ಸೋಮವಾರಪೇಟೆ, ಜು. 10: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜಳ್ಳಿ ಗ್ರಾಮದಲ್ಲಿ ಭಾರೀ ಪ್ರಮಾಣದ ಬೇರಣಬೆಗಳು ಮೂಡಿದ್ದು, ಗ್ರಾಮಸ್ಥರು ಖುಷಿಯಿಂದ ಅಣಬೆಗಳನ್ನು ಮನೆಗೆ ಸಾಗಿಸಿದ್ದಾರೆ.
ಬೇರಣಬೆಗಳು ಕಾಣಬರುವದು ಅಪರೂಪವಾಗಿದ್ದು, ಒಂದು ಪ್ರದೇಶದಲ್ಲಿ ಬಂದರೆ ಹತ್ತಾರು ಕೆ.ಜಿ.ಗಳಷ್ಟು ಗುಂಪು ಗುಂಪಾಗಿ ಬೆಳೆಯುತ್ತವೆ. ಅಜ್ಜಳ್ಳಿ ಗ್ರಾಮದಲ್ಲಿ ಹತ್ತಾರು ಕೆ.ಜಿ.ಗಳಷ್ಟು ಬೇರಣಬೆಗಳು ಬೆಳೆದಿದ್ದು, ಗ್ರಾಮಸ್ಥರು ಅವುಗಳನ್ನು ಸಂಗ್ರಹಿಸಿ ಮನೆಗೆ ಕೊಂಡೊಯ್ದು ಭರ್ಜರಿ ಊಟ ಸವಿದರು.
ನಿನ್ನೆ ಉಂಟಾದ ಲಘು ಭೂಕಂಪನದಿಂದಾಗಿಯೇ ಈ ಪ್ರಮಾಣದಲ್ಲಿ ಬೇರಣಬೆಗಳು ಕಂಡುಬಂದಿವೆ ಎಂಬ ಮಾತುಗಳು ಗ್ರಾಮಸ್ಥರಲ್ಲಿ ಹರಿದಾಡಿದವು. ಈ ಅಣಬೆಗಳು ಮಾರುಕಟ್ಟೆಯಲ್ಲಿ ಕೆ.ಜಿ. ಒಂದಕ್ಕೆ 400 ರಿಂದ 500ರವರೆಗೂ ಮಾರಾಟವಾಗುತ್ತವೆ. ಅಪರೂಪದ ಅಣಬೆಗಳನ್ನು ಗ್ರಾಹಕರು ಪೈಪೋಟಿಗೆ ಬಿದ್ದು ಖರೀದಿಸುತ್ತಾರೆ.