ಗೋಣಿಕೊಪ್ಪ ವರದಿ, ಜು. 11: ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಗೋಣಿಕೊಪ್ಪ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣದಲ್ಲಿ ಅಧ್ಯಕ್ಷರಾಗಿ ಪಾರುವಂಗಡ ದಿಲನ್ ಚೆಂಗಪ್ಪ, ಕಾರ್ಯದರ್ಶಿಯಾಗಿ ಮೂಕಳೇರ ಬೀಟಾ ಲಕ್ಷ್ಮಣ್ ಹಾಗೂ ಕಲ್ಬ್ ಸಾಮಾಜಿಕ ಸೇವೆ ಕೈಗೊಳ್ಳುವ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು. ರೋಟರಿ ಕ್ಲಬ್ ಹಿರಿಯರಾದ ರಂಗನಾಥ್ ಭಟ್ ಪದಗ್ರಹಣ ಬೋಧಿಸಿದರು. ಉಪಾಧ್ಯಕ್ಷರಾಗಿ ಟಿ.ಬಿ. ಪೂಣಚ್ಚ, ಜಂಟಿ ಕಾರ್ಯದರ್ಶಿ ಯಾಗಿ ಶಶಿ ಉತ್ತಪ್ಪ, ಖಜಾಂಚಿಯಾಗಿ ಕಳ್ಳಿಚಂಡ ಮುತ್ತಪ್ಪ, ಸಾರ್ಜೆಂಟ್ ಆಗಿ ಪ್ರಮೋದ್ ಕಾಮತ್, ಕ್ಲಬ್ ಸರ್ವಿಸ್ ಪ್ರಮುಖರಾಗಿ ವಾಸು ಉತ್ತಪ್ಪ, ಕಮ್ಯುನಿಟಿ ಸರ್ವಿಸರ್ ಜಮುನಾ ತಿಮ್ಮಯ್ಯ, ವೊಕೇಶನಲ್ ಸರ್ವಿಸರ್ ಆಗಿ ಕೆ.ಎಂ. ಕಾವೇರಿಯಪ್ಪ, ಅಂತರರಾಷ್ಟ್ರೀಯ ಸರ್ವಿಸರ್ ಸಿ.ಈ. ಕುಶಾಲಪ್ಪ, ಯೂತ್ ಸರ್ವಿಸರ್ ಆಗಿ ಎಂ.ಕೆ. ದೀನಾ, ಟಿಆರ್‍ಎಫ್ ಮುಖ್ಯಸ್ಥರಾಗಿ ಎಂ.ಜಿ. ನಾರಾಯಣ, ಪಲ್ಸ್ ಪೋಲಿಯೋ ಮುಖ್ಯಸ್ಥರಾಗಿ ಕೆ.ಪಿ. ಚಿಣ್ಣಪ್ಪ, ಕಲಿಕೆ ಮುಖ್ಯಸ್ಥರಾಗಿ ಡಾ. ಚಂದ್ರಶೇಖರ್, ಸದಸ್ಯತ್ವ ಅಭಿವೃದ್ಧಿ ಮುಖ್ಯಸ್ಥರಾಗಿ ಇಮ್ಮಿ ಉತ್ತಪ್ಪ, ವಿನ್ಸ್ ಮುಖ್ಯಸ್ಥರಾಗಿ ಪಿ.ಬಿ. ಪೂಣಚ್ಚ, ಪ್ರಾಜೆಕ್ಟ್ ಮುಖ್ಯಸ್ಥರಾಗಿ ಸಜನ್ ಚೆಂಗಪ್ಪ, ಬುಲೆಟಿನ್ ಎಡಿಟರ್ ಆಗಿ ಬೀಟಾ ಲಕ್ಷ್ಮಣ್, ಡಾ. ಚಂದ್ರಶೇಖರ್, ಶಶಿ ಉತ್ತಪ್ಪ, ಆನ್ಸ್ ಕ್ಲಬ್ ಅಧ್ಯಕ್ಷರಾಗಿ ರಿಸ್ತಾ ಚೆಂಗಪ್ಪ, ಕಾರ್ಯದರ್ಶಿಯಾಗಿ ಟಿ.ಪಿ. ವಿಶಾಲು ಪದಗ್ರಹಣ ಸ್ವೀಕರಿಸಿದರು. ಝೋನಲ್ ಲೆಫ್ಟಿನೆಂಟ್ ಬಿ.ಎ. ದೇಚಮ್ಮ ರೋಟರಿ ಬುಲೆಟಿನ್ ಬಿಡುಗಡೆಗೊಳಿಸಿದರು. ಪಿಯುಸಿಯಲ್ಲಿ ಶೇ. 94 ಅಂಕ ಪಡೆದು ಶೈಕ್ಷಣಿಕವಾಗಿ ಸಾಧನೆ ಮಾಡಿದ ಸದಸ್ಯರ ಮಕ್ಕಳು ಗಳಾದ ಯುತಿಕಾ ಹಾಗೂ ಮೃನಾಲ್ ಅವರನ್ನು ಗೌರವಿಸ ಲಾಯಿತು. ಶೂಟಿಂಗ್‍ನಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಹರ್ಷವರ್ಧನ್, ಪ್ರದೀಪ್ತಾ, ವಿತನ್, ಓಟದಲ್ಲಿ ಸಾಧನೆಗೈದ ಪಲ್ಲವ್ ಪೂವಣ್ಣ ಅವರನ್ನು ಗೌರವಿಸಲಾಯಿತು.
ನಿರ್ಗಮಿತ ಅಧ್ಯಕ್ಷ ಮಚ್ಚಮಾಡ ವಿಜಯ್ ಮಾತನಾಡಿ, ಆರೋಗ್ಯ ತಪಾಸಣೆ ಶಿಬಿರ, ಗಿಡ ನೆಟ್ಟು ಪೋಷಿಸುವ ಕಾರ್ಯಕ್ರಮ, ಸ್ವಚ್ಛತೆ ಯೋಜನೆಯಡಿ ಪೊನ್ನಂಪೇಟೆಯಲ್ಲಿ 3 ಕಸದ ತೊಟ್ಟಿ ನಿರ್ಮಾಣ, ರಕ್ತದಾನ ಹಾಗೂ ಕೃತಕ ಕಾಲು ಜೋಡಣೆ, ಶ್ರವಣ ಯಂತ್ರ ಜೋಡಣೆ ಯೋಜನೆಗಳು ಹೆಚ್ಚು ಜನಪರವಾಗಿದೆ ಎಂದರು. ಅಧ್ಯಕ್ಷ ಪಾರುವಂಗಡ ದಿಲನ್ ಚೆಂಗಪ್ಪ ಮಾತನಾಡಿ, ಇದರಂತೆ ನೂತನ ಕಾರ್ಯಕ್ರಮವಾಗಿ 8 ಅಂಗನವಾಡಿಗಳನ್ನು ದತ್ತು ಪಡೆದು ಖಾಸಗಿ ಬೇಬಿ ಸಿಟ್ಟಿಂಗ್ ಮಾದರಿಯಲ್ಲಿ ಮೂಲಭೂತ ಸೌಕರ್ಯ ನೀಡಿ ಅಭಿವೃದ್ಧಿ ಪಡಿಸಲಾಗುವದು. ಆಶಾಸ್ಪೂರ್ತಿ ಯೋಜನೆಯಡಿ ಈ ಕಾರ್ಯಕ್ರಮವನ್ನು ಸ್ಥಳೀಯ ದಾನಿಗಳ ಸಹಕಾರದಲ್ಲಿ ಮಕ್ಕಳಿಗೆ ಬೇಕಾದ ಆಟಿಕೆ, ಬಟ್ಟೆ, ಮೂಲಭೂತ ಸೌಕರ್ಯ ನೀಡಲಾಗುವದು ಎಂದರು. ಅಲ್ಲದೆ, ಸ್ವಚ್ಛತೆಯ ಬಗ್ಗೆ ಸಣ್ಣದರಲ್ಲಿಯೇ ಜಾಗೃತಿ ಮೂಡಿಸಲು ಮಕ್ಕಳಲ್ಲಿ ಅರಿವು ಮೂಡಿಸಲಾಗುವದು. ಟ್ರಾಫಿಕ್ ನಿಯಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮವನ್ನು ಮುಂದಿನ ಒಂದು ವರ್ಷದಲ್ಲಿ ನಡೆಸಲಾಗುವದು ಎಂದರು. ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ್ ಉಪಸ್ಥಿತರಿದ್ದರು.