ಕುಶಾಲನಗರ, ಜು. 10: ದೇಶದ ಅಭಿವೃದ್ಧಿ, ಪ್ರಗತಿ ಶಾಲೆಗಳ ಕೊಠಡಿಗಳಲ್ಲಿ ಸೃಷ್ಠಿಸಲು ಸಾಧ್ಯ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ರಮೇಶ್ ನರಸಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾರಂಗಿಯ ಅತ್ತೂರು ಬಳಿಯ ಜ್ಞಾನಗಂಗಾ ವಸತಿ ಶಾಲೆಯ ಆವರಣದಲ್ಲಿ 2018-19ನೇ ಸಾಲಿನ ವಾರ್ಷಿಕ ಸಹಪಠ್ಯ ಚಟುವಟಿಕೆ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಜೀವನ ಅಮೂಲ್ಯದ್ದಾಗಿದೆ. ಶಿಸ್ತು, ಶ್ರಮ, ಪ್ರಾಮಾಣಿಕತೆ ಮೂಲಕ ಜೀವನದ ಗುರಿ ಹೊಂದಬಹುದು ಎಂದರು.

ಜ್ಞಾನಗಂಗಾ ಎಜ್ಯುಕೇಶನ್ ಟ್ರಸ್ಟ್‍ನ ಟ್ರಸ್ಟಿ ಸುಧೀರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಪ್ರಧಾನ ವಿಜಯಕೃಷ್ಣ, ಟ್ರಸ್ಟಿ ಶೋಭಾ ಅನಂತ್, ಉಪ ಪ್ರಾಂಶುಪಾಲ ನಾಗರಾಜ್ ಇದ್ದರು. 2018-19 ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಮುಖ್ಯ ಅತಿಥಿಗಳು ಪ್ರತಿಜ್ಞಾ ವಿಧಿ ಬೋಧಿಸಿ ಅಭಿನಂದನೆ ಸಲ್ಲಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಚಟುವಟಿಕೆಗಳು ನಡೆದವು.

ವಿದ್ಯಾರ್ಥಿನಿ ಕಾವೇರಮ್ಮ ಸ್ವಾಗತಿಸಿ, ಸಿ.ಜೆ. ಮೌನ, ಹೆಚ್.ಜಿ. ಶಮಿತ್ ಕಾರ್ಯಕ್ರಮ ನಿರೂಪಿಸಿದರು.