ಮಡಿಕೇರಿ, ಜು. 4: ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಲೇಖಕಿಯರಿಗೆ ರಾಜ್ಯಮಟ್ಟದ ಅನುವಾದ ಕಮ್ಮಟವನ್ನು ಏರ್ಪಡಿಸಿದೆ. ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಸಹಯೋಗದೊಂದಿಗೆ ತಾ. 21 ರಿಂದ 23 ರವರೆಗೆ ಮೂರು ದಿನಗಳು ಆಯೋಜಿಸಲ್ಪಟ್ಟಿದೆ. ಇದು ರಾಜ್ಯ ಮಟ್ಟದಲ್ಲಿ ಲೇಖಕಿಯರಿಗಾಗಿ ನಡೆಸುವ ವಿಶೇಷ ಶಿಬಿರವಾಗಿದ್ದು, ಅನುವಾದ ಸಾಹಿತ್ಯ ರಚನೆಯಲ್ಲಿ ತೊಡಗಿರುವ, ಅನುವಾದ ಸಾಹಿತ್ಯದಲ್ಲಿ ಆಸಕ್ತಿಯುಳ್ಳ ಲೇಖಕಿಯರು ಭಾಗವಹಿಸಬಹುದಾಗಿದೆ.

ಶಿಬಿರವು ತುಮಕೂರಿನಲ್ಲಿ ಮೂರು ದಿನಗಳ ಕಾಲ ನಡೆಯುವ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಉಚಿತ ಊಟ, ವಸತಿ, ಸಾರಿಗೆ ವೆಚ್ಚವನ್ನು ನೀಡಲಾಗುವದು. ಶಿಬಿರದಲ್ಲಿ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಪ್ರಾತ್ಯಕ್ಷಿಕೆ ನೀಡಲಾಗುವದು. ಹಾಜರಾತಿ ಪ್ರಮಾಣ ಪತ್ರವನ್ನೂ ನೀಡಲಾಗುವದು. ಶಿಬಿರಾರ್ಥಿಗಳು ತಮ್ಮ ಅನುವಾದದ ಅಸೈನ್‍ಮೆಂಟ್ ಸಲ್ಲಿಸಬೇಕು. ಅನುವಾದ ಮಾಡಬೇಕಾದ (ಎರಡು ಭಾಷೆಗಳು) ಭಾಷೆಗಳ ಪರಿಣತಿ ಇರಬೇಕು. ಶಿಬಿರಾರ್ಥಿಗಳು ತಮ್ಮ ಹೆಸರು, ವಿಳಾಸ, ಫೋನ್ ನಂಬರ್, ಇ-ಮೇಲ್ ಐಡಿ ಜೊತೆಗೆ ಸಾಹಿತ್ಯ ಮತ್ತು ಅನುವಾದ ಕ್ಷೇತ್ರದಲ್ಲಿ ತಮ್ಮ ಅನುಭವ, ಬರವಣಿಗೆ ಇತ್ಯಾದಿ ಮಾಹಿತಿಯುಳ್ಳ ಟಿಪ್ಪಣಿ ಸಹಿತ ಬಾ.ಹ. ರಮಾಕುಮಾರಿ ಅಧ್ಯಕ್ಷರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಭವನ (ಅಮಾನಿಕೆರೆ ಎದುರು ರಸ್ತೆ) ತುಮಕೂರು-572101 ಅಥವಾ ಇ-ಮೇಲ್ ಣಞಚಿsಚಿಠಿಚಿ2016@gmಚಿiಟ.ಛಿom ತಾ. 7 ರೊಳಗೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ 8277066123, 9742632283 ಸಂಪರ್ಕಿಸಬಹುದು.