯ ವಿವಿಧ ಘಟಕಗಳನ್ನು ಸದ್ಯದಲ್ಲಿಯೇ ರಚಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವದೆಂದು ಜಿಲ್ಲಾಧ್ಯಕ್ಷ ಸಿ.ಜೆ. ಮೋಹನ್ ಮೌರ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.