ಚೆಟ್ಟಳ್ಳಿ, ಜು. 4: ಕಳೆದ ಮೇ 23ರಂದು ತಲಕಾವೇರಿಯಲ್ಲಿ ನಡೆದ ಕೇರಳದ ನಾರಾಯಣ ಪೊದುವಾಳ್ ಜ್ಯೋತಿಷಿಗಳ ನೇತೃತ್ವದಲ್ಲಿ ನಡೆದ ಅಷ್ಟಮಂಗಲ ಕಾರ್ಯಕ್ರಮದ ಚರ್ಚಾ ವರದಿಯನ್ನು ರಾಜ್ಯ ಮಟ್ಟದ ಪತ್ರಿಕೆಯೊಂದು (ಬ್ರಹ್ಮಗಿರಿ ಬೆಟ್ಟಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧ) ಎಂದು ವರದಿ ಮಾಡಿದ್ದು, ಆ ವರದಿಯ ಆಧಾರದ ಮೇಲೆ ಮಾನವ ಹಕ್ಕುಗಳ ಆಯೋಗವು ಜಿಲ್ಲಾಧಿಕಾರಿ ಮತ್ತು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನು ಆಯೋಗದ ಮುಂದೆ ಬಂದು ತಮ್ಮ ಸಮಜಾಯಿಷಿಕೆ ತಿಳಿಸಲು ನೋಟೀಸ್ ಜಾರಿ ಮಾಡಿ ಕೇಳಿಕೊಂಡಿತ್ತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಆಯೋಗಕ್ಕೆ ತಮ್ಮ ವಕೀಲರ ಮೂಲಕ ಅಷ್ಟಮಂಗಲ ಪ್ರಶ್ನೆಯಲ್ಲಿ ನಡೆದ ಚರ್ಚೆಯ ವಾಸ್ತವಾಂಶವನ್ನು ಮತ್ತು ಯಾವದೇ ಲೋಪವಿದ್ದಲ್ಲಿ ಅದನ್ನು ವ್ಯವಸ್ಥಾಪನಾ ಸಮಿತಿಯು ಕ್ಷೇತ್ರದ ತಂತ್ರಿ ಮತ್ತು ಜಿಲ್ಲಾಧಿಕಾರಿಗಳ ಒಪ್ಪಿಗೆಯ ಮೂಲಕವೇ ಅನುಷ್ಠಾನಗೂಳಿಸಲಾಗುವದೆಂದು ಮಾಹಿತಿ ನೀಡಿದ್ದರು. ತಕ್ಷಣ ಯಾವದೇ ಕಾರ್ಯವನ್ನು ಅನುಷ್ಠಾನಗೊಳಿಸಿಲ್ಲವೆಂದು ಆಯೋಗಕ್ಕೆ ವರದಿ ಸಲ್ಲಿಸಿದ್ದರು. ಆಯೋಗವು ವ್ಯವಸ್ಥಾಪನಾ ಸಮಿತಿಯ ವರದಿಯ ಆಧಾರದ ಮೇಲೆ ವ್ಯವಸ್ಥಾಪನಾ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮತ್ತು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಮೇಲಿದ್ದ ಪ್ರಕರಣವನ್ನು ಮಾನ್ಯ ಮಾಡಿ ಆದೇಶ ಹೊರಡಿಸಿದೆ.