ಮಡಿಕೇರಿ, ಜು. 10: ಕೊಡವರ ಭೂ-ರಾಜಕೀಯ ಆಶೋತ್ತರವಾದ ಕೊಡವ ಲ್ಯಾಂಡ್ ಸ್ವಾಯತ್ತತೆ ಅನ್ವೇಷಣೆ. (ಕೊಡವ ಕ್ವೆಸ್ಟ್ ಫಾರ್ ಅಟೊನಮಿ) ಹಾಗೂ ಕೊಡಗು ಕೇಂದ್ರಾಡಳಿತ ಪ್ರದೇಶ ರಚನೆಗೆ ಸಂಬಂಧಿಸಿದಂತೆ ವಿಶೇಷ ಮಸೂದೆಯನ್ನು ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಸಿ.ಎನ್.ಸಿ. ಆಗ್ರಹಿಸಿದೆ. ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ತಾ. 12 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಂಕೇತಿಕ ಸತ್ಯಾಗ್ರಹ ನಡೆಸಿ, ಜ್ಞಾಪನಾ ಪತ್ರ ರವಾನಿಸಲಾಗುವದು ಎಂದು ಅಧ್ಯಕ್ಷ ನಾಚಪ್ಪ ತಿಳಿಸಿದ್ದಾರೆ.