ವೀರಾಜಪೇಟೆ, ಜು. 10: ಯಾವದೇ ವಯೋಮಿತಿಗೆ ಸೀಮಿತ ವಾಗದೆ ಅಡ್ಡ ಪರಿಣಾಮ ಗಳಿಲ್ಲದೆ ಸರ್ವ ರೋಗಗಳಿಗೆ ಸೆರಾಕೇರ್ ಹೆಲ್ತ್ ಸೆಂಟರ್ ವೀರಾಜಪೇಟೆ ಪ್ರಕಾಶ್ ಟವರ್ಸ್‍ನಲ್ಲಿರುವ ಉಚಿತ ಚಿಕಿತ್ಸಾ ಆರೋಗ್ಯ ಸೇವಾ ಕೇಂದ್ರದಲ್ಲಿ ಕಳೆದ ಮೂರು ತಿಂಗಳಿಂದ ನೀಡುತ್ತಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಬಸವರಾಜ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1999ರಲ್ಲಿ ಸೌತ್ ಕೋರಿಯಾದ ನಾಸಾ ವಿಜ್ಞಾನಿ ಜಾಂಗೀಯಾಂಗ್ ಎಂಬವರು ಸಂಶೋಧನೆಯಿಂದ ಈ ನೈಸರ್ಗಿಕ ಚಿಕಿತ್ಸೆಯನ್ನು ಕಂಡು ಹಿಡಿದರು. ಈ ಸಂಸ್ಥೆ ಕೋರಿಯಾ ದೇಶದ ಸಹಾಯ ಹಸ್ತದೊಂದಿಗೆ 2007ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಗೊಂಡಿದೆ. ಕರ್ನಾಟಕ ದಲ್ಲಿ ಒಟ್ಟು 60 ಶಾಖೆಗಳಿವೆ. ನೈಸರ್ಗಿಕ ಥೆರಪಿಯಿಂದ ಜೇಡ್ ಎಂಬ ಕಲ್ಲಿನಿಂದ ಡಿ ವಿಟಮಿನ್ ಉತ್ಪಾದನೆಗೊಂಡು ದೇಹದ ಅನಗತ್ಯ ಲವಣಾಂಶಗಳನ್ನು ಹೊರಹಾಕುವದರಿಂದ ರಕ್ತ ಶುದ್ದೀಕರಣ, ರಕ್ತದ ಪರಿಚಲನೆ ಯಾಗಲಿದೆ. ಮನುಷ್ಯನಿಗೆ ಯಾವದೇ ಕಾಯಿಲೆ ಇದ್ದರೂ 120 ದಿನಗಳ ಈ ನೈಸರ್ಗಿಕ ಚಿಕಿತ್ಸೆ ಯಿಂದ ರೋಗ ಮುಕ್ತವಾಗಲಿದ್ದಾರೆ ಎಂದರು.

ಬೆನ್ನು ನೋವು, ಕತ್ತು ನೋವು, ಮೈನೋವು, ಮಂಡಿ ನೋವು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಿವಿ ಮೂಗು ಗಂಟಲು ಬೇನೆ, ಥೈರಾಯ್ಡ್, ಹೃದಯ, ಮೂತ್ರಕೋಶದ ತೊಂದರೆ, ಮೂಲ ವ್ಯಾಧಿ ಹರ್ನಿಯಾ, ಅಸ್ತಮಾ, ಪಾರ್ಶವಾಯು, ಅರ್ಧ ತಲೆನೋವು, ನರಗಳ ದೌರ್ಬಲ್ಯ, ಕಣ್ಣಿನ ತೊಂದರೆ ಸೇರಿದಂತೆ ಇತರ ಎಲ್ಲ ಕಾಯಿಲೆಗಳನ್ನು ನಿಗದಿತ ಅವಧಿಯಲ್ಲಿ ಗುಣಪಡಿಸ ಲಾಗುವದು ಎಂದರು.

ಗೋಷ್ಠಿಯಲ್ಲಿ ದಾದಿಯ ರಾದ ವಸಂತಿ, ಭವ್ಯ, ಪಳಂಗಪ್ಪ ಮೊದಲಾದವರು ಇದ್ದರು.