ಮಡಿಕೇರಿ, ಜು. 10: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2018-19 ನೇ ಸಾಲಿನ ಹದಿನಾಲ್ಕನೇ ವಾರ್ಷಿಕ ಶಿಲ್ಪ ಕಲಾಪ್ರದರ್ಶನ ಬಹುಮಾನಕ್ಕಾಗಿ ಶಿಲ್ಪ ಕಲಾವಿದರಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
ಕರ್ನಾಟಕದ ನಿವಾಸಿಗಳಾಗಿರುವ ಅಥವಾ ಕಳೆದ 5 ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವ ಕಲಾವಿದರು ಈ ಕಲಾ ಪ್ರದರ್ಶನದಲ್ಲಿ ಭಾಗವಹಿಸಬಹುದಾಗಿದೆ, ಸಾಂಪ್ರದಾಯಿಕ ಮತ್ತು ಸಮಕಾಲೀನ ಶಿಲ್ಪಕಲೆಯ ಹದಿನಾಲ್ಕನೇ ವರ್ಷದ ಶಿಲ್ಪಕಲಾ ಪ್ರದರ್ಶನದ ಬಹುಮಾನಕ್ಕೆ ತೀರ್ಪುಗಾರರಿಂದ ಆಯ್ಕೆ ಮಾಡಿದ ಒಟ್ಟು ಆರು ಕಲಾಕೃತಿಗಳಿಗೆ ತಲಾ ರೂ. 25 ಸಾವಿರ ರೂಪಾಯಿಗಳ ನಗದು ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವದು.
14ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನದ ಆಯ್ಕೆಗೆ ತೀರ್ಪುದಾರರೇ ಅಂತಿಮ ತೀರ್ಮಾನ. ಈ ಕಲಾಪ್ರದರ್ಶನದಲ್ಲಿ ಭಾಗವಹಿಸಲಿಚ್ಚಿಸುವ ಕಲಾವಿದರು ತಮ್ಮ ಕಲಾಕೃತಿಗಳ ನಿಗದಿತ ಅರ್ಜಿಯೊಂದಿಗೆ ಸಲ್ಲಿಸಬೇಕು. (2017ರ ಹಿಂದೆ ರಚಿತವಾದ ಕಲಾಕೃತಿಗಳನ್ನು ಅಕಾಡೆಮಿಯು ಬಹುಮಾನಕ್ಕಾಗಿ ಪರಿಗಣಿಸುವದಿಲ್ಲ). ಪ್ರದರ್ಶನಕ್ಕೆ ಕಳುಹಿಸುವ ಶಿಲ್ಪಗಳು ಗರಿಷ್ಠ (2) ಅಡಿಗಳ ಪ್ರಮಾಣದ ಲೋಹ, ಮರ, ಕಲ್ಲು, ಮಿಶ್ರಮಾಧ್ಯಮದಲ್ಲಿ ಇರಬೇಕು. ಅನುಸೂಚಿಯನ್ನು ಸರಿಯಾಗಿ ಭರ್ತಿ ಮಾಡಿ ಮೂಲ ಕಲಾಕೃತಿಯೊಂದಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ಅರ್ಜಿ ತಾ. 31 ರ ವರೆಗೆ ಕಳುಹಿಸಬೇಕು. ಅವಧಿ ಮುಗಿದ ನಂತರ ಬರುವ ಯಾವದೇ ಅರ್ಜಿ ಸ್ವೀಕರಿಸುವದಿಲ್ಲ. ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕೆ ವ್ಯಕ್ತಿ ಪರಿಚಯ, ಗುರುತಿನ ಚೀಟಿ, ಮತ್ತು ಅವರ ಭಾವಚಿತ್ರದೊಂದಿಗೆ ಪ್ರವೇಶ ಶುಲ್ಕ ರೂ. 300 ಗಳ ನಗದು ಅಥವಾ ರಿಜಿಸ್ಟ್ರಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ಸಲ್ಲುವಂತೆ ಪಡೆದು ಡಿ.ಡಿ. ಮೂಲಕ ಅಕಾಡೆಮಿಗೆ ನೀಡಿ ರಸೀದಿ ಪಡೆಯಬೇಕು.
ಹೆಚ್ಚಿನ ವಿವರಗಳಿಗೆ ರಿಜಿಸ್ಟ್ರಾರ್ ಕರ್ನಾಟಕ ಶಿಲ್ಪಕಲಾ ಅಕಾಡೆಮಿ 1 ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು-560002 (ದೂ; 080-22278725) ಇವರನ್ನು ಸಂಪರ್ಕಿಸಲು ಕೋರಿದೆ. ಅರ್ಜಿಗಳನ್ನು ಅಕಾಡೆಮಿಯ ವೆಬ್‍ಸೈಟ್ ಮೂಲಕ ತಿತಿತಿ.ಞಚಿಡಿಟಿಚಿಣಚಿಞಚಿshiಟಠಿಚಿಞಚಿಟಚಿಚಿಛಿಚಿಜemಥಿ.oಡಿg ಪಡೆಯಬಹುದು. ಅರ್ಜಿ ಸಲ್ಲಿಸಲು ತಾ. 28 ಕೊನೆಯ ದಿನವಾಗಿದೆ. ಅರ್ಜಿಯನ್ನು ರಿಜಿಸ್ಟಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, 1 ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು-560002 ಇವರಿಗೆ ಖುದ್ದಾಗಿ ಅಥವಾ ರೂ. 10 ಗಳ ಅಂಚೆ ಚೀಟಿ ಲಗತ್ತಿಸಿದ ಸ್ವ-ವಿಳಾಸವುಳ್ಳ (ದೂರವಾಣಿ ಸಂಖ್ಯೆಯೊಂದಿಗೆ) ಲಕೋಟೆಯನ್ನು ಕಳುಹಿಸಿ ಪಡೆಯಬಹುದಾಗಿದೆ. ಕಳುಹಿಸಲ್ಪಡುವ ಲಕೋಟೆಯ ಮೇಲೆ 14ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕಾಗಿ ಅರ್ಜಿ ಎನ್ನುವದನ್ನು ಬರೆದಿರಬೇಕು.
ಪ್ರೋತ್ಸಾಹಧನಕ್ಕೆ
ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2017-18ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 95 ಮತ್ತು ಹೆಚ್ಚಿನ ಅಂಕಗಳಿಂದ ಪಾಸಾದ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಹೆಚ್ಚಿನ ಅಂಕ ಪಡೆದಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ಅಭ್ಯರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಇಲಾಖಾ ವೆಟ್‍ಸೈಟ್ ತಿತಿತಿ.goಞಜom.ಞಚಿಡಿ.ಟಿiಛಿ.iಟಿ ಆನ್‍ಲೈನ್ ಮೂಲಕ ಆಗಸ್ಟ್ 5 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ: 08272-225528/ 220214 ಸಂಪರ್ಕಿಸಬಹದಾಗಿದೆ.