ನಾಪೆÇೀಕ್ಲು ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ನಾಪೆÇೀಕ್ಲು – ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿ ಕಾವೇರಿ ನದಿ ಪ್ರವಾಹದಿಂದ ರಸ್ತೆ ತಡೆ ಉಂಟಾಗಿದೆ.
ಉಳಿದಂತೆ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ ರಸ್ತೆ ಸಂಪೂರ್ಣವಾಗಿ ಸಂಚಾರ ಕಡಿತಗೊಂಡಿದೆ. ನಾಲಡಿ ಗ್ರಾಮದ ಅಂಬಲ ಪೆÇಳೆಯಲ್ಲಿ ಕಳೆದ ಎರಡು ದಿನಗಳಿಂದ ಪ್ರವಾಹ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಯ್ಯಂಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಯ್ಯಂಗೇರಿಯಲ್ಲಿ ಅಯ್ಯಂಗೇರಿ ಹೊಳೆ ಪ್ರವಾಹ ಸೇತುವೆ ಮೇಲೆ ಹರಿಯುತ್ತಿರುವ ಕಾರಣ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣ ರಸ್ತೆ ಜಲಾವೃತಗೊಂಡಿದೆ. ಎಮ್ಮೆಮಾಡು ಉರೂಸ್ ಸಂದರ್ಭದಲ್ಲಿ ಅನ್ನದಾನ ಮಾಡುವ ಭತ್ತದ ಗದ್ದೆ ಸಂಪೂರ್ಣವಾಗಿ ನೀರಿನಿಂದ ಆವೃತ್ತವಾಗಿದೆ.
ನಾಪೆÇೀಕ್ಲು - ಪಾರಾಣೆ ರಸ್ತೆಯ ಕೈಕಾಡು ಹಾಗೂ ನಾಪೆÇೀಕ್ಲು – ಮಡಿಕೇರಿ ರಸ್ತೆಯ ಕೊಟ್ಟಮುಡಿ ಬಳಿ ಕಾವೇರಿ ನದಿ ಪ್ರವಾಹದಲ್ಲಿ ಏರಿಕೆಯಾಗುತ್ತಿದ್ದು, ಮಳೆ ಇದೇ ರೀತಿ ಮುಂದುವರಿದಲ್ಲಿ ರಸ್ತೆ ತಡೆ ಉಂಟಾಗುವ ಭೀತಿ ಮೂಡಿದೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಡ್ರಹೊಳೆಗೆ ನೂತನ ಸೇತುವೆ ನಿರ್ಮಾಣಗೊಂಡ ಹಿನ್ನಲೆಯಲ್ಲಿ ಈ ವ್ಯಾಪ್ತಿಯ ಜನರು ನಿಟ್ಟುಸಿರು ಬಿಡುವಂತಾಗಿದೆ. ಬಿರುಸಿನ ಮಳೆ ಮತ್ತು ಪ್ರವಾಹ ಹೊರತುಪಡಿಸಿದರೆ, ಯಾವದೇ ಹೆಚ್ಚಿನ ಅನಾಹುತ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಬೊಳಿಬಾಣೆಯಲ್ಲಿ ಸಂಪರ್ಕ ಕಡಿತ
ನಾಪೆÇೀಕ್ಲು ವಿಭಾಗಕ್ಕೆ ಕಳೆದ ಒಂದು ದಿನದಲ್ಲಿ ಸುಮಾರು 150 ಕ್ಕೂ ಅಧಿಕ ಮೀ.ಮೀ. ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ, ಭಾರೀ ಮಳೆಯಿಂದಾಗಿ ಹೊದವಾಡ ಬಳಿಯ ಬೊಳಿಬಾಣೆಯಲ್ಲಿ ಕಾವೇರಿ ನದಿ ನೀರು ರಸ್ತೆಯ ಮೇಲೆ 3 ಅಡಿಗಳಿಗೂ ಅಧಿಕ ಇದ್ದು, ನಾಪೆÇೀಕ್ಲು - ಮೂರ್ನಾಡು ಸಂಪರ್ಕ ಕಡಿತಗೊಂಡಿದೆ.್ದ ಚೆರಿಯಪರಂಬು ಬಳಿಯ ಕ¯್ಲುಮೊಟ್ಟೆಗೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಎಮ್ಮೆಮಾಡು ಬಳಿಯಲ್ಲಿ ಕಾವೇರಿ ನೀರು ಗದ್ದೆಗೆ ಹತ್ತಿ ಸಮುದ್ರದಂತಾಗಿದೆ. ನಿರಂತರ ಮಳೆಯಿಂದ ಅಲ್ಲಲ್ಲಿ ಸಣ್ಣ ಪುಟ್ಟ ನಷ್ಟಗಳು ಆದ ಬಗ್ಗೆ ವರದಿಯಾಗಿದೆ. ಮಳೆ ಮುಂದುವರೆದಿದ್ದು, ಅಪಾಯದ ಮುನ್ಸೂಚನೆ ಕಂಡು ಬರುತ್ತಿದೆ.
ಕತ್ತಲೆಯಲ್ಲಿ ಗ್ರಾಮಗಳು
ಆಲೂರುಸಿದ್ದಾಪುರ: ಶನಿವಾರಸಂತೆ, ಕೊಡ್ಲಿಪೇಟೆ ಸೇರಿದಂತೆ ಸುತ್ತಮುತ್ತ ನಿನ್ನೆ ಹಾಗೂ ಇಂದು ಭಾರೀ ಗಾಳಿ-ಮಳೆಯಾಗುತ್ತಿದ್ದು, ಕೆಲವೆಡೆ ರಸ್ತೆಗೆ ಅಡ್ಡಲಾಗಿ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿದೆ ಇದರಿಂದ ಅನೆಕ ಗ್ರಾಮಗಳು ಕಳೆದ ಮೂರು ದಿನಗಳಿಂದ ಕತ್ತಲೆಯಲ್ಲಿ ದಿನತಳ್ಳುತ್ತಿವೆ.
ಕೊಡ್ಲಿಪೇಟೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.
ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಗೆ ಒಳಪಡುವ ಬೆಂಬಳೂರು ಗ್ರಾಮದಲ್ಲಿ ರಸ್ತೆಗೆ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ಇರುವದರಿಂದ ಇಲ್ಲಿಯ ಅನೇಕ ಕೂಲಿ ಕಾರ್ಮಿಕರ ಮನೆಗಳಿಗೆ ರಸ್ತೆಯ ನೀರೆಲ್ಲ ಒಳ ನುಗ್ಗಿ ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿ ಪೂರ್ತಿ ಮನೆಯೊಳಗೆ ಮಲಗದೆ ಕಾಲ ಕಳೆಯುವಂತಾಗಿದೆ. ಮುಳ್ಳೂರು ಇಂಟಿನಾಯಕನ ಕೆರೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಕಡಿಮೆ ಪ್ರಮಾಣದಲ್ಲಿ ತುಂಬಿದ್ದ ಕೆರೆ ಇಂದು ಸಂಪೂರ್ಣ ಭರ್ತಿಯಾಗಿದೆ. ರೈತರ ಮೊಗದಲ್ಲಿ ಇದೀಗ ಹರ್ಷ ಮೂಡಿದೆ.
ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿಗೆ ಒಳಪಡುವ ಕಣಿವೆ ಬಸವನಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಒಳ ಚರಂಡಿ ವ್ಯವಸ್ಥೆ ಇಲ್ಲದೆ ಇರುವದರಿಂದ ರಸ್ತೆಯೆಲ್ಲ ಕೆರೆಗಳಾಂತಾಗಿವೆ.
ಶನಿವಾರಸಂತೆ, ಕುಶಾಲನಗರ ಮುಖ್ಯ ರಸ್ತೆಯ ಆಲೂರುಸಿದ್ದಾಪುರ ಸೇರಿದಂತೆ ಅಲ್ಲಲ್ಲಿ ರಸ್ತೆಯ ಒಳ ಚರಂಡಿಗಳು ಮುಚ್ಚಿರುವದರಿಂದ ಮುಖ್ಯ ರಸ್ತೆಯಲ್ಲೇ ಮಳೆ ನೀರು ಹರಿಯುತ್ತಿದೆ. ಇದರಿಂದ ಗುಂಡಿ ಇರುವ ರಸ್ತೆಗಳು ಕೆರೆಯಂತಾಗಿವೆ.