ಮಡಿಕೇರಿ, ಜು. 10: ಪ್ರೀತಿ ಎಂಬದೇ ಹೀಗೆ... ಅದರ ಸೆಳೆತಕ್ಕೆ ಸಿಕ್ಕದವರು ಸದಾ ಚಡಪಡಿಕೆಯಲ್ಲೇ ಇರುತ್ತಾರೆ. ಪ್ರಿಯಕರನೊಂದಿಗೆ ಪ್ರೇಯಸಿ; ಪ್ರೇಯಸಿಯೊಂದಿಗೆ ಪ್ರಿಯಕರ ತಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಸದಾ ಹಂಬಲಿಸುತ್ತಾರೆ ಅದಕ್ಕಾಗಿ ಹತ್ತು ಹಲವು ರೀತಿಯ ಪ್ರಯತ್ನಗಳೂ ನಡೆಸುತ್ತಾರೆ.
ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪ್ರೇಯಸಿಯ ಕುರಿತು ತನ್ನ ಮನದಾಳವನ್ನು 100 ರೂ. ನೋಟಿನಲ್ಲಿ ವಿವರಿಸಿದ್ದಾನೆ. ಆಕಾಶವಾಣಿ ಸಿಬ್ಬಂದಿ ರಫೀಕ್ ಅಹ್ಮದ್ ಅವರಿಗೆ ಸಿಕ್ಕಿದ 100 ರೂ. ನೋಟಿನಲ್ಲಿ ‘ಮುಚ್ಚದಿರು ಗೆಳತಿ ನಿನ್ನ ಕಣ್ಣರೆಪ್ಪೆಗಳ, ಇನ್ನೂ ನೋಡಬೇಕಿದೆ ನಿನ್ನ ಕಣ್ಣೊಳಗಿನ ಪ್ರೀತಿಯ ಭಾವನೆಗಳ, ನನ್ನ ಪ್ರತಿಬಿಂಬಗಳ..!’ ಎಂದು ಬರೆದಿದ್ದು, ಯಾವದೇ ಹೆಸರನ್ನು ನಮೂದಿಸಿಲ್ಲ.