ಕುಟ್ಟ, ಜು. 10: ಅಕ್ರಮವಾಗಿ ಜಿಂಕೆ ಬೇಟೆಯಾಡಿ ಮಾಂಸ ಕೊಂಡೊಯ್ಯುತ್ತಿರುವದನ್ನು ಪತ್ತೆ ಹಚ್ಚಿದ ಅಬಕಾರಿ ಅಧಿಕಾರಿಗಳು ಕುಟ್ಟ ಗಡಿ ಭಾಗವಾದ ತೋಲ್ಪಟ್ಟಿ ಗೇಟ್‍ನಲ್ಲಿ ಇಬ್ಬರನ್ನು ಸೆರೆ ಹಿಡಿದು ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಬೈಕ್‍ನಲ್ಲಿ (ಪಿ.ವೈ. 03-ಎ-8510) ಮಾಹೆ ನಿವಾಸಿಗಳಾದ ವಿಜೇಶ್, ಅಜೀಶ್ ಎಂಬವರುಗಳು 3.30 ಕೆ.ಜಿ.ಯಷ್ಟು ಮಾಂಸವನ್ನು ವಶಪಡಿಸಿಕೊಂಡು ಇಬ್ಬರನ್ನು ಅರಣ್ಯ ಇಲಾಖಾ ವಶಕೊಪ್ಪಿಸಿದ್ದಾರೆ. ವರದಿ : ತಿಮ್ಮು