ನಾಪೆÇೀಕ್ಲು, ಜು. 11: ನಗರ ಪ್ರದೇಶಗಳಲ್ಲಿ ಕುಡಿಯವ ನೀರಿಗೆ ಸಮಸ್ಯೆಯಾಗುವದು ಸಾಮಾನ್ಯ. ಆದರೆ ಕಾವೇರಿ ನಾಡಿನಲ್ಲಿ ಅದರಲ್ಲಿಯೂ ಮಳೆಗಾಲದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ ಎಂದರೆ ಇದು ಗ್ರಾಮ ಪಂಚಾಯಿತಿ ಆಡಳಿತ ವೈಖರಿಗೆ ಕೈಗನ್ನಡಿ ಎನ್ನಬಹುದೇ? ಇದಕ್ಕೆ ಪ್ರತ್ಯಕ್ಷ ಸಾಕ್ಷಿ 23 ಸದಸ್ಯರನ್ನು ಹೊಂದಿರುವ ನಾಪೆÇೀಕ್ಲು ಗ್ರಾಮ ಪಂಚಾಯಿತಿ. ಜನರಿಗೆ ಇಲ್ಲಸಲ್ಲದ ಆಮೀಷ ತೋರಿಸಿ, ಮತ ಪಡೆದು ಚುನಾಯಿತರಾದ ಬಳಿಕ ಅವರೊಂದಿಗೆ ಉಡಾಫೆತನ ತೋರುವ ಜನನಾಯಕರ ಕಥೆಯಿದು.
ನಾಪೆÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಬೇತು ಗ್ರಾಮದ ಸುಮಾರು 40 ಮನೆ ಮಂದಿಗೆ ಮೇ 8 ರಿಂದ ಗ್ರಾಮ ಪಂಚಾಯಿತಿ ‘ನಲ್ಲಿ’ ನೀರು ಪೂರೈಸಿಲ್ಲ. ಕಾರಣ ಮೋಟಾರ್ ರಿಪೇರಿ. ಮೇ 8 ರಿಂದ ಜು. 6 ರವರೆಗೂ ಗ್ರಾಮ ಪಂಚಾಯಿತಿಯಿಂದ ಒಂದು ನೀರಿನ ಮೋಟಾರು ದುರಸ್ತಿಗೊಳಿಸಲು ಸಾಧ್ಯವಾಗಿಲ್ಲದಿರುವಾಗ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಚಂಗೇಟಿರ ಶಂಬು ಅಚ್ಚಯ್ಯ, ಕಲಿಯಂಡ ತಿಮ್ಮಯ್ಯ, ಕೊಂಡಿರ ಪೆÇನ್ನಣ್ಣ, ದೇವಪ್ಪ, ಇಬ್ರಾಹಿಂ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾವೇರಿ ನದಿ ಪಕ್ಕದಲ್ಲಿ ಹರಿಯುತ್ತಿದ್ದರೂ ಗ್ರಾಮ ಪಂಚಾಯಿತಿ ದೂರದ ಕಕ್ಕಬ್ಬೆ ಹೊಳೆಯ ಎತ್ತಕಡು ಎಂಬಲ್ಲಿ ಜಾಕ್‍ವೆಲ್ ನಿರ್ಮಿಸಿ, ಮಕ್ಕಿ ದೇವಳ ರಸ್ತೆಯಲ್ಲಿ ಟ್ಯಾಂಕ್ ನಿರ್ಮಿಸಿ, ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಬೇತು ರಸ್ತೆಯ ಮಕ್ಕಿ ದೇವಳದವರೆಗಿನ ಜನರಿಗೆ ಮಾತ್ರ ನೀರು ಸರಬರಾಜು ಮಾಡುತ್ತಿಲ್ಲ ಎಂದು ದೂರಿದ್ದಾರೆ.
ಮೇ 8 ರಿಂದ ಈ ವಿಭಾಗಕ್ಕೆ ನೀರು ಪೂರೈಸಿಲ್ಲ. ದೂರು ನೀಡಿದರೆ ಮೋಟಾರು ರಿಪೇರಿಯಾಗಿದೆ ಎನ್ನತ್ತಾರೆ. ನಾವು ನೀರಿಗೆ ಏನು ಮಾಡಬೇಕು ಎಂಬುದನ್ನು ಸಂಬಂಧಪಟ್ಟ ಇಲಾಖಾಧಿಕಾರಿಗಳು ತಿಳಿಸಬೇಕು ಎಂದು ಚಂಗೇಟಿ ಅಚ್ಚಯ್ಯ ಪ್ರಶ್ನಿಸಿದ್ದಾರೆ.
ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ 20 ಮೋಟಾರುಗಳಿವೆ. ಮೋಟಾರು ಹಾಳಾಗಿರುವದೇ ಸಮಸ್ಯೆಗೆ ಕಾರಣ ಇನ್ನೆರಡು ದಿನದಲ್ಲಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವದು ಎಂದು ನಾಪೆÇೀಕ್ಲು ಗ್ರಾ.ಪಂ. ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ ತಿಳಿಸಿದ್ದಾರೆ.