ಮಡಿಕೇರಿ, ಜು. 4: ಸುಂಟಿಕೊಪ್ಪದ ಸಯ್ಯಿದ್ ಮುಹಮ್ಮದ್ ಆಲಿ ಶಿಹಾಬ್ ತಂಙಳ್ ಜೂನಿಯರ್ ಶರೀಅತ್ ಕಾಲೇಜಿನ ಅಧೀನ ದಲ್ಲಿ ಖುರಾನ್‍ನನ್ನು ಸಂಪÀÇರ್ಣ ಕಂಠಪಾಠ ಮಾಡುವ ಕೋರ್ಸ್ ಅನ್ನು ಪ್ರಾರÀಂಭಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭ ತಾ. 15 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜು ಸಮಿತಿಯ ಕಾರ್ಯದರ್ಶಿ ಸಿ.ಎಂ.ಹಮೀದ್ ಮಾಲವಿ, ಅಂದು ಸಂಜೆ 7 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ಮಾಜಿ ಶಾಸಕರಾದ ಕೆ.ಎಂ. ಇಬ್ರಾಹಿಂ ಅವರ ಅಧ್ಯಕ್ಷತೆ ಯಲ್ಲಿ ನಡೆಯಲಿರುವ ಸಮಾರಂಭ ವನ್ನು ಗುರುಗಳಾದ ಸೈಯ್ಯದ್ ಸಫುಆನ್ ಅಲ್ ಬುಖಾರಿ ಉದ್ಘಾಟಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಉಪ ಖಾಝಿ ಅಬ್ದುಲ್ಲ ಫೈಝಿ, ಸಮಸ್ತ ವಿದ್ಯಾಭ್ಯಾಸ ಬೋರ್ಡ್‍ನ ಕೇಂದ್ರÀ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಕೊಡಗು ಜಿಲ್ಲಾ ಮದ್ರಸ ಆಡಳಿತ ಮಂಡಳಿ ಅಧ್ಯಕ್ಷ ಉಸ್ಮಾನ್ ಹಾಜಿ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ.ಯಾಕೂಬ್ ಬಜೆಗುಂಡಿ, ಶಂಸುಲ್ ಉಲೆಮಾ ಎಜುಕೇಷನ್ ಟ್ರಸ್ಟ್‍ನ ಅಧ್ಯಕ್ಷ ಬಷೀರ್ ಹಾಜಿ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು.

ಖುರಾನ್ ಕಂಠಪಾಠದ ಕೋರ್ಸ್‍ನಲ್ಲಿ ಐದನೇ ತರಗತಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಐದು ವರ್ಷಗಳ ಕೋರ್ಸ್ ಪÀÇರ್ಣ ಗೊಳಿಸಿದ ವಿದ್ಯಾರ್ಥಿಗೆ ‘ಹಾಫಿಳ್’ ಬಿರುದನ್ನು ನೀಡಲಾಗುತ್ತದೆ. ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನಿಡುವದರೊಂದಿಗೆ, 10ನೇ ತರಗತಿ ಪರೀಕ್ಷೆ ತೆಗೆದುಕೊಳ್ಳುವ ಅವಕಾಶವನ್ನು ಮಕ್ಕಳಿಗೆ ಕಲ್ಪಿಸಲಾಗುತ್ತದೆ ಮತ್ತು ಇದರಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಶರೀಅತ್ ಕಾಲೇಜಿನಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಪಿಯುಸಿ, ಮೈಸೂರು ವಿವಿಗೆ ಒಳಪಟ್ಟಂತೆ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತದೆ. ಇದೇ ಅವಧಿಯಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆÉೀರಳದ ಪಟ್ಟಿಕಾಡ್ ಜಾಮಿಯಾ ನೂರಿಯಾ ಕಾಲೇಜಿನಿಂದ ‘ಫೈಝಿ’ ಬಿರುದನ್ನು ಪ್ರದಾನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಲೌಕಿಕ ಶಿಕ್ಷಣದಲ್ಲಿ ಸಾಧನೆ- ಸುಂಟಿಕೊಪ್ಪ ಶರೀಅತ್ ಕಾಲೇಜಿನಲ್ಲಿ ಪ್ರಸ್ತುತ 60 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಪಿಯುಸಿ ಪರೀಕ್ಷೆಯಲ್ಲಿ ಕಾಲೆÉೀಜಿನ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಯಾಗಿರುವದಲ್ಲದೆ, ಹಲವು ವಿದ್ಯಾರ್ಥಿಗಳು 500 ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು ಉನ್ನತ ಸಾಧನೆ ಮಾಡಿದ್ದಾರೆ. ರಾಜ್ಯದ 27 ಕಾಲೇಜುಗಳಲ್ಲಿ ಪರೀಕ್ಷಾ ಫಲಿತಾಂಶ ಶೂನ್ಯವಾಗಿದ್ದು, ನಮ್ಮ ಶರೀಅತ್ ಕಾಲೇಜಿನಲ್ಲಿ ಧಾರ್ಮಿಕ ಶಿಕ್ಷಣ ದೊಂದಿಗೆ ಲೌಕಿಕ ಶಿಕ್ಷಣದಲ್ಲೂ ಉನ್ನತ ಸಾಧನೆಯನ್ನು ಮಾಡಲಾಗುತ್ತಿದೆಯೆಂದು ತಿಳಿಸಿದರು.

ಶರೀಅತ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ, ಕನ್ನಡ, ಇಂಗ್ಲೀಷ್, ಅರಬಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಭಾಷಣ ಮಾಡಲು ತರಬೇತಿಯನ್ನು ನೀಡಲಾಗುತ್ತಿದೆ. ವಾರಕ್ಕೊಂದು ಬಾರಿ ದೇಶ ಸೇವೆ ಮತ್ತು ಸಮಾಜ ಸೇವೆಗಳ ಬಗ್ಗೆ ತರಬೇತಿ, ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವೂ ನಡೆಯುತ್ತಿದೆಯೆಂದು ತಿಳಿಸಿದರು. ಗೋಷ್ಠಿಯಲ್ಲಿ ಕಾಲೇಜಿನ ಅಧ್ಯಕ್ಷ ವೈ.ಎಂ. ಉಮ್ಮರ್ ಫೈಝಿ, ಉಪಾಧ್ಯಕ್ಷ ಎಫ್.ಎ. ಮುಹಮ್ಮದ್ ಹಾಜಿ, ಸದಸ್ಯ ಇಕ್ಬಾಲ್ ಮೌಲವಿ, ಸಲಹೆಗಾರ ಮಜೀದ್ ಬಾಖವಿ ಹಾಗೂ ಉಪನ್ಯಾಸಕ ಆಸಿಫ್ ನದ್ವಿ ಉಪಸ್ಥಿತರಿದ್ದರು.