ಮಡಿಕೇರಿ, ಜು. 4: ದೇಶದ ಮೋದಿ ಸರಕಾರ ಬಂಪರ್ ಉಡುಗೊರೆ ಕೊಟ್ಟಿದೆ. ಭತ್ತ, ರಾಗಿ, ಜೋಳ ಸೇರಿದಂತೆ ಮುಂಗಾರು ಸಮಯದ 14 ಬೆಳೆಗಳಿಗೆ ಕೇಂದ್ರದಿಂದ ಕನಿಷ್ಟ ಬೆಂಬಲ ಬೆಲೆ ನಿಗದಿಯಾಗಿದೆ. ಕೆಲ ಬೆಳೆಗಳಿಗೆ ಈಗಿರುವ ಕನಿಷ್ಟ ಬೆಂಬಲ ಬೆಲೆಯನ್ನು ಏರಿಕೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ನವದೆಹಲಿಯಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಬೆಳೆಗಳಿಗೆ ಹೊಸ ಬೆಂಬಲ ಬೆಲೆ
ಭತ್ತಕ್ಕೆ ಹಿಂದಿನದರ 1550 ರೂ. ಬದಲಾಗಿ 1750 ರೂ. ಹೊಸ ದರ ದೊಂದಿಗೆ ಶೇ. 12.9 ಹೆಚ್ಚಿಸಲಾಗಿದೆ. ರಾಗಿಗೆ 1900 ರೂ.ಗೆ ಬದಲಾಗಿ 2897 ರೂ.ನೊಂದಿಗೆ ಶೇ. 52.0 ಏರಿಸಲಾಗಿದೆ. ತೊಗರಿ ಬೇಳೆಗೆ 5450 ರೂ. ಗಿಂತ 5675 ರೂ.ನೊಂದಿಗೆ ಶೇ. 04.1 ಹೆಚ್ಚಿಸಿದೆ. ಹೆಸರುಬೇಳೆ ಈಗಿನಂತೆ 5575 ರೂ. ಬದಲು 6975 ರೂ.ಗಳಂತೆ ಶೇ 25.1 ಏರಿಸಿದೆ.
ಉದ್ದಿನ ಬೇಳೆಗೆ 5400 ರೂ. ಬದಲು 5600 ರೂ.ನಂತೆ ಶೇ. 03.7 ಹೆಚ್ಚಿಸಿದೆ. ಕಡ್ಲೆಬೀಜಕ್ಕೆ 4450 ರೂ.ಗಿಂತ 4890 ರೂ. ಏರಿಸಿ ಶೇ. 09.9 ಹೆಚ್ಚಿಸಿದೆ. ಎಳ್ಳು 5300 ರೂ.ಗಿಂತ 6249 ರೂ. ಹೆಚ್ಚಿಸಿ ಶೇ. 17.7 ನಿಗದಿಗೊಳಿಸಿದೆ. ಜೋಳ (ಹೈಬ್ರೀಡ್)ಗೆ 1700 ರೂ. ಬದಲು 2430 ರೂ. ನೊಂದಿಗೆ ಶೇ. 42.9 ಏರಿಸಿದೆ. ಜೋಳ (ಮಾಲ್ಕಂಡಿ)ಗೆ 1725 ರೂ. ಬದಲು 2450 ರೂ. ಏರಿಕೆ ಮಾಡಿ ಶೇ. 42.0 ಘೋಷಿಸಿದೆ.
ಸೂರ್ಯಕಾಂತಿ ಬೆಳೆಗೆ 4100 ರೂ. ಬದಲು 5388 ರೂ. ನಂತೆ ಶೇ. 31.4 ಹೆಚ್ಚಿಸಲಾಗಿದೆ. ಮಕ್ಕೆಜೋಳಕ್ಕೆ 1425 ರೂ.ಕ್ಕಿಂತ 1950 ನಂತೆ ಶೇ. 36.8 ಏರಿಸಲಾಗಿದೆ. ಸೊಯಾಬಿನ್ಗೆ 3050 ರೂ.ಗಿಂತ 3399 ನಂತೆ ಶೇ. 11.4 ಏರಿಸಿದೆ. ವೈಗರ್ಗೆ 4050 ರೂ. ಬದಲು 5877 ರೂ. ಹೆಚ್ಚಿಸಿ ಶೇ. 45.1 ನಿಗದಿಪಡಿಸಿದೆ. ಬಾಜ್ರಾಗೆ 1425ರೂ. ಗಿಂತ 1950 ರೂ. ನಂತೆ ಶೇ. 36.8 ಏರಿಸಲಾಗಿದೆ. ಹತ್ತಿ ಬೀಜ (ಸಣ್ಣದು)ಗೆ 4020 ರೂ. ಬದಲು 5150 ರೂ. ನಂತೆ ಶೆ. 28.1 ನಿಗದಿಯಾಗಿದೆ. ಹತ್ತಿಬೀಜ (ಹೈಬ್ರೀಡ್)ಗೆ 4320 ರೂ.ಗಿಂತ 5450 ರೂ. ಏರಿಸಿ ಶೇ. 26.2 ನಿಗದಿಪಡಿಸಲಾಗಿದೆ.
ಒಟ್ಟಿನಲ್ಲಿ ಕೇಂದ್ರ ಸರಕಾರದ ಈ ಕೊಡುಗೆ ಕೊಡಗಿನ ಕಾಫಿ ಸೇರಿದಂತೆ ಇತರ ಬೆಳೆಗಾರರಿಗೆ ನಿರಾಶೆ ಮೂಡಿಸಿದೆಯಾದರೂ ರೈತ ಸಮೂಹದಲ್ಲಿ ಹರ್ಷ ತರಲಿದೆ.