ಮಡಿಕೇರಿ, ಜು. 9: 2018-19ನೇ ಸಾಲಿನ ಮಡಿಕೇರಿ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ವ್ಯಾಂಡಂ ಎಂಟರ್‍ಪ್ರೈಸಸ್‍ನ ಕೆ.ಕೆ. ದಾಮೋದರ್ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ತಾ. 11ರಂದು ಸಂಜೆ 7.30 ಗಂಟೆಗೆ ಕೊಡವ ಸಮಾಜದಲ್ಲಿ ನಡೆಯಲಿದೆ. ಲಯನ್ ಜಿಲ್ಲಾ ಉಪರಾಜ್ಯಪಾಲ ಡಾ. ಗೀತಾಪ್ರಕಾಶ್ ಪದಗ್ರಹಣ ಮಾಡುವರು.