ಮಡಿಕೇರಿ, ಜು. 10: ಕಾವೇರಿ ಪುನರುತ್ಥಾನದ ಅಭಿಯಾನಕ್ಕಾಗಿ “ನಮಾಮಿ ಕಾವೇರಿ ಮಾ” ಎಂಬ ನೂತನ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿಯ ಮೊದಲ ಕಾರ್ಯಕ್ರಮವಾಗಿ ‘ಮನೆಗೊಂದು ಗಿಡ, ಮನೆಯಲ್ಲೊಂದು ಗಿಡ’ ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದೆ. ತಾ.16 ರಂದು ತಲಕಾವೇರಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವದು ಎಂದು ಸಮಿತಿಯ ನೂತನ ಅಧ್ಯಕ್ಷ ಕೋಡಿ ಪೊನ್ನಪ್ಪ, ಕಾರ್ಯಾಧ್ಯಕ್ಷ ಯಂ.ಬಿ. ದೇವಯ್ಯ ಹಾಗೂ ಸಂಚಾಲಕ ಯಂ.ಯಂ. ರವೀಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರ್ಜಲ ಮಟ್ಟವನ್ನು ವೃದ್ಧಿಗೊಳಿಸುವ ಸಸಿಗಳನ್ನು ನೆಡುವ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಆರಂಭಿಸಲಾಗುವದು ಎಂದರು. ಜಿಲ್ಲೆಯ ಪ್ರತಿ ದೇವಾಲಯಗಳ ಪ್ರಮುಖರು ಹಾಗೂ ಸಾರ್ವಜನಿಕರು ಪರಿಸರಕ್ಕೆ ಮತ್ತು ಪೂಜೆಗೆ ಪೂರಕವಾದ ಸಸಿಗಳನ್ನು ತೆಗೆದುಕೊಂಡು ಬಂದು ತಲಕಾವೇರಿ ಭಾಗದಲ್ಲಿ ನೆಡಬಹುದಾಗಿದೆ. ಅಲ್ಲದೆ ಅರಣ್ಯ ಇಲಾಖೆ ನೀಡುವ ಸಸಿಗಳನ್ನು ಸಮಿತಿ ಮೂಲಕ ಬಂದವರಿಗೆ ಹಂಚಲಾಗುವದು ಎಂದರು.
ಆಂದೋಲನದ ಎರಡನೇ ಭಾಗವಾಗಿ ವಿನಾಯಕ ಚತುರ್ಥಿಯಂದು ಕಾವೇರಿ ಜಾಗೃತಿ ರಥಯಾತ್ರೆಯನ್ನು ಆರಂಭಿಸಿ ಕಾವೇರಿ ತುಲಾ ಸಂಕ್ರಮಣದ ದಿನದಂದು ಮುಕ್ತಾಯಗೊಳಿಸ ಲಾಗುವದು. ರಥವು ಪ್ರತಿ ತಾಲೂಕು ಹಾಗೂ ಗ್ರಾಮಗಳಲ್ಲಿ ಸಂಚರಿಸಲಿವೆ. ಕೊಡಗಿನ ಪ್ರತೀ ಕುಟುಂಬಗಳಿಗೆ ಕಾವೇರಿ ನದಿಯ ಪಾವಿತ್ರ್ಯತೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವದು ಎಂದು ತಿಳಿಸಿದರು.
ಭಾರತದ ಸಪ್ತನದಿಗಳಲ್ಲಿ ಒಂದಾಗಿರುವ ದಕ್ಷಿಣ ಗಂಗೆ ಎಂದು ಪ್ರಸಿದ್ಧಿ ಪಡೆದಿರುವ ಕಾವೇರಿ ನದಿಯ ಒಡಲು ಬರಿದಾಗಿ ನೀರು ಕಲುಷಿತವಾಗಿ ಕಲ್ಮಶ ಮತ್ತು ವಿಷಯುಕ್ತವಾಗುತ್ತಿದೆ. ಪವಿತ್ರ ಕಾವೇರಿ ನದಿಯು ದೇಶದಲ್ಲಿ ಅತ್ಯಧಿಕ ಕಲುಷಿತ ನದಿಗಳ ಸಾಲಿನಲ್ಲಿ ಸೇರಿದೆ. ಇದಕ್ಕೆ ಪೂರಕವಾಗಿ ತೀರ್ಥಕ್ಷೇತ್ರವಾದ ತಲಕಾವೇರಿಯನ್ನು ಪ್ರವಾಸಿ ಕ್ಷೇತ್ರವಾಗಿ ಮಾರ್ಪಡಿಸಿ ಕ್ಷೇತ್ರದ ಸಂಪ್ರದಾ ಯಗಳಿಗೆ ಅಪಚಾರವಾಗುತ್ತಿದೆ ಎಂದು ಪ್ರಮುಖರು ಅಭಿಪ್ರಾಯಪಟ್ಟರು. ಕಾವೇರಿ ತಾಯಿ ದುಃಖಿತಳಾದ ಪರಿಣಾಮ ಜನರಲ್ಲಿ ಶ್ರದ್ಧಾಭಕ್ತಿ ಕಡಿಮೆಯಾಗುತ್ತಿದೆ, ಕುಟುಂಬ ದೊಳಗೆ ಕಲಹ, ಜಾತಿ ಜಾತಿಯಲ್ಲಿ ವೈಮನಸ್ಯ ಹೆಚ್ಚಾಗುತ್ತಿದೆ. ನಾಡಿನ ಪುರಾತನ ಸಂಪ್ರದಾಯ ಮತ್ತು ಸಂಸ್ಕಾರಗಳು ಕ್ಷೀಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾವೇರಿ ನದಿ ಜಾಗೃತಿ ಜನಾಂದೋಲನ ಕಾವೇರಿಯ ಭಕ್ತರನ್ನು ಒಗ್ಗೂಡಿಸಿ ಮಾಹಿತಿ ಹಾಗೂ ಸಂಸ್ಕಾರಗಳನ್ನು ಹೇಳಿಕೊಡುವ ಕಾರ್ಯಕ್ರಮವಾಗಿದೆ ಎಂದರು.
ನದಿಯು ದೇಶದಲ್ಲಿ ಅತ್ಯಧಿಕ ಕಲುಷಿತ ನದಿಗಳ ಸಾಲಿನಲ್ಲಿ ಸೇರಿದೆ. ಇದಕ್ಕೆ ಪೂರಕವಾಗಿ ತೀರ್ಥಕ್ಷೇತ್ರವಾದ ತಲಕಾವೇರಿಯನ್ನು ಪ್ರವಾಸಿ ಕ್ಷೇತ್ರವಾಗಿ ಮಾರ್ಪಡಿಸಿ ಕ್ಷೇತ್ರದ ಸಂಪ್ರದಾ ಯಗಳಿಗೆ ಅಪಚಾರವಾಗುತ್ತಿದೆ ಎಂದು ಪ್ರಮುಖರು ಅಭಿಪ್ರಾಯಪಟ್ಟರು. ಕಾವೇರಿ ತಾಯಿ ದುಃಖಿತಳಾದ ಪರಿಣಾಮ ಜನರಲ್ಲಿ ಶ್ರದ್ಧಾಭಕ್ತಿ ಕಡಿಮೆಯಾಗುತ್ತಿದೆ, ಕುಟುಂಬ ದೊಳಗೆ ಕಲಹ, ಜಾತಿ ಜಾತಿಯಲ್ಲಿ ವೈಮನಸ್ಯ ಹೆಚ್ಚಾಗುತ್ತಿದೆ. ನಾಡಿನ ಪುರಾತನ ಸಂಪ್ರದಾಯ ಮತ್ತು ಸಂಸ್ಕಾರಗಳು ಕ್ಷೀಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾವೇರಿ ನದಿ ಜಾಗೃತಿ ಜನಾಂದೋಲನ ಕಾವೇರಿಯ ಭಕ್ತರನ್ನು ಒಗ್ಗೂಡಿಸಿ ಮಾಹಿತಿ ಹಾಗೂ ಸಂಸ್ಕಾರಗಳನ್ನು ಹೇಳಿಕೊಡುವ ಕಾರ್ಯಕ್ರಮವಾಗಿದೆ ಎಂದರು.