ಮಡಿಕೇರಿ, ಜು.11: ಮಡಿಕೇರಿ ತಾಲೂಕು ಕಛೇರಿಯಲ್ಲಿ ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆಯೆಂದು ಆರೋಪಿಸಿರುವ ತಾಲೂಕು ಬಿಜೆಪಿ ಸಮಿತಿ, ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ತಾ.16 ರಂದು ಪಕ್ಷದ ವತಿಯಿಂದ ತಾಲೂಕು ಕಛೇರಿ ಎದುರು ಪ್ರತಿಭಟನೆ ನಡೆಸುವದಾಗಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಡಿಕೇರಿ ತಾಲೂಕು ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ತಾಲೂಕು ಕಛೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಜನ ಸಾಮಾನ್ಯರ ಯಾವದೇ ಅರ್ಜಿಗಳು ವಿಲೆÉೀವಾರಿಯಾಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಕಿಶೋರ್ ಕುಮಾರ್, ಕಂದಾಯ ಇಲಾಖೆಯಲ್ಲಿ ಅನೇಕ ಕಡತಗಳು ಬಾಕಿ ಉಳಿದಿವೆ ಎಂದರು.

ಶಾಲಾ ವಿದ್ಯಾರ್ಥಿಗಳಿಗೆ ಅಗತ್ಯವಿರುವ ದೃಢೀಕರಣ ಪತ್ರವನ್ನು ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಆರ್‍ಟಿಸಿಯಲ್ಲಿ ಕೊಡಗಿನಲ್ಲಿ ಬೆಳೆಯುವ ಶಾಶ್ವತ ಬೆಳೆಗಳಾದ ಭತ್ತ, ಕಾಫಿ ಮತ್ತು ಕಾಳು ಮೆಣಸನ್ನು ಸಮರ್ಪಕ ರೀತಿಯಲ್ಲಿ ನಮೂದಿಸದೆ ಇರುವದರಿಂದ ಸಹಕಾರಿ ಸಂಘÀ ಹಾಗೂ ಬ್ಯಾಂಕ್‍ಗಳಲ್ಲಿ ರೈತರಿಗೆ ಸಾಲ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕು ಕಛೇರಿಯಲ್ಲಿ ಕೆಲವು ಅಧಿಕಾರಿಗಳು ಕಳೆದ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಇವರಿಂದ ನಿರ್ಲಕ್ಷ್ಯ ಮನೋಭಾವನೆ ಹೆಚ್ಚಾಗಿದೆ. ಜನಸಾಮಾನ್ಯರ ಅರ್ಜಿ ವಿಲೆÉೀವಾರಿ ಸಂದರ್ಭ ಕಂಪ್ಯೂಟರ್ ದುರಸ್ತಿಯಲ್ಲಿದೆ ಎನ್ನುವ ನೆಪವೊಡ್ಡಿ ಸತಾಯಿಸಲಾಗುತ್ತಿದೆ. ಅಕ್ರಮ ಸಕ್ರಮ ಸಮಿತಿಯ ಪ್ರಕ್ರಿಯೆಯನ್ನು ನಿಯಮಾನುಸಾರ ನಡೆಸದೆ ಇರುವದರಿಂದ ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ ಎಂದು ಕಿಶೋರ್ ಕುಮಾರ್ ಆರೋಪಿಸಿದರು.

ಅತಿವೃಷ್ಟಿಯಿಂದ ರಸ್ತೆಗಳÀಲ್ಲೇ ಮಳೆ ನೀರು ಹರಿಯುತ್ತಿದ್ದರೂ, ಲೋಕೋಪಯೋಗಿ ಇಲಾಖೆ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾಧಿಕಾರಿಗಳ ಬಳಿ ಮಳೆ ಹಾನಿ ಪರಿಹಾರದ ಅನುದಾನವಿದ್ದರೂ ಖರ್ಚು ಮಾಡದೆ ಇರುವದರಿಂದ ಮತ್ತಷ್ಟು ಅನುದಾನವನ್ನು ಸರ್ಕಾರದಿಂದ ಪಡೆಯಲು ಸಾಧ್ಯವಾಗುತ್ತಿಲ್ಲವೆಂದು ಕಿಶೋರ್ ಕುಮಾರ್ ಆರೋಪಿಸಿದರು. ಜಿಲ್ಲಾಡಳಿತ ಮತ್ತು ಕಂದಾಯ ಅಧಿಕಾರಿಗಳ ವಿರುದ್ಧ ತಾ. 16 ರಂದು ಪ್ರತಿಭಟನೆ ನಡೆಸುತ್ತಿರುವದಾಗಿ ತಿಳಿಸಿದರು.

ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಈ ಹಿಂದೆ ನಗರಸಭೆ ಕಛೇರಿಗಳ ಅವ್ಯವಸ್ಥೆ ವಿರುದ್ಧ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ನಂತರದ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿತ್ತಾದರೂ, ಇದೀಗ ಮತ್ತೆ ಯಾವದೇ ಕೆಲಸ ಕಾರ್ಯಗಳು ನಡೆಯದೆ ಜನ ಸಾಮಾನ್ಯರಿಂದ ದೂರುಗಳು ಕೇಳಿ ಬಂದಿದೆ. ನಗರಸಭೆಯ ಆಡಳಿತ ವ್ಯವಸ್ಥೆ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಮತ್ತೆ ನಗರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಹೇಶ್ ಜೈನಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ. ಅರುಣ್ ಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಡೀನ್ ಬೋಪಣ್ಣ, ಪ್ರಸನ್ನ ಕುಮಾರ್ ಹಾಗೂ ಯುವ ಮೋರ್ಚಾದ ಅಧ್ಯಕ್ಷ ವಿಶು ಉಪಸ್ಥಿತರಿದ್ದರು.