ನಾಪೆÇೀಕ್ಲು, ಜು. 11: ನಾಪೆÇೀಕ್ಲು ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ನಡೆದ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಗೈರು, ರಸ್ತೆ, ಪ್ಲಾಸ್ಟಿಕ್, ಸ್ವಚ್ಛತೆ, ಕುಡಿಯುವ ನೀರಿನ ಶುದ್ಧೀಕರಣ, ನಾಯಿ ಹಾವಳಿ, ಬಿಡಾಡಿ ದನ, ವೈದ್ಯರ ಕೊರತೆ, ಆರ್.ಟಿ.ಸಿ., ಭತ್ತಕ್ಕೆ ಬೆಂಬಲ ಬೆಲೆ, ಬೀದಿ ದೀಪ, ಚರಂಡಿ, ಸೋರುತ್ತಿರುವ ಅಂಗನವಾಡಿ ಕಟ್ಟಡಗಳು ಸೇರಿದಂತೆ ಸಮಸ್ಯೆಗಳ ಸರಮಾಲೆಯೇ ಅನಾವರಣ ಗೊಂಡಿತು. ಸಭೆ ಆರಂಭ ಗೊಳ್ಳುತ್ತಿದ್ದಂತೆ ಸಭೆಗೆ ಹಾಜರಾಗದ ಇಲಾಖಾಧಿಕಾರಿಗಳ ಮಾಹಿತಿ ನೀಡುವಂತೆ ಒತ್ತಾಯಿಸಿ ನಾಪೆÇೀಕ್ಲು ವ್ಯಾಪ್ತಿಯ ಅಂಗನವಾಡಿ ಕಟ್ಟಡಗಳು ಸೋರುತ್ತಿರುವ ಬಗ್ಗೆ ಪುಲ್ಲೇರ ಬೋಪಣ್ಣ ಪ್ರಸ್ತಾಪಿಸಿ ಕಂದಾಯ ಪರಿವೀಕ್ಷಕರ ಗೈರು, ಪ್ಲಾಸ್ಟಿಕ್ ನಿಷೇಧಿಸಲು ಪಂಚಾಯಿತಿ ಕ್ರಮ ಕೈಗೊಳ್ಳದ ಬಗ್ಗೆ ಬಿದ್ದಾಟಂಡ ಜಿನ್ನು ನಾಣಯ್ಯ ಆಕ್ಷೇಪಿಸಿದರು. ಪಂಚಾಯಿತಿ ಆಡಳಿತÀ ನಿರ್ಲಕ್ಷ್ಯ ಮತ್ತು ಬೇಜಬ್ದಾರಿ ವರ್ತನೆ ತೋರುತ್ತಿದೆ ಎಂದು ಕೊಂಡೀರ ನಾಣಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ನೋಡಲ್ ಅಧಿಕಾರಿ ಸವಿತ ಸಭೆಗೆ ಹಾಜರಾಗದ ಅಧಿಕಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವದು. 251 ಅಂಗನವಾಡಿಗಳಿಗೆ 10 ಮೇಲ್ವಿಚಾರಕರು ಇರಬೇಕು. ಆದರೆ ಎಲ್ಲಾ ಹುದ್ದೆಗಳು ಪ್ರಸ್ತುತ ಖಾಲಿ ಇವೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವದು ಎಂದು ಭರವಸೆ ನೀಡಿದರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಆರ್. ಕೇಶವ ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಲಾಗುವದು ಎಂದರು.

ಶಾಲಾ ವಠಾರದಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ. ನಿಮಗೆ ಮಾನವೀಯತೆ ಇದೆಯೇ?. ನಿಮ್ಮಿಂದ ಅಧಿಕಾರ ನಡೆಸಲು ಸಾಧ್ಯವಿಲ್ಲದಿದ್ದರೆ, ಕುರ್ಚಿಯಿಂದ ಕೆಳಗಿಳಿಯಿರಿ ಎಂದು ಕೇಲೇಟಿರ ಮಾಲ ಬೋಪಯ್ಯ ಅಧ್ಯಕ್ಷರನ್ನು ತೀಕ್ಷ್ಣವಾಗಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಸಮಸ್ಯೆಗಳ ಬಗ್ಗೆ ನಮಗೆ ತಿಳಿಸಬೇಕು ಎಂದಾಗ ಅದಕ್ಕೆ ಕೇಲೇಟಿರ ದೀಪು ದೇವಯ್ಯ, ನಾಟೋಳಂಡ ಸಚೀನ್, ಕಸ್ತೂರಿ, ಬಾಳೆಯಡ ಮೇದಪ್ಪ, ಕೇಟೋಳಿರ ಹರೀಶ್ ಪೂವಯ್ಯ ಒಕ್ಕೊರಲಿನಿಂದ ಆಕ್ಷೇಪ ವ್ಯಕ್ತಪಡಿಸಿದರು.

ಕಂಗಾಂಡ ಭೀಮಯ್ಯ ಅಜ್ಜಿಮುಟ್ಟದ ಸರಕಾರಿ ಪ್ರಾಥಮಿಕ ಶಾಲೆಗೆ 60 ವರ್ಷಗಳಿಂದ ಯಾರೂ ರಸ್ತೆ ನಿರ್ಮಿಸಲು ಮುಂದೆ ಬಂದಿಲ್ಲ. ಇನ್ನಾದರೂ ಈ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಕ್ರಮ ಕೈಗೊಳ್ಳುವ ಭರವಸೆÉ ನೀಡಿದರು.

ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಂಸ, ಮೀನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪ ಪಡಿಸಿದ ಬಗ್ಗೆ ಮಾತನಾಡಿದ ವರ್ತಕ ಪ್ರತೀಪ್ ಶೈತ್ಯಾಗಾರಗಳಲ್ಲಿ ಮಾಂಸ ಮಾರಾಟ ಮಾಡುವವರು ವಾರ್ಷಿಕ ರೂ. 6500 ಸುಂಕವನ್ನು ಗ್ರಾಮ ಪಂಚಾಯಿತಿಗೆ ನೀಡುತ್ತಿದ್ದರು. ಆದರೆ ಗ್ರಾಮ ಪಂಚಾಯಿತಿ ಏಕಾಏಕಿ ವಾರ್ಷಿಕ ಸುಂಕ ಹೆಚ್ಚಿಸಿದ್ದು, ಬೆಲೆ ಹೆಚ್ಚಾಗಲು ಗ್ರಾ.ಪಂ. ಕಾರಣ ಎಂದರು. ಇದಕ್ಕೆ ಉತ್ತರಿಸಿದ ಪಿ.ಡಿ.ಓ. ಇದು ಗ್ರಾ.ಪಂ. ಸಭೆಯಲ್ಲಿನ ತೀರ್ಮಾನದಂತೆ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಮಸ್ಯೆಗಳ ಬಗ್ಗೆ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಎನ್.ಎಸ್. ಉದಯ ಶಂಕರ್, ಅರೆಯಡ ಅಶೋಕ್ ತಿರೋಡಿರ ಮುದ್ದಪ್ಪ, ಕಂಗಾಂಡ ಜಾಲಿ ಪೂವಪ್ಪ, ಪಾಡಿಯಮ್ಮಂಡ ಮನು ಮಹೇಶ್, ಕನ್ನಂಬಿರ ಸುಧಿ ತಿಮ್ಮಯ್ಯ, ಹೆಚ್.ಎ. ಬೊಳ್ಳು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕೆ.ಎ. ಇಸ್ಮಾಯಿಲ್ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಸದಸ್ಯರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ, ಸದಸ್ಯರು. ಗ್ರಾ.ಪಂ. ಸಿಬ್ಬಂದಿಗಳಾದ ಆಮೆಮನೆ ನಂದಿನಿ, ಮುಂಡೋಟಿರ ತಂಗಮ್ಮ, ಬೊಪ್ಪಂಡ ವೇಣು ಸುಬ್ಬಯ್ಯ, ಶಿವಚಾಳಿಯಂಡ ಕುಟ್ಟಪ್ಪ ಇದ್ದರು.