ಮಡಿಕೇರಿ, ಜು.5 :ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂ ಸ್ಟೇಗಳು ಸರ್ಕಾರದ ಆದೇಶ ದಂತೆ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸುವದು ಕಡ್ಡಾಯವಾಗಿದ್ದು, ಈ ಸಂಬಂಧ ಹೋಂ ಸ್ಟೇ ಮಾಲೀಕರಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ಬಹಳಷ್ಟು ಹೋಂ ಸ್ಟೇಗಳು ನೋಂದಣಿಯಾಗಿ ರುವದಿಲ್ಲ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ನೋಂದಣಿಯಾಗದ ಹೋಂ ಸ್ಟೇಗಳು ಆಗಸ್ಟ್ 2 ರೊಳಗೆ ನೋಂದಾಯಿಸಿ ಕೊಳ್ಳಲು ಸೂಚಿಸಿದೆ. ಹೋಂ ಸ್ಟೇ ನೋಂದಣಿಗೆ ನಿUದಿ ಪಡಿಸಲಾಗಿರುವ ದಿನಾಂಕದೊಳಗೆ ಕ್ರಮಕೈಗೊಳ್ಳದ ಹೋಂ ಸ್ಟೇಗಳನ್ನು ರದ್ದುಪಡಿಸಿ ಹೋಂ ಸ್ಟೇ ಜಾಗದ ಮಾಲೀಕರ ಮೇಲೆ ಕ್ರಮ ಜರುಗಿಸಲಾಗುವದು ಎಂದು ತಿಳಿಸಿದೆ. ಹೋಂ ಸ್ಟೇಗಳ ನೋಂದಣಿಗಾಗಿ ಪ್ರವಾಸೋದ್ಯಮ ಇಲಾಖೆಯು ಮಾರ್ಗ ಸೂಚಿಗಳನ್ನು ಪ್ರಕಟಿಸಿದ್ದು, ಅಂತರ್ಜಾಲ ತಾಣ hಣಣಠಿ://ಞಚಿಡಿಟಿಚಿಣಚಿಞಚಿಣouಡಿism.oಡಿg ಅಥವಾ hಣಣಠಿ://ಣಚಿಥಿಜಿ.iಟಿ.hs ಮುಖಾಂತರ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿ ಕೊಳ್ಳಲು ತಿಳಿಸಲಾಗಿದೆ. ಆನ್‍ಲೈನ್ ನಲ್ಲಿ ಹೋಂ-ಸ್ಟೇ ನೋಂದಣಿ ಮಾಡಲು ಭಾವಚಿತ್ರ, ಆಧಾರ್ ಕಾರ್ಡ್, ಹೋಂ-ಸ್ಟೇ ಹೊರಾಂಗಣ ಹಾಗೂ ಒಳಾಂಗಣ ಛಾಯಾಚಿತ್ರಗಳು, ಹೋಂ-ಸ್ಟೇ ಜಾಗದ ಮಾಲೀಕತ್ವದ ದಾಖಲಾತಿ (ಆರ್.ಟಿ.ಸಿ. ಅಥವಾ ನಮೂನೆ-3) ಪೊಲೀಸ್ ಇಲಾಖೆ ಯಿಂದ ನೀಡಲಾಗಿರುವ ನಿರಾಕ್ಷೇಪಣಾ ಪತ್ರ, ಸ್ಥಳೀಯ ಸಂಸ್ಥೆ ಯವರುಗಳು ನೀಡಿರುವ ನಿರಾಕ್ಷೇಪಣಾ ಪತ್ರ ಸ್ಕ್ಯಾನ್ ಮಾಡಿದ ದಾಖಲಾತಿ ಗಳನ್ನು ಅಂತರ್ಜಾಲ ತಾಣದಲ್ಲಿ ಅಪ್‍ಲೋಡ್ ಮಾಡಬೇಕಾಗಿರುತ್ತದೆ.

ನೋಂದಣಿ ಶುಲ್ಕ 500 ರೂ. ಆಗಿದ್ದು, ಹೋಂ-ಸ್ಟೇ ನಡೆಸಲು ಇಚ್ಚಿಸುವ ಮಾಲೀಕರು ಮೊದಲು ಪ್ರವಾಸೋದ್ಯಮ ಇಲಾಖೆಗೆ ಅಗತ್ಯ ದಾಖಲಾತಿಗಳೊಂದಿಗೆ ಕೋರಿಕೆ ಸಲ್ಲಿಸುವದು. ನಂತರ ಪ್ರವಾಸೋದ್ಯಮ ಇಲಾಖೆಯು ನೀಡುವ ಹಿಂಬರಹದ ಆಧಾರದ ಮೇಲೆ ಹೋಂ ಸ್ಟೇಗಳ ಸ್ಥಳ ಹಾಗೂ ದಾಖಲಾತಿಗಳ ಪರಿಶೀಲನೆ ಮತ್ತು ಪ್ರವಾಸೋದ್ಯಮ ಇಲಾಖೆಯು ನಿಗಧಿಪಡಿಸಿರುವ ಹೋಂ ಸ್ಟೇ ಮಾರ್ಗ ಸೂಚಿಗಳಿಗೆ ಬದ್ಧವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ನಿರಾಕ್ಷೇಪಣಾ ಪತ್ರವನ್ನು ಪೊಲೀಸ್ ಹಾಗೂ ಸ್ಥಳೀಯ ಸಂಸ್ಥೆಗಳು ನೀಡಲು ಸೂಚಿಸಲಾಗಿದೆ.

ಅರ್ಹ ಹೋಂ ಸ್ಟೇಗಳಿಗೆ ಪ್ರಮಾಣಪತ್ರ ನೀಡುವವರೆಗೆ ಹೋಂ ಸ್ಟೇ ಮಾಲೀಕರು ಆನ್‍ಲೈನ್‍ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡಿರುವ ಪ್ರತಿ ಹೊಂದಿರತಕ್ಕದ್ದು. ಹೋಂ ಸ್ಟೇ ಪರಿವೀಕ್ಷಣೆಗಾಗಿ ಅಧಿಕಾರಿಗಳು ಭೇಟಿ ನೀಡಿದಾಗ ಹೋಂ ಸ್ಟೇ ಪ್ರಮಾಣಪತ್ರ ಅಥವಾ ಹೋಂ ಸ್ಟೇ ನೋಂದಣಿಗಾಗಿ ಅರ್ಜಿ ಸಲ್ಲಿಸಿರುವ ದಾಖಲಾತಿಯನ್ನು ಹಾಜರುಪಡಿಸುವದು. ಇಲ್ಲವಾದಲ್ಲಿ ಹೋಂ ಸ್ಟೇ ಜಾಗದ ಮಾಲೀಕರ ಮೇಲೆ ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿ ಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ.