ಮಡಿಕೇರಿ, ಜು. 5: ಕೊಡಗಿನ ಅನಿವಾಸಿ ಜನರು ವರ್ಷಕ್ಕೆ ಒಂದು ಬಾರಿ ಜಾತಿ ಮತ ಪಂಥ ಮರೆತು ಒಂದುಗೂಡುವ ಕೊಡಗು ಈದ್ ಮೀಟ್ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯು ಕೂರ್ಗ್ ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ದುಬೈ ಮತ್ತು ಆರ್‍ವೈಸಿ ಚೆರಿಯಪರಂಬು ತಂಡ ಇದರ ಸಂಯುಕ್ತ ಆಶ್ರಯದಲ್ಲಿ ರಿಗ್ಗದಲ್ಲಿರುವ ಮೈದಾನದಲ್ಲಿ ನಡೆಯಿತು.
ಕೊಡಗಿನ ಬಲಿಷ್ಟ ಎಂಟು ತಂಡಗಳು ಪಾಲ್ಗೊಂಡು ಪ್ರಶಸ್ತಿಗಾಗಿ ಹೋರಾಡಿ, ಕೊಡಗಿನ ವಿವಿಧ ಕಡೆಗಳಿಂದ ಯುಎಇಯಲ್ಲಿ ನೆಲಸಿರುವ ಅನಿವಾಸಿಗಳು ತಮ್ಮದೇ ಊರಿನ ತಂಡವನ್ನು ಕಟ್ಟಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದಾದರೂ ಫೈನಲ್ ಪಂದ್ಯದಲ್ಲಿ ಚಾಮಿಯಾಲ್ ತಂಡ ರನ್ನರ್ ಪ್ರಶಸ್ತಿ ಮತ್ತು ನಗದನ್ನು, ಕುಂಜಿಲ ತಂಡ ಪ್ರತಿಷ್ಠಿತ ಕೂರ್ಗ್ ಈದ್ ಮೀಟ್ ಫುಟ್ಬಾಲ್ ಚಾಂಪಿಯನ್ ಆಗಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಎಂಪರರ್ ಗೇಮಿಂಗ್ ಕಂಪೆನಿಯ ವಹೀದ್ ಮಡಿಕೇರಿ ಅವರು ವಿಜೇತ ತಂಡಗಳಿಗೆ ಬಹುಮಾನ ಹಸ್ತಾಂತರಿಸಿದರು. ಪಂದ್ಯಾವಳಿಯ ಮುಖ್ಯ ಆಯೋಜಕರಾಗಿದ್ದ ಸಮೀರ್ ಪರವಂಡ ಚೆರಿಯಪರಂಬು ಮತ್ತು ರಫೀಕಲಿ ಕುಂಡಂಡ ಕುಂಜಿಲ ಅವರು ಆಗಮಿಸಿದ ಸಮಸ್ತ ಕ್ರೀಡಾಭಿಮಾನಿಗಳಿಗೂ ಕ್ರೀಡಾಪಟುಗಳಿಗೂ ಧನ್ಯವಾದ ಹೇಳಿದರು.