ಮಡಿಕೇರಿ, ಜು.5 : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಕಳೆದ 2017-18ನೇ ಸಾಲಿನಲ್ಲಿ ಸಂಘ 23.63 ಲಕ್ಷ ನಿವ್ವಳ ಲಾಭವನ್ನು ಗಳಿಸಿದ್ದು, ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಸಂಘದ ಅಧ್ಯಕ್ಷ ಸ್ಥಾನಕ್ಕೆ ಬರುವ ಸಂದರ್ಭ ಸಂಘ 4.76 ಲಕ್ಷ ನಷ್ಟವನ್ನು ಹೊಂದಿತ್ತು. ಸಂಘವನ್ನು ಆಡಳಿತ ಮಂಡಳಿಯ ಸಹಕಾರದೊಂದಿಗೆ ಮೇಲೆತ್ತುವ ಪ್ರಯತ್ನಗಳು ಯಶಸ್ವಿಯಾಗುವ ಮೂಲಕ ಪ್ರಗತಿಯನ್ನು ಕಾಣುತ್ತಾ ಬಂದಿದೆ ಎಂದರು. ಸಂಘ ಕಳೆದ ಆರ್ಥಿಕ ಸಾಲಿನಲ್ಲಿ ಒಟ್ಟು 10,651.55 ಲಕ್ಷ ವಹಿವಾಟನ್ನು ನಡೆಸಿದ್ದರೆ, 2016-17ನೇ ಸಾಲಿನಲ್ಲಿ 9420.20 ಲಕ್ಷ ವಹಿವಾಟನ್ನು ನಡೆಸಿರುವದಾಗಿ ಮಾಹಿತಿ ನೀಡಿದರು.
ಭತ್ತ, ಕಾಫಿ, ಕರಿಮೆಣಸು, ಬೆಳೆಯನ್ನು ಪರಿಗಣಿಸಿ 10 ಲಕ್ಷದವರೆಗಿನ ಸಾಲ ಸೇರಿದಂತೆ ಒಟ್ಟು 866.07 ಲಕ್ಷಗಳ ಫಸಲು ಸಾಲವನ್ನು ವಿತರಿಸಲಾಗಿದೆ. ಅಲ್ಲದೆ ಸದಸ್ಯರು ಹಾಗೂ ಸದಸ್ಯೇತರರಿಗೆ ಚಿನ್ನಾಭರಣ ಸಾಲ, ಅಸಾಮಿ ಸಾಲ, ವ್ಯಾಪಾರಾಭಿವೃದ್ಧಿ ಸಾಲ, ವಾಹನ ಸಾಲ ಹಾಗೂ ವಿದ್ಯಾಭ್ಯಾಸ ಸಾಲ, ಜಾಮೀನು ಸಾಲ, ಕಾಫಿ ಕರಿಮೆಣಸು ಅಡವು ಸಾಲ ಸೇರಿದಂತೆ ಮದುವೆಗೆ ಬೇಕಾದ ಎಲ್ಲಾ ರೀತಿಯ ಸಾಮಗ್ರಿಗಳು, ಪಿಗ್ಮಿ ಠೇವಣಿ ಆಧಾರದ ಸಾಲ ಮತ್ತು ಸ್ವಸಹಾಯ ಗುಂಪುಗಳಿಗೆ ಅಲ್ಪಾವಧಿ ಸಾಲವಾಗಿ ಒಟ್ಟು 591.63 ಲಕ್ಷ ರೂ.ಗಳ ಸಾಲ ವಿತರಿಸಲಾಗಿದೆ ಎಂದರು.
ಸಂಘದಿಂದ ಚೆಟ್ಟಳ್ಳಿ ಶಾಖೆಯ ಮೂಲಕ ರಸಗೊಬ್ಬರ, ಸಿಮೆಂಟ್, ಕೃಷಿ ಉಪಕರಣ, ಹತ್ಯಾರು, ಪೈಪುಗಳು ಆಸ್ಫರ್‍ಶೀಟ್‍ಗಳು, ಕೋವಿ ತೋಟ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಮಾಡಲಾಗುತ್ತಿದೆ.ಅಲ್ಲದೆ ಈರಳೆವಳಮುಡಿ ಶಾಖೆÉಯಲ್ಲಿ ರಸಗೊಬ್ಬರ ಸೇರಿದಂತೆ ಕೃಷಿಗೆ ಉಪಯುಕ್ತವಾದ ವಸ್ತುಗಳ ಮಾರಾಟ ಮಾಡಲಾಗಿದ್ದು, ಒಟ್ಟು 552.33 ಲಕ್ಷಗಳ ವಹಿವಾಟು ನಡೆಸಿ 25.97 ಲಕ್ಷಗಳ ವ್ಯಾಪಾರ ಲಾಭಗಳಿಸಿರು ವದಾಗಿ ಮಾಹಿತಿಯನ್ನಿತ್ತರು.
ಮಹಾಸಭೆ
ಸಂಘದ 2016-17ನೇ ಸಾಲಿನÀ ವಾರ್ಷಿಕ ಮಹಾಸಭೆ ತಾ.9 ರಂದು ಬೆಳಗ್ಗೆ 10 ಗಂಟೆಗೆ ಸಂಘದ ನರೇಂದ್ರಮೋದಿ ರೈತ ಸಹಕಾರ ಭವನ ಸಭಾಂಗಣದಲ್ಲಿ ನಡೆಯಲಿದೆ. ನೂತನ ಆಡಳಿತ ಮಂಡಳಿಗೆ ಆಗಸ್ಟ್ 18 ರಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಘೋಷಿಸಲು ಉದ್ದೇಶಿಸಿರುವ ಸಾಲ ಮನ್ನಾ ಯೋಜನೆಯಡಿ ಕಾಫಿ, ಕರಿಮೆಣಸು, ಅಡಿಕೆ ಬೆಳೆಗಳ ಫಸಲು ಸಾಲವನ್ನು ಮನ್ನಾ ಮಾಡುವಂತೆ ಒತ್ತಾಯಿಸಿದ ಅವರು, ಮಹಾಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವದೆಂದು ತಿಳಿಸಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ನೂರಾರು ಏಕರೆ ಹೊಂದಿದವರು ಒತ್ತುವರಿ ಮಾಡಿರುವ ಊರ್‍ಮಂದ್, ಊರುಡುವೆಗಳನ್ನು ತೆರವುಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆದರೆ, ಸಂಘÀದ ವಶದಲ್ಲಿದ್ದ ಅಂದಾಜು 6 ಸೆಂಟ್ ಜಾಗವನ್ನು ಕ್ಷಿಪ್ರ ಅವಧಿಯಲ್ಲಿ ತನ್ನ ವಶಕ್ಕೆ ಪಡೆದು ಗ್ರಾಪಂಗೆ ನೀಡುವ ಪ್ರಯತ್ನ ನಡೆಯಿತೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ನೂಜಿಬೈಲು ಡಿ. ನಾಣಯ್ಯ, ಪುತ್ತರೀರ ಎಂ. ಸೀತಮ್ಮ, ಪೇರಿಯನ ಎಸ್. ಪೂಣಚ್ಚ ಹಾಗೂ ಕಣಜಾಲು ಕೆ. ಪೂವಯ್ಯ ಉಪಸ್ಥಿತರಿದ್ದರು.