ಮಡಿಕೇರಿ, ಜು. 4: ಕಳೆದ ಮೂರ್ನಾಲ್ಕು ದಿನಗಳಿಂದ ನಗರದ ಮೂರ್ನಾಡು ರಸ್ತೆಯ ಸುತ್ತಮುತ್ತ ಸುಳಿದಾಡುತ್ತಿದ್ದ ಎರಡು ಗಂಡಾನೆಗಳನ್ನು ಇಂದು ಅರಣ್ಯ ಇಲಾಖೆಯು ಹರಸಾಹಸದೊಂದಿಗೆ, ಕಾಡಿನತ್ತ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಮುಂದುವರಿಸಿದೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ನಗರ ಜಿಲ್ಲಾ ಆಸ್ಪತ್ರೆಯ ಶವಾಗಾರದಿಂದ ಅನತಿ ದೂರದಲ್ಲಿ ಈ ಗಂಡಾನೆ ಜೋಡಿ ಇರುವ ಬಗ್ಗೆ ಅರಣ್ಯ ಇಲಾಖೆಗೆ ವಿಷಯ ಮುಟ್ಟಿತ್ತು.
ಆ ಬೆನ್ನಲ್ಲೇ 20 ರಿಂದ 25 ಮಂದಿ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸುವದರೊಂದಿಗೆ, ಮೇಕೇರಿ ಬಳಿಯ ಶಾಂತಿ ಎಸ್ಟೇಟ್ನತ್ತ ನುಸುಳಿದ್ದ ಆನೆಗಳನ್ನು ಪಟಾಕಿ ಸಿಡಿಸಿ ಹಿಮ್ಮೆಟ್ಟಿಸಿದೆ. ಮುಂದುವರಿದ ಪ್ರಯತ್ನದಲ್ಲಿ ಸಂಜೆಯ ವೇಳೆಗೆ ನಗರ ಪ್ರದೇಶದಿಂದ ಹಿಮ್ಮೆಟ್ಟಿಸಿ, ಚೆಟ್ಟಳ್ಳಿ ಮಾರ್ಗದ ಅಭ್ಯಾಲದತ್ತ ಸೇರಿಸುವಲ್ಲಿ ಯಶಸ್ವಿಯಾಗಿದೆ.
ಈ ಮೊದಲು ತಿಂಗಳುಗಳ ಹಿಂದೆ ನಗರದ ಮ್ಯಾನ್ಸ್ ಕಾಂಪೌಂಡ್ನಲ್ಲಿ ಕಾಣಿಸಿಕೊಂಡು ಚೈನ್ಗೇಟ್ ಮೂಲಕ ಕಾಡಿಗಟ್ಟಿದ ಈ ಜೋಡಿಯಾನೆಗಳೇ