ಮಡಿಕೇರಿ, ಜು. 4: ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಗಳಲ್ಲಿ ಹಿಂದಿನ ರೂಢಿಗಳಂತೆ ಮತ್ತು ಪರಂಪರಾಗತವಾಗಿ ಮುಂದುವರೆಸಿಕೊಂಡು ಬಂದಿರುವ ಕಾರ್ಯಕ್ರಮಗಳನ್ನು ಪಾಲಿಸಿಕೊಂಡು ಮುನ್ನಡೆಯುವ ಬಗ್ಗೆ, ಇಂದು ನಡೆದ ದೇವಾಲಯ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ತಲಕಾವೇರಿ - ಭಾಗಮಂಡಲ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಸಭೆಯು ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಈಚೆಗೆ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಅಷ್ಟಮಂಗಲ ಪ್ರಶ್ನೆಯಲ್ಲಿ ಗೋಚರಿಸಿರುವ, ಪ್ರಶ್ನೆ ಫಲಗಳ ಕುರಿತು ಅಧ್ಯಕ್ಷರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಸರ್ವ ಸದಸ್ಯರಿಗೆ ಗಮನಿಸಬೇಕಾದ ಅಂಶಗಳ ಕುರಿತು ಉಲ್ಲೇಖಿಸಿದರು. ರೂಢಿಯಲ್ಲಿರುವಂತೆ ದೇವಾಲಯದ ತಕ್ಕ ಮುಖ್ಯಸ್ಥರು ಮತ್ತು ಅರ್ಚಕ ಕುಟುಂಬಗಳ ಪೂಜಾ ಕ್ರಮದೊಂದಿಗೆ ಹೊಣೆಗಾರಿಕೆ ಸಂಬಂಧ ವಿಸ್ತøತ ಚರ್ಚೆ ನಡೆಸಲಾಯಿತು.
ಪ್ರಸಕ್ತ ವ್ಯವಸ್ಥಾಪನಾ ಸಮಿತಿಯು ಯಾವದೇ ಹೊಸ ತೀರ್ಮಾನಗಳನ್ನು ಕೈಗೊಳ್ಳದೆ, ಇರುವ ವ್ಯವಸ್ಥೆಗಳನ್ನು ಕ್ಷೇತ್ರದ ಶ್ರೇಯಸ್ಸು ಹಾಗೂ ಭಕ್ತರ ಅಭಿಲಾಷೆಗಳಿಗೆ ಪೂರಕವಾಗಿ ನಿರ್ವಹಿಸುವ ದಿಸೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪರಸ್ಪರ ಸಮಾಲೋಚಿಸಲಾಯಿತು.
ಒಂದು ಹಂತದಲ್ಲಿ ಅಧ್ಯಕ್ಷರು, ಅಷ್ಟಮಂಗಲ ಸಂಬಂಧ ಕೆಲವರು ಇಲ್ಲಸಲ್ಲದ ಟೀಕೆಯೊಂದಿಗೆ ಸರಕಾರದ ಹಂತಕ್ಕೆ ದೂರು ಸಲ್ಲಿಸಿರುವ ಬಗ್ಗೆ ಬೊಟ್ಟು ಮಾಡುತ್ತಾ, ಭವಿಷ್ಯದಲ್ಲಿ ಕ್ಷೇತ್ರದಲ್ಲಿ ಅಷ್ಟಮಂಗಲದಲ್ಲಿ ಗೋಚರಿಸಿರುವಂತೆ ದೇವಾಲಯ ಬ್ರಹ್ಮಕಲಶೋತ್ಸವ ನಡೆಸಲು ಎಲ್ಲರ ಸಹಕಾರ ಅಗತ್ಯವೆಂದು ನೆನಪಿಸಿದರು.
ಆ ದಿಸೆಯಲ್ಲಿ ಕ್ಷೇತ್ರದ ತಂತ್ರಿಗಳು ಹಾಗೂ ವಾಸ್ತು ಶಿಲ್ಪಿಗಳ ಮಾರ್ಗದರ್ಶನದಂತೆ ಸಮಿತಿಯು ಕಾರ್ಯ ನಿರ್ವಹಿಸಬೇಕಾದ ಅವಶ್ಯಕತೆ ಬಗ್ಗೆ ಉಲ್ಲೇಖಿಸಿದರು.
ಬ್ರಹ್ಮಗಿರಿ ಪ್ರವೇಶ: ಬ್ರಹ್ಮಗಿರಿ ಬೆಟ್ಟ ಏರುವ ವಿಷಯವಾಗಿ ಯಾವದೇ ಜಾತಿ, ಲಿಂಗ ಬೇಧವಿಲ್ಲದೆ ರೂಢಿಯಲ್ಲಿರುವ ಪದ್ಧತಿ - ಪರಂಪರೆಗಳನ್ನು
(ಮೊದಲ ಪುಟದಿಂದ) ಮುಂದುವರೆಸಲಾಗುವದು ಎಂಬ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು, ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಷ್ಟಮಂಗಲದಲ್ಲಿ ಗೋಚರಿಸಿರುವಂತೆ ಎಲ್ಲಾ ದೋಷಗಳ ಪರಿಹಾರಕ್ಕೂ ಸಮಿತಿ ನಿರ್ಧಾರ ಕೈಗೊಂಡಿತು.
ಭಾಗಮಂಡಲದಲ್ಲಿ ನಾಗ ಸನ್ನಿಧಿ ಹಾಗೂ ವೀರಭದ್ರ ನೆಲೆಯನ್ನು ಭಕ್ತರ ಸೇವೆಗೆ ಅನುಕೂಲವಾಗುವಂತೆ ಸಂಗಮ ತಟದ ಬಳಿ ಕಲ್ಪಿಸುವದು, ಆಶ್ಲೇಷ ಬಲಿ ಸೇವೆಗೆ ಕ್ರಮ ವಹಿಸುವದು ಸೇರಿದಂತೆ, ಕ್ಷೇತ್ರದ ಧಾರ್ಮಿಕ ವಿಧಿ ವಿಧಾನಗಳು ಮತ್ತು ಪೂಜಾ ಕ್ರಮಗಳನ್ನು ನಿತ್ಯ, ನೈಮಿತ್ತಿಕವಾಗಿ ನಿರ್ವಹಿಸಲು ದೃಢ ನಿರ್ಧಾರ ಕೈಗೊಳ್ಳಲಾಯಿತು.
ಪ್ರಮುಖರ ಸಭೆ : ಇಂದು ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ, ಕ್ಷೇತ್ರದ ಅಭಿವೃದ್ಧಿ ಸಂಬಂಧ ಭಾಗಮಂಡಲ - ತಲಕಾವೇರಿ ಸುತ್ತಮುತ್ತಲಿನ ತಣ್ಣಿಮಾನಿ, ಚೇರಂಗಾಲ, ಕೋರಂಗಾಲ, ತಾವೂರು ಗ್ರಾಮ ದೇವಾಲಯಗಳ ತಕ್ಕ ಮುಖ್ಯಸ್ಥರು ಹಾಗೂ ಸಮಿತಿ ಪ್ರಮುಖರುಗಳ ಪ್ರತ್ಯೇಕ ಸಭೆ ನಡೆಸಲಾಯಿತು.
ಸಭೆಯಲ್ಲಿ ಪ್ರಮುಖರಾದ ಹೊಸೂರು ಸತೀಶ್ ಜೋಯಪ್ಪ, ಕುದುಪಜೆ ಪ್ರಕಾಶ್, ನಂಗಾರು ಪುರುಷೋತ್ತಮ, ಸೂರ್ತಲೆ ಜಯಂತ್, ದಂಡಿನ ರಾಮಪ್ಪ, ಬಾರಿಕೆ ವೆಂಕಟರಮಣ ಮೊದಲಾದವರು ಪಾಲ್ಗೊಂಡಿದ್ದರು. ತಲಕಾವೇರಿ - ಭಾಗಮಂಡಲ ಕ್ಷೇತ್ರಗಳ ಅಭಿವೃದ್ಧಿ ಸಹಿತ ಎಲ್ಲಾ ದೇವತಾ ಕೈಂಕರ್ಯಗಳಿಗೆ ಮೇಲಿನ ಗ್ರಾಮಸ್ಥರು ಸಹಯೋಗ ನೀಡುವದಾಗಿ ಪ್ರಮುಖರು ಸಭೆಯಲ್ಲಿ ಭರವಸೆ ನೀಡಿದರು.
ಆ ಬಳಿಕ ನಡೆದÀ ವ್ಯವಸ್ಥಾಪನಾ ಸಮಿತಿಯ ಸಭೆಯಲ್ಲಿ ತುಲಾ ಸಂಕ್ರಮಣ ಜಾತ್ರೆ ವೇಳೆ ಅನುಸರಿಸಬೇಕಾದ ಪೂರ್ವ ಸಿದ್ಧತೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಸಮಾಲೋಚಿಸಲಾಯಿತು. ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಸಮಿತಿ