ಸುಂಟಿಕೊಪ್ಪ, ಜು. 5: ಪ್ರತಿಯೊಂದು ಮಗುವಿನಲ್ಲೂ ದಿವ್ಯ ಚೇತನವಿದೆ. ಮಕ್ಕಳ ಅಭಿರುಚಿಗೆ ತಕ್ಕಂತೆ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರ ಕನಸನ್ನು ಸಾಕಾರ ಗೊಳಿಸಲು ಪ್ರೇರಕ ಶಕ್ತಿಯಾಗ ಬೇಕೆಂದು ಹಿರಿಯ ವಕೀಲ ಹಾಗೂ ಸಾಹಿತಿ ಕಂಜರ್ಪಣೆ ಪಿ.ಬಾಲಸುಬ್ರಮಣ್ಯ ಕರೆ ನೀಡಿದರು. ಇಲ್ಲಿನ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ವಿಕಲಚೇತನರಿಗೆ ಉಚಿತ ಸಾದನ ಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು; ಯಾವ ವ್ಯಕ್ತಿಯೂ ಪರಿಪೂರ್ಣನಲ್ಲ; ಸತತ ಪರಿಶ್ರಮದಿಂದ ಜೀವನದಲ್ಲಿ ಶ್ರೇಷ್ಟ ವ್ಯಕ್ತಿಯಾಗಿ ಬದುಕನ್ನು ರೂಪಿಸಿಕೊಳ್ಳ ಬಹುದು. ಮಕ್ಕಳನ್ನು ಒಳ್ಳೆಯವರನ್ನಾಗಿ ಬೆಳೆಸುವದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ ಎಂದರು.

ಮಕ್ಕಳಿಗೆ ಅಪರಿಮಿತ ಸ್ವಾತಂತ್ಯ್ರ ನೀಡಬೇಕು. ಪ್ರಶ್ನೆ ಕೇಳುವದು ಅವರ ಹಕ್ಕು, ಅದಕ್ಕೆ ಪೋಷಕರು ಕಡಿವಾಣ ಹಾಕಕೂಡದು ಅವರ ಬೆಳವಣಿಗೆಯಲ್ಲಿ ಪೋಷಕರದೇ ಪ್ರಮುಖ ಪಾತ್ರವಾಗಿ ರುವದರಿಂದ ಎಲ್ಲಾ ವಿಷಯದಲ್ಲೂ ಎಚ್ಚರಿಕೆಯ ಸಡೆಯನ್ನು ಇಡುವಂತಾಗ ಬೇಕೆಂದು ಸಲಹೆ ನೀಡಿದರು. ಅಮ್ಮತ್ತಿ ಆರ್‍ಐಹೆಚ್‍ಪಿ ಆಸ್ಪತ್ರೆಯ ಹಿರಿಯಾಡಳಿತ ವೈದ್ಯಾಧಿಕಾರಿ ಸಿ.ಕೆ.ಎನ್. ಚಂದ್ರು ಮಾತನಾಡಿ ಈ ಸಂಸ್ಥೆಯ ಮಕ್ಕಳ ಆರೋಗ್ಯ ತಪಾಸಣೆ ಮಾಡುವದು ಅತ್ಯಂತ ಸಂತೋಷ ನೀಡುತ್ತಿದೆ; ಈ ಮಕ್ಕಳೇ ನನಗೆ ವೈದ್ಯಕೀಯ ಸೇವೆಯಲ್ಲಿ ಸ್ಪೂರ್ತಿ ನೀಡುತ್ತಿದ್ದಾರೆ. ತಿಂಗಳಿಗೊಮ್ಮೆ ಇಲ್ಲಿಗೆ ಬಂದು ಮಕ್ಕಳ ವೈದ್ಯಕೀಯ ಸೇವೆ ಸಲ್ಲಿಸುತ್ತೇನೆ ಎಂದರು. ಪೋಷಕರ ಸಂಘದ ಅಧ್ಯಕ್ಷೆ ಶಾಂತಮ್ಮ, ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ, ದೃಶ್ಯ ಕಲಾ ಶಿಕ್ಷಕ ರಾಮ್ ಗೌತಮ್ ವೇದಿಕೆಯಲ್ಲಿದ್ದರು ಈ ಸಂದರ್ಭ ವಿಕಲ ಚೇತನರಿಗೆ ಉಚಿತÀ ಸಾಧನ ಸಲಕರಣೆಗಳನ್ನು ವಿತರಿಸಲಾ ಯಿತು. ಸ್ವಸ್ಥ ಶಾಲೆಯ ವಿದ್ಯಾಥಿರ್üನಿ ಯರು ಪ್ರಾಥಿರ್üಸಿ ಶಿಕ್ಷಕಿ ರೇಖಾ ಸ್ವಾಗತಿಸಿ, ಮುರುಗೇಶ್ ವಂದಿಸಿದರು.