ಬೆಂಗಳೂರು, ಜು. 5: ರಾಜ್ಯದ ಜನತೆ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಚೊಚ್ಚಲ ಬಜೆಟ್ ಇಂದು ಮಂಡನೆಯಾಗಿದೆ. ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ದೋಸ್ತಿ ಸರಕಾರದ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‍ನ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತಗೊಳ್ಳುತ್ತಿವೆ. ರೈತರ ರೂ. 2 ಲಕ್ಷದವರೆಗೆ ಸಾಲಮನ್ನಾ ರೈತನಿಗೆ ಹಸಿದ ಹೊಟ್ಟೆಗೆ ಸ್ವಲ್ಪ ನಿರಾಳ ತಂದಿದೆ. ಇದು ಇಡೀ ರಾಜ್ಯದ ಕೌತುಕ ಕೆರಳಿಸಿದ್ದ ವಿಚಾರವಾದರೆ, ಹಲವು ಅಗತ್ಯತೆಗಳ ಮೇಲಿನ ಬೆಲೆ ಹೆಚ್ಚಳ ಶ್ರೀಸಾಮಾನ್ಯನಿಗೆ ಹೊರೆಯಾಗಿದೆ.ಇದರೊಂದಿಗೆ ಪ್ರಾದೇಶಿಕ ಅಸಮತೋಲನದ ಬಜೆಟ್ ಇದಾಗಿದೆ ಎಂಬ ಆರೋಪವೂ ಎದುರಾಗಿದೆ. ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿಗೆ ಈ ಬಜೆಟ್ ಮತ್ತೊಂದು ಹೋರಾಟಕ್ಕೆ ದಾರಿ ಮಾಡಿಕೊಟ್ಟಿದ್ದರೆ, ಆಡಳಿತ ಪಕ್ಷದ ಪಾಲುದಾರ ಪಕ್ಷವಾದ ಕಾಂಗ್ರೆಸ್‍ನ ವಲಯದಲ್ಲೂ ತಳಮಳ ಸೃಷ್ಟಿಸಿದಂತಾಗಿದ್ದು, ಅತ್ತ ಸ್ವಾಗತಾರ್ಹವೂ ಅಲ್ಲ... ಇತ್ತ ಸಮರ್ಥಿಸಿಕೊಳ್ಳಲೂ ಸಾಧ್ಯವಾಗದಂತಹ ಪರಿಸ್ಥಿತಿ ಹಾಗೂ ಟೀಕೆಗಳಿಗೂ ಗುರಿಯಾಗುವ ಮೂಲಕ ಕುಮಾರಸ್ವಾಮಿ ಅವರು ಪ್ರಕಟಿಸಿರುವ ಬಜೆಟ್ ಹಲವು ಮಿಶ್ರ ಪ್ರತಿಕ್ರಿಯೆಗಳಿಂದ ಕೂಡಿರುವದು ಕಂಡುಬಂದಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಅನ್ನು ಸಮರ್ಥಿಸಿಕೊಳ್ಳುತ್ತಿದ್ದರೆ ಬಜೆಟ್ ವಿರುದ್ಧ ಬಿಜೆಪಿ ನಾಳೆಯಿಂದಲೇ ಹೋರಾಟಕ್ಕೆ ಮುಂದಾಗಿವೆ. ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳು ಸಂಪೂರ್ಣ ಕಡೆಗಣನೆಗೆ ಒಳಗಾಗಿದ್ದರೆ, ಜೆಡಿಎಸ್ ಪ್ರಾಬಲ್ಯವಿರುವ ಪ್ರದೇಶಗಳಿಗೆ ಮಾತ್ರ ಕೆಲವೊಂದು ಭರಪೂರ ಕೊಡುಗೆಗಳನ್ನು ಪ್ರಕಟಿಸಲಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಮಂಡಿಸಿದ್ದ ಬಜೆಟ್‍ನಲ್ಲಿನ ಬಹುತೇಕ ಭಾಗ್ಯಗಳನ್ನು ಮುಂದುವರಿಸಲಾಗಿದೆಯಾದರೂ ಒಂದೆರಡು ಭಾಗ್ಯಗಳಿಗೆ ಕತ್ತರಿ ಪ್ರಯೋಗವಾಗಿದೆ. ಪೆಟ್ರೋಲ್, ಡೀಸಲ್, ವಿದ್ಯುತ್ ದರ ಏರಿಕೆ, ವಾಹನಗಳ ತೆರಿಗೆ
(ಮೊದಲ ಪುಟದಿಂದ) ಏರಿಕೆಯಂತಹ ವಿಚಾರಗಳು ಕೆಲವೊಂದು ಹೊಸ ಯೋಜನೆಗಳ ನಡುವೆಯೂ ಶ್ರೀ ಸಾಮಾನ್ಯರಿಗೆ ಹೊರೆಯಾಗಲಿದ್ದು, ರೈತರ ಸಾಲಮನ್ನಾದ ಕಸರತ್ತಿನ ನಡುವೆ ಇತರ ವರ್ಗಕ್ಕೆ ಬಿಸಿ ಮುಟ್ಟಿದಂತಾಗಿದೆ ಎಂಬ ಅಭಿಪ್ರಾಯ ಮೂಡಿಸಿದಂತಾಗಿದೆ.
ಅಯವ್ಯಯ ಪಕ್ಷಿ ನೋಟ
ಅಯವ್ಯಯ ಗಾತ್ರ 2,18,488 ಕೋಟಿ ರೂ.ಗಳಾಗಿವೆ. ಒಟ್ಟು ಸ್ವೀಕೃತಿ 2,13,734 ಕೋಟಿರೂ, ರಾಜಸ್ವ ಸ್ವೀಕೃತಿ, 1,66,396 ಕೋಟಿ ರೂ. ಮತ್ತು 47,134 ಕೋಟಿ ಸಾರ್ವಜನಿಕ ಋಣ ಹಾಗೂ 204 ಕೋಟಿ ಬಂಡವಾಳ ಸ್ವೀಕೃತಿ.
ಒಟ್ಟು ವೆಚ್ಚ ರೂ. 2,18,488 ಕೋಟಿ ರಾಜಸ್ವವೆಚ್ಚ 1,66,290 ಕೋಟಿ ಹಾಗೂ ಬಂಡವಾಳ ವೆಚ್ಚ 41,063 ಕೋಟಿ ಹಾಗೂ ಸಾಲ ಮರು ಪಾವತಿ 11,136 ಕೋಟಿ.
2 ಲಕ್ಷದವರೆಗಿನ ಸುಸ್ತಿ ಸಾಲ ಮನ್ನಾ
ರೂ. 2 ಲಕ್ಷದವರೆಗೆ ಸಾಲ ಮನ್ನಾ ಮಾಡಲಾಗುವದು, ರಾಜ್ಯದ ರೈತರ ಒಟ್ಟು ಸಾಲ ಮನ್ನಾಕ್ಕೆ ರಾಜ್ಯ ಬಜೆಟ್‍ನಲ್ಲಿ 34 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಆದಾಯ ತೆರಿಗೆ ಪಾವತಿ ಮಾಡುವ ರೈತರಿಗೆ ಸಾಲ ಮನ್ನಾ ಇಲ್ಲ ಎಂದು ತಿಳಿಸಿದ್ದಾರೆ.
31.12.2017ರ ಒಳಗಿನ ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್‍ಗಳ ಸುಸ್ತಿ ಸಾಲ ಮನ್ನಾದೊಂದಿಗೆ ಸಾಲಮನ್ನಾ ಸಕಾಲದಲ್ಲಿ ಮರು ಪಾವತಿ ಮಾಡಿರುವ ರೈತರ ಖಾತೆಗಳಿಗೆ ಗರಿಷ್ಠ ರೂ. 25 ಸಾವಿರ ಹಣವನ್ನು ಸರಕಾರ ತುಂಬಲಿದೆ. ಕೃಷಿ ವಲಯದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರತಿ ಜಿಲ್ಲೆಯ ಇಬ್ಬರು ಪ್ರಗತಿ ಪರ ರೈತರನ್ನು ಒಳಗೊಂಡ ರೈತರ ರಾಜ್ಯ ಸಲಹಾ ಸಮಿತಿಯನ್ನು ರಚಿಸಲಾಗುವದು. ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ (ಕೊಡಗು ಹೊರತುಪಡಿಸಿ) ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯಕ್ಕೆ ರೂ. 150 ಕೋಟಿ ಅನುದಾನ ನೀಡಲಾಗುವದು. ಶೂನ್ಯ ಬಂಡವಾಳ ಸಹಜ ಕೃಷಿಗೆ ರೂ. 50 ಕೋಟಿ ಅನುದಾನ, ಕೃಷಿ ವಲಯದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಉನ್ನತ ಸಮಿತಿ ರಚನೆ, ಅಂಟುವಾಳಕಾಯಿ ಬೆಳೆಸಲು ರೂ. 10 ಕೋಟಿ ನೀಡಲಾಗುವದು. ರಾಜ್ಯ ಬೀಜ ಮತ್ತು ಸಾವಯವ ಕೇಂದ್ರ ಸ್ಥಾಪನೆಗೆ ರೂ. 5 ಕೋಟಿ ಅನುದಾನ.
ರಾಜ್ಯದಲ್ಲಿ ಇಸ್ರೇಲ್ ಮಾದರಿಯ ಕೃಷಿಯನ್ನು ಆರಂಭಿಸುತ್ತಿದ್ದು ಅದಕ್ಕೆ 50 ಕೋಟಿ ಹಣ ಮೀಸಲಿಡಲಾಗಿದೆ ಎಂದರು. ಕೇಂದ್ರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಂತೆ, ಸಿರಿಧಾನ್ಯ, ಬೇಳೆ ಕಾಳು, ಜೋಳಕ್ಕೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಒತ್ತು ನೀಡಲಾಗುವದು ಎಂದು ಅವರು ತಿಳಿಸಿದರು.
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ
ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕುಮಾರಸ್ವಾಮಿಯವರು ರೈತರ ಸಾಲಮನ್ನಾಕ್ಕೆ ಕ್ರಮ ಕೈಗೊಂಡಿದ್ದು ಸರಕಾರದ ಬೊಕ್ಕಸ ತುಂಬಿಸಲು ಪೆಟ್ರೋಲ್, ಡೀಸೆಲ್, ವಿದ್ಯುತ್, ಮದ್ಯದ ಮೇಲಿನ ಸೆಸ್ ಹೆಚ್ಚಳ ಮಾಡಿದ್ದಾರೆ.
ಅಬಕಾರಿ ತೆರಿಗೆ ಶೇ 4ರಷ್ಟು ಹೆಚ್ಚಳ
ಕೆಲವು ತಿಂಗಳ ಹಿಂದಷ್ಟೇ ದುಬಾರಿಯಾಗಿದ್ದ ಮದ್ಯ ಬೆಲೆಯಿಂದ ಸಂಕಟಕ್ಕೆ ಸಿಲುಕಿದ್ದ ಮದ್ಯಪ್ರಿಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಆದಾಯದಲ್ಲಿ ಹೆಚ್ಚಳ ಮಾಡುವ ಸಲುವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮದ್ಯದ ಮೇಲಿನ ತೆರಿಗೆಯನ್ನು ಶೇ 4ರಷ್ಟು ಹೆಚ್ಚಿಸಿದ್ದಾರೆ. ಇದರಿಂದ ಮದ್ಯದ ಬೆಲೆಯಲ್ಲಿ ಮತ್ತೆ ಏರಿಕೆಯಾಗಲಿದೆ.
ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ 2018-19ನೇ ಸಾಲಿನ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅವರು ಅಬಕಾರಿ ತೆರಿಗೆಯನ್ನು ಶೇ 8ರಷ್ಟು ಹೆಚ್ಚಿಸಿದ್ದರು.
ಮಠಮಾನ್ಯಗಳಿಗೆ ಅನುದಾನ
ಸಮ್ಮಿಶ್ರ ಸರಕಾರವು ರಾಜ್ಯದ ವಿವಿಧ ಮಠಮಾನ್ಯಗಳಿಗೆ ತಲಾ ರೂ. 25 ಕೋಟಿ ಅನುದಾನ ಕಲ್ಪಿಸಲಿದೆ. ಅಲ್ಲದೆ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆಗಾಗಿ ರೂ. 25 ಕೋಟಿ ಮೀಸಲಿರಿಸಿದೆ. ಮೈಸೂರಿನಲ್ಲಿ ರೇಷ್ಮೆ ಮಾರುಕಟ್ಟೆಗೆ ರೂ. 1 ಕೋಟಿ, ತೆಂಗು ಬೆಳೆಗಾರರ ಪರವಾದ ಯೋಜನೆಗೆ ರೂ. 190 ಕೋಟಿ ಹಾಗೂ ಹಾಸನ ಹಾಲು ಒಕ್ಕೂಟಕ್ಕೆ ರೂ. 50 ಕೋಟಿ ಕಲ್ಪಿಸಿದೆ.
ನೂತನ ಜಯಂತಿ
ನೂತನವಾಗಿ ರಾಜ್ಯದಲ್ಲಿ ಆದಿ ಶಂಕರಾಚಾರ್ಯ ಜಯಂತಿ ಆಚರಣೆಗೆ ರಾಜ್ಯ ಸರಕಾರ ನಿರ್ಧಾರ ಪ್ರಕಟಿಸಿದೆ.
ಉನ್ನತ ಶಿಕ್ಷಣ: ರಾಜ್ಯದ ಸರ್ಕಾರಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್. ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯವೇ ಬುನಾದಿಯಾದ ಹೊಸ ವಿಶ್ವವಿದ್ಯಾಲಯಗಳ ಪ್ರಾರಂಭ; 9 ಕೋಟಿ ರೂ. ಅನುದಾನದಲ್ಲಿ ತುಮಕೂರು ಜಿಲ್ಲೆಯಲ್ಲಿ ಕ್ರೀಡೆ ಮತ್ತು ಅಂಗಸಾಧನೆಗೆ ಸಂಬಂಧಿಸಿದ ವಿಶ್ವವಿದ್ಯಾಲಯ, ಶಿವಮೊಗ್ಗ ಜಿಲ್ಲೆಯಲ್ಲಿ ತಾಯಿನಾಡು ಭದ್ರತಾ ವಿಶ್ವವಿದ್ಯಾಲಯ, ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ರಮ . ಹಳೆ ವಿದ್ಯಾರ್ಥಿಗಳ ನೆರವಿನೊಂದಿಗೆ ಶಾಲೆಗಳ ಮೂಲಭೂತ ಸೌಕರ್ಯ ಬಲವರ್ಧಿಸಲು ಕ್ರೌಡ್ ಫಂಡಿಂಗ್ ಪೋರ್ಟಲ್ ಆರಂಭ . ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ದುರಸ್ತಿಗೆ 150 ಕೋಟಿ ರೂ. ಗಳ ವಿಶೇಷ ಪ್ಯಾಕೇಜ್. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ತರಬೇತಿ ಕೇಂದ್ರಗಳ ಬಲವರ್ಧನೆಗೆ 5 ಕೋಟಿ ರೂ. ಅನುದಾನ. 1000 ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಹೊಸದಾಗಿ ಪ್ರಾರಂಭ. ಮುಂದಿನ ಮೂರು ವರ್ಷದಲ್ಲಿ ಎಲ್ಲಾ 48 ಸಾವಿರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ಹಾಜರಾತಿಯ ನಿಗಾವಹಿಸಲು ಬಯೋಮೆಟ್ರಿಕ್ ಸಾಧನ ಅಳವಡಿಕೆ. ಪ್ರಸಕ್ತ ಸಾಲಿನಲ್ಲಿ 5 ಕೋಟಿ ರೂ. ಅನುದಾನ. ಆಯ್ದ 4100 ಸರ್ಕಾರಿ ಪ್ರಾಥಮಿಕ ಶಾಲೆಗಳ ಆವರಣಕ್ಕೆ ಅಂಗನವಾಡಿ ಕೇಂದ್ರಗಳ ಸ್ಥಳಾಂತರ; ಬಾಲ ಸ್ನೇಹಿ ಕೇಂದ್ರಗಳಾಗಿ ಬಲವರ್ಧನೆ; ಎಲ್‍ಕೆಜಿ, ಯುಕೆಜಿ ತರಗತಿಗಳ ಪ್ರಾರಂಭ. ಒಂದು ಕಿ.ಮೀ ವ್ಯಾಪ್ತಿಯಲ್ಲಿ ಕಡಿಮೆ ದಾಖಲಾತಿ ಹೊಂದಿರುವ 28847 ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಹತ್ತಿರದ 8530 ಸರ್ಕಾರಿ ಶಾಲೆಗಳೊಂದಿಗೆ ವಿಲೀನಗೊಳಿಸಲು ಕ್ರಮ.
ಆರೋಗ್ಯ: ಮುಂದಿನ ಎರಡು ವರ್ಷಗಳಲ್ಲಿ ಔಷಧ ನಿಯಂತ್ರಣ ವ್ಯವಸ್ಥೆ ಬಲಪಡಿಸಲು 40 ಕೋಟಿ ರೂ. ವೆಚ್ಚದ ಯೋಜನೆ ಜಾರಿ. ಬಡ ರೋಗಿಗಳಿಗೆ ಹೃದಯ, ಮೂತ್ರಪಿಂಡ, ಯಕೃತ್ತು ಇತ್ಯಾದಿ ಅಂಗಾಂಗ ಕಸಿಗಾಗಿ ಪ್ರತ್ಯೇಕ ಯೋಜನೆಗೆ 30 ಕೋಟಿ ರೂ. ಅನುದಾನ. ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ. ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯನ್ನು 800 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು 30 ಕೋಟಿ ರೂ. ಅನುದಾನ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಅಭಿವೃದಿ 12 ಕೋಟಿ ರೂ. ಅನುದಾನ. ರಾಮನಗರದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಕ್ರಮ. ಬೆಳಗಾವಿ, ಕಲಬುರಗಿ ಮತ್ತು ಮೈಸೂರು ನಗರಗಳಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ಹಾಗೂ ಇತರ ರೋಗಗಳಿಗೆ ಸಂಬಂಧಿಸಿದ ತೃತೀಯ ಹಂತದ ಆರೋಗ್ಯ ಸೇವೆ ಒದಗಿಸಲು ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ. ಗದಗ, ಕೊಪ್ಪಳ, ಚಾಮರಾಜನಗರ ಮತ್ತು ಹಾಸನ ನಗರಗಳ ವೈದ್ಯಕೀಯ ಕಾಲೇಜುಗಳಲ್ಲಿ 450 ಹಾಸಿಗೆ ಸಾಮಥ್ರ್ಯದ ಹೊಸ ಆಸ್ಪತ್ರೆ ಸ್ಥಾಪನೆ. 200 ಕೋಟಿ ರೂ. ಅನುದಾನ.
ಪ್ರವಾಸೋದ್ಯಮ : ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ. ಈ ವರ್ಷ ಬೇಲೂರು, ಹಂಪಿ ಮತ್ತು ವಿಜಯಪುರದಲ್ಲಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ. ಈ ನಿಟ್ಟಿನಲ್ಲಿ ಯುವಕ ಯುವತಿಯರಿಗೆ ಕೌಶಲ್ಯ ತರಬೇತಿಗಾಗಿ ಮುಂದೆ ಬರುವ ಖಾಸಗಿ ತರಬೇತಿ ಸಂಸ್ಥೆಗಳಿಗೆ ತಲಾ 60 ಲಕ್ಷ ರೂ.ಗಳ ಷೇರು ಬಂಡವಾಳ ಹೂಡಿಕೆ; ಈ ಮೂರು ಪ್ರವಾಸಿ ಕೇಂದ್ರಗಳಲ್ಲಿ ಪರಿಸರ ಹಾಗೂ ಆಹಾರದ ಶುದ್ಧತೆಯನ್ನು ಕಾಪಾಡಲು ಸರ್ಕಾರಿ ಸ್ಥಳೀಯ ಸಂಸ್ಥೆಗಳಿಗೆ 20 ಕೋಟಿ ರೂ. ಅನುದಾನ. ಪ್ರವಾಸೋದ್ಯಮಕ್ಕೆ ಬೇಕಾಗುವ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಮುಂದೆ ಬರುವ ಖಾಸಗಿ ಸಂಸ್ಥೆಗಳಲ್ಲಿ ಶೇ.30ರಷ್ಟು ಷೇರು ಬಂಡವಾಳ ಹೂಡಿಕೆ; ಪ್ರವಾಸಿ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಈ ವರ್ಷ 80 ಕೋಟಿ ರೂ. ನಿಗದಿ. ಕೆ.ಎಸ್.ಟಿ.ಡಿ.ಸಿ ಸಂಸ್ಥೆಗೆ ಹೋಟೆಲ್ ಸೌಲಭ್ಯ ಕಲ್ಪಿಸಲು 80 ಕೋಟಿ ರೂ. ಪ್ರಮುಖ ಹೆದ್ದಾರಿಗಳಲ್ಲಿ ಪ್ರವಾಸಿಗರಿಗಾಗಿ ಮೂರು ಮಾದರಿ ರಸ್ತೆ ಬದಿ ಸೌಲಭ್ಯಗಳ ಕಲ್ಪಿಸುವದು. ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ. ರಾಮನಗರದ ಬಳಿ ್ಲ ಚಿಲ್ಡ್ರನ್ಸ್ ವಲ್ರ್ಡ್ ಯೋಜನೆ ಖಾಸಗಿ ಸಹಭಾಗಿತ್ವದೊಂದಿಗೆ ಅಭಿವೃದ್ಧಿ.
ಪಶು ಸಂಗೋಪನೆ : ಧಾರವಾಡ, ಕಲಬುರಗಿ ಮತ್ತು ಮೈಸೂರಿನಲ್ಲಿ 2.25 ಕೋಟಿ ರೂ. ವೆಚ್ಚದಲ್ಲಿ ಮೂರು ವಿಭಾಗ ಮಟ್ಟದ ಘನೀಕೃತ ವೀರ್ಯನಳಿಕೆಗಳ ವಿತರಣಾ ಕೇಂದ್ರ ಸ್ಥಾಪನೆ. ಜಲಕೃಷಿ ವಿಧಾನದಿಂದ ಹಸಿರು ಮೇವು ಉತ್ಪಾದನಾ ಘಟಕ ಸ್ಥಾಪನೆಗೆ 3 ಕೋಟಿ ರೂ. ಅನುದಾನ. ಹಾಸನ ಹಾಲು ಒಕ್ಕೂಟದಲ್ಲಿ 15 ಲಕ್ಷ ಲೀಟರ್ ಸಾಮಥ್ರ್ಯದ ಮೆಗಾ ಡೈರಿ ಸ್ಥಾಪನೆಗೆ 50 ಕೋಟಿ ರೂ. ಅನುದಾನ. ಮೀನುಗಾರಿಕೆ “ಒಳನಾಡು ಮೀನು ಕೃಷಿಗೆ ಪ್ರೋತ್ಸಾಹ” ಯೋಜನೆಯಡಿ 4 ಕೋಟಿ ರೂ. ಅನುದಾನ. ಸಹಕಾರ “ಕಾಯಕ” ಯೋಜನೆಯಡಿ ಸ್ವಸಹಾಯ ಗುಂಪುಗಳು ಸ್ವಂತ ಉದ್ಯೋಗ ಕೈಗೊಳ್ಳಲು 3000 ಸ್ವಸಹಾಯ ಗುಂಪುಗಳಿಗೆ ಸಾಲ ಒದಗಿಸಲು 5 ಕೋಟಿ ರೂ. ಅನುದಾನ. ರಾಜ್ಯದ 5 ನಗರ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳು / ಸಣ್ಣ ವ್ಯಾಪಾರಿಗಳಿಗೆ ಕಿರು ಹಣಕಾಸು ಸಾಲ ಸೌಲಭ್ಯ ಒದಗಿಸಲು ‘ಬಡವರ ಬಂಧು’ ಸಂಚಾರಿ ಸೇವೆ ಪ್ರಾರಂಭ..
ಹಿಂದುಳಿದ ಅಭಿವೃದ್ಧಿ ಶಿಳ್ಳೇಕ್ಯಾತ, ದೊಂಬಿದಾಸ, ಗೌಳಿ, ಹೆಳವ, ಶಿಕಾರಿಗಳು, ಹೂವಾಡಿಗ, ಕಂಚುಗಾರ, ಕಮ್ಮಾರ, ದರ್ಜಿ, ದೇವಾಡಿಗ, ಬುಡಬುಡಿಕೆ, ತಿಗಳ, ಬಡಿಗೆ, ಹಟ್ಗಾರ, ಕರೆಒಕ್ಕಲಿಗ ಇತ್ಯಾದಿ ಅತ್ಯಂತ ಹಿಂದುಳಿದ ಸಮಾಜಗಳ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನ. ಜಾತ್ಯತೀತವಾಗಿ ದಾಸೋಹ, ಶಿಕ್ಷಣ, ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿವಿಧ ಧಾರ್ಮಿಕ ಪೀಠಗಳು ಹಾಗೂ ಸಂಘ ಸಂಸ್ಥೆಗಳಿಗೆ ಒಟ್ಟು 25 ಕೋಟಿ ರೂ. ಅನುದಾನ. ಆಹಾರ ಮತ್ತು ನಾಗರಿಕ ಸರಬರಾಜು . ಅನ್ನಭಾಗ್ಯ ಯೋಜನೆಯ ಪ್ರತಿ ಫಲಾನುಭವಿಗೆ 5 ಕೆ.ಜಿ ಉಚಿತ ಅಕ್ಕಿ ಆದರೆ, ಈ ಹಿಂದೆ 7 ಕೆ.ಜಿ ಇದ್ದುದನ್ನು 2 ಕೆ.ಜಿ ಕಡಿಮೆ ಮಾಡಲಾಗಿದೆ. ರಿಯಾಯಿತಿ ದರದಲ್ಲಿ ಅರ್ಧ ಕೆ.ಜಿ. ತೊಗರಿಬೇಳೆ ಹಾಗೂ ಪ್ರತಿ ಬಿಪಿಎಲ್ ಪಡಿತರ ಚೀಟಿಗೆ 1 ಕೆ.ಜಿ. ಪಾಮ್ ಎಣ್ಣೆ, 1 ಕೆ.ಜಿ. ಅಯೋಡಿನ್ ಮತ್ತು ಕಬ್ಬಿಣಾಂಶಯುಕ್ತ ಉಪ್ಪು ಹಾಗೂ 1 ಕೆ.ಜಿ. ಸಕ್ಕರೆ ವಿತರಣೆ. ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಮೂರು ತಿಂಗಳು ಹಾಗೂ ಬಾಣಂತಿಯರಿಗೆ ಮೂರು ತಿಂಗಳ ಅವಧಿಗೆ ಮಾಸಿಕ 1,000 ರೂ. ನಂತೆ ಒಟ್ಟು 6,000 ರೂ. ನೀಡಲು ಕ್ರಮ; ಈ ಯೋಜನೆಗೆ 350 ಕೋಟಿ ರೂ. ಅನುದಾನ. ‘ಆಧಾರ’ ಸ್ವಯಂ ಉದ್ಯೋಗ ಯೋಜನೆಯ ಘಟಕ ವೆಚ್ಚ 1 ಲಕ್ಷ ರೂ.ಗಳಿಗೆ ಹೆಚ್ಚಳ; ಇದರಲ್ಲಿ ಶೇ.50ರಷ್ಟು ಬ್ಯಾಂಕ್ ಸಾಲ ಮತ್ತು ಶೇ.50ರಷ್ಟು ಸಹಾಯಧನ ಒದಗಿಸಲು ಕ್ರಮ.
ವಿಕಲಚೇತನ ಯೋಜನೆ: 2016ರ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯಡಿ ಎಲ್ಲಾ 21 ವಿಧದ ವಿಕಲಚೇತನ ವ್ಯಕ್ತಿಗಳ ಸಮೀಕ್ಷೆಗೆ 5 ಕೋಟಿ ರೂ. ಅನುದಾನ. .ಪ್ರಸ್ತುತ ಜಿಲ್ಲೆಗೊಂದರಂತೆ ಇರುವ ವೃದ್ಧಾಶ್ರಮವನ್ನು ರಾಜ್ಯದ ಎಲ್ಲಾ ಉಪವಿಭಾಗಗಳಿಗೆ ತಲಾ ಒಂದರಂತೆ ವಿಸ್ತರಣೆಗೆ ಕ್ರಮ. ರಾಷ್ಟ್ರೀಯ ಅಂಗವಿಕಲರ ಹಣಕಾಸು ಅಭಿವೃದ್ಧಿ ನಿಗಮದಿಂದ ವಿಕಲಚೇತರಿಗೆ ನೀಡಿರುವ ಸಾಲ ಮತ್ತು 2014 ರಿಂದ ಸುಸ್ತಿಯಾಗಿರುವ ಬಡ್ಡಿ ಮೊತ್ತ ಮನ್ನಾ ಮಾಡಲು 4 ಕೋಟಿ ರೂ. ಅನುದಾನ. ವಿಕಲಚೇತನ ಪಾಲನೆ ಹಾಗೂ ನಿರ್ವಹಣೆ ಬಗ್ಗೆ ಪಾಲಕರಿಗೆ ತರಬೇತಿ ನೀಡಲು 20 ಎಕರೆ ಜಾಗದಲ್ಲಿ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳ ಪಾಲುದಾರಿಕೆಯಲ್ಲಿ ವಿಕಲಚೇತನರ ಕ್ಯಾಂಪಸ್ ಪ್ರಾರಂಭ. ಬೆಂಗಳೂರಿನ ಇಂದಿರಾನಗರದಲ್ಲಿರುವ ಸರ್ಕಾರಿ ಕಿವುಡು ಮಕ್ಕಳ ಶಾಲೆಯ ಕಟ್ಟಡದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಿಶೇಷ ಶಿಕ್ಷಕರ ಶಿಕ್ಷಣಕ್ಕಾಗಿ ತರಬೇತಿ ಕೇಂದ್ರ ಪ್ರಾರಂಭ. ಪಿ.ಹೆಚ್.ಡಿ. ಮಾಡುತ್ತಿರುವ ಹಾಗೂ ವಿದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಕೈಗೊಳ್ಳುವ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು 1 ಕೋಟಿ ರೂ. ಅನುದಾನ.
ಗಂಗಾ ಕಲ್ಯಾಣ: ಸಮಾಜ ಕಲ್ಯಾಣ ಗಂಗಾ ಕಲ್ಯಾಣ ಯೋಜನೆಯಡಿ ಸಹಾಯಧನ ಮಿತಿ 50 ಸಾವಿರ ರೂ. ಗಳಷ್ಟು ಹೆಚ್ಚಳ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ 5000 ನಿರುದ್ಯೋಗಿಗಳಿಗೆ 15 ಕೋಟಿ ರೂ. ವೆಚ್ಚದಲ್ಲಿ ಉದ್ಯೋಗಾಧಾರಿತ ತಾಂತ್ರಿಕ ತರಬೇತಿ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕಾಲೋನಿ/ ತಾಂಡಗಳ ಸಮಗ್ರ ಅಭಿವೃದ್ಧಿಗೆ ತಲಾ ಕನಿಷ್ಠ 1 ಕೋಟಿ ರೂ.ಗಳಿಂದ ಗರಿಷ್ಠ 5 ಕೋಟಿ ರೂ. ಗಳವರೆಗೆ ಅನುದಾನ ಒದಗಿಸುವ “ಪ್ರಗತಿ ಕಾಲೋನಿ” ಯೋಜನೆ ಜಾರಿ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಕ್ರೀಡಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ನೀಡಲು 2 ಕೋಟಿ ರೂ. ಅನುದಾನ. ಪರಿಶಿಷ್ಟ ಪಂಗಡದ ಯುವಕರು ಹಾಗೂ ನಿರುದ್ಯೋಗಿಗಳಿಗೆ ಟ್ಯಾಕ್ಸಿ, ಹೋಂ ಸ್ಟೇ ಇತರ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ.
ಕೈಗಾರಿಕೆಗಳಿಗ ನಿವೇಶನ: ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆಗಳ ಉದ್ದೇಶಕ್ಕೆ ಕೃಷಿ ಭೂಮಿ ಖರೀದಿಸುವ ಪ್ರಕ್ರಿಯೆ ಸರಳಗೊಳಿಸಲು ಕ್ರಮ; ರಾಜ್ಯದಲ್ಲಿನ ಎಲ್ಲಾ ಕಲ್ಲುಗಣಿ ಗುತ್ತಿಗೆದಾರರಿಗೆ “ಗಣಿಗಾರಿಕೆ ಹಾಗೂ ಗಣಿ ಸುರಕ್ಷತ ವಿಧಾನಗಳ ತರಬೇತಿ ಕೋರ್ಸ್” ಆಯೋಜನೆÉಗೆ ಕ್ರಮ; ಹಾಲಿ ಚಾಲ್ತಿಯಲ್ಲಿರುವ ಕಲ್ಲು ಗಣಿಗುತ್ತಿಗೆದಾರರಿಗೆ ಹಾಗೂ ಹೊಸದಾಗಿ ಪರವಾನಗಿ ಪಡೆಯುವ ಗುತ್ತಿಗೆದಾರರಿಗೆ ಈ ತರಬೇತಿ ಕಡ್ಡಾಯ. ಗುಣಮಟ್ಟದ ಮರಳು ಮತ್ತು ಜಲ್ಲಿ ಸ್ಪರ್ಧಾತ್ಮಕ ದರದಲ್ಲಿ ಸುಲಭವಾಗಿ ದೊರಕುವಂತೆ ಮಾಡಲು ದಾಸ್ತಾನು ಕೇಂದ್ರ ಪ್ರಾರಂಭ. ಸಿದ್ಧ ಉಡುಪು ವಲಯಕ್ಕೆ ಆದ್ಯತೆ ನೀಡುವ ಹೊಸ ಜವಳಿ ನೀತಿ ಘೋಷಣೆ. ನೇಕಾರರಿಗೆ ಹೊಸ ವಿನ್ಯಾಸ ತಂತ್ರಜ್ಞಾನ ವರ್ಗಾವಣೆಗೆ ಅತ್ಯಾಧುನಿಕ ಕೈಮಗ್ಗ ಕೇಂದ್ರ ಸ್ಥಾಪನೆ. ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ಪರ್ಯಾಯ ಪ್ಯಾಕಿಂಗ್ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ ಸ್ಥಾಪಿಸಲು 5 ಕೋಟಿ ರೂ. ಅನುದಾನ. ತೆಂಗಿನ ನಾರಿನ ವಲಯಕ್ಕೆ ಉತ್ತೇಜನ ನೀಡಲು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರತಿ ಕುಶಲಕರ್ಮಿಗೆ ವಾರ್ಷಿಕ 10,000/- ರೂ. ಪ್ರೋತ್ಸಾಹ ವೇತನ. ಸೂಕ್ಷ್ಮ ಮತ್ತು ಸಣ್ಣ ತೆಂಗಿನ ನಾರಿನ ಕೈಗಾರಿಕೆಗಳು ಉತ್ಪಾದಿಸುವ ಉತ್ಪನ್ನಗಳಿಗೆ ಶೇ.10ರ ದರದಲ್ಲಿ ಮಾರುಕಟ್ಟೆ ಅಭಿವೃದ್ಧಿ ಸಹಾಯಧನ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ ಪ್ಲಾಸ್ಟಿಕ್‍ನಿಂದ ಪ್ಯಾಕ್ ಮಾಡಿದ ವಸ್ತುಗಳ ಮೇಲೆ ಶೇ. 3 ರಷ್ಟು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಶುಲ್ಕ ವಿಧಿಸಲು ಕ್ರಮ.
ನಗರಾಭಿವೃದ್ಧಿ : ಬೆಂಗಳೂರಿನಲ್ಲಿ ಉತ್ತಮ ಸಾರಿಗೆ ಸಂಪರ್ಕ ಏರ್ಪಡಿಸಲು 15825 ಕೋಟಿ ರೂ.ಗಳ ವೆಚ್ಚದಲ್ಲಿ ಪರಸ್ಪರ ಸಂಪರ್ಕ ಹೊಂದಿರುವ ಆರು ಎಲಿವೇಟೆಡ್ ಕಾರಿಡಾರ್‍ಗಳ ನಿರ್ಮಾಣ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ದಾಖಲೆಯಲ್ಲಿರುವ ಎಲ್ಲ ಆಸ್ತಿಗಳನ್ನು ಜಿಐಎಸ್ ಆಧಾರಿತ ಮ್ಯಾಪಿಂಗ್ ಮಾಡಲು ಕ್ರಮ. ರಾಜ್ಯದ 10 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಜಾಲದ ಮ್ಯಾಪಿಂಗ್ ಮಾಡಲು ಕ್ರಮ..
ವಿವಿಧ ಯೋಜನೆಗಳು:ಸಂಧ್ಯಾ ಸುರಕ್ಷಾ ಯೋಜನೆ ಮಾಸಾಶನ ಮೊತ್ತ ಸಾವಿರ ರೂ. ಗಳಿಗೆ ಹೆಚ್ಚಳ. 32.92 ಲಕ್ಷ ಫಲಾನುಭವಿಗಳಿಗೆ ಅನುಕೂಲ; 660 ಕೋಟಿ ರೂ. ಹೆಚ್ಚುವರಿ ಅನುದಾನ; 1ನೇ ನವೆಂಬರ್ 2018 ರಿಂದ ಜಾರಿ. ಐದು ಜಿಲ್ಲೆಗಳಲ್ಲಿ ಮರು ಭೂಮಾಪನಾ ಕಾರ್ಯ ಪ್ರಾರಂಭ. 50 ನಾಡಕಛೇರಿಗಳಿಗೆÉ ಮೂಲಸೌಕರ್ಯ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನ. ಬ್ರಾಹ್ಮಣ ಸಮುದಾಯದ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ “ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ” ಸ್ಥಾಪನೆಗೆ 25 ಕೋಟಿ ರೂ. ಅನುದಾನ. ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 96 ಕೋಟಿ ರೂ. ವೆಚ್ಚದಲ್ಲಿ 42 ನಿರಂತರ ಪರಿವೇಷ್ಟಕ ವಾಯುಗುಣಮಟ್ಟ ಮಾಪನ ಕೇಂದ್ರಗಳ ಸ್ಥಾಪನೆ. “ಹಸಿರು ಕರ್ನಾಟಕ” ಯೋಜನೆ ಜಾರಿಗೆ 10 ಕೋಟಿ ರೂ. ಅನುದಾನ. 750 ಮಿಲಿಮೀಟರ್‍ಗಿಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿರುವ ಅರಣ್ಯ ವೃದ್ಧಿಗಾಗಿ ಸರ್ಕಾರಿ ಬೆಟ್ಟ ಗುಡ್ಡದ ಜಮೀನುಗಳಿಗೆ ಬೇಲಿ ಸಂರಕ್ಷಣೆ ಕಲ್ಪಿಸಲು 40 ಕೋಟಿ ರೂ. ಅನುದಾನ.
ಸಾರಿಗೆ ಯೋಜನೆ: ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರೋತ್ಸಾಹಿಸಲು 4 ಕೋಟಿ ರೂ. ವೆಚ್ಚದಲ್ಲಿ 100 ಚಾರ್ಜಿಂಗ್ ಘಟಕ ಸ್ಥಾಪನೆ. ಸಾರಿಗೆ ಸಂಸ್ಥೆಗಳಿಗಾಗಿ 4236 ಬಸ್ ಖರೀದಿ; ಇ-ಆಡಳಿತದ ಅನ್ವಯ ಸಾರ್ವಜನಿಕರ ಕುಂದು ಕೊರತೆಗಳ ನಿರ್ವಹಣೆಗೆ ನಾಗರಿಕ ಸ್ನೇಹಿ ಕ್ರೋಢಿಕೃತ ಕುಂದು ಕೊರತೆ ನಿವಾರಣಾ ವ್ಯವಸ್ಥೆ; ಕಾಲ್‍ಸೆಂಟರ್, ಮೊಬೈಲ್ ಆ್ಯಪ್, ವೆಬ್ ಆ್ಯಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಕುಂದುಕೊರತೆ ನೋಂದಾಯಿಸಲು ನಾಗರಿಕರಿಗೆ ಅವಕಾಶ. ಗ್ರಾಮ ಪಂಚಾಯಿತಿ ಮಟ್ಟದವರೆಗೆ ವೀಡಿ�?