ಗೋಣಿಕೊಪ್ಪ ವರದಿ, ಜು. 11: ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಅಶ್ವಿನಿ ಸ್ಪೋಟ್ಸ್ ಫೌಂಡೇಷನ್ನ ಕಾಲ್ಸ್ ಶಾಲಾ ತಂಡ 62 ಪದಕ ಗಿಟ್ಟಿಸಿಕೊಂಡಿದೆ. ಆ ಮೂಲಕ ರೋಲಿಂಗ್ ಟ್ರೋಫಿ ತನ್ನದಾಗಿಸಿಕೊಂಡಿದೆ.ಬೆಂಗಳೂರು ಸಾಯ್ ಶೂಟಿಂಗ್ ರೇಂಜ್ನಲ್ಲಿ ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಹಿರಿಯ, ಕಿರಿಯ ಹಾಗೂ ಯುವ ತಂಡ ವಿಭಾಗಗಳಲ್ಲಿ 22 ಕ್ರೀಡಾಪಟುಗಳು ಪೀಪ್ ಸೈಟ್ ಮತ್ತು (ಮೊದಲ ಪುಟದಿಂದ) ಓಪನ್ ಸೈಟ್ ವಿಭಾಗಗಳಿಗೆ ಸ್ಪರ್ಧೆ ನಡೆಸಿ ಪದಕ ಪಡೆದುಕೊಂಡು ಸಾಧನೆ ಮಾಡಿದರು.
ತ್ರಿಶಾಲಿ ದೇವಯ್ಯ, ಇಟ್ಟೀರ ಅಧ್ವಿಕಾ ನಯನಾ, ತರಾನಾ ರಮೇಶ್ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುವ ಪ್ರೀ ನ್ಯಾಷನಲ್ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ವಿಶೇಷ ಸಾಧನೆ ಮಾಡಿದರು.ಪೀಪ್ ಸೈಟ್ ವಿಭಾಗದಲ್ಲಿ ತ್ರಿಶಾಲಿ ದೇವಯ್ಯ 4 ಚಿನ್ನ, 1 ಕಂಚು ಪಡೆದುಕೊಂಡು ಅತೀ ಹೆಚ್ಚು ಬಹುಮಾನ ಪಡೆದ ಬಾಲಕಿ ಎಂಬ ಕೀರ್ತಿಗೆ ಪಾತ್ರರಾದರು. ತರಾನಾ ರಮೇಶ್ 5 ಚಿನ್ನ, 3 ಬೆಳ್ಳಿ, 1 ಕಂಚು ಪಡೆದುಕೊಂಡು 8 ನೇ ಸ್ಥಾನ ಗಿಟ್ಟಿಸಿಕೊಂಡರು.
ಸೋನಿಕಾ ಮಹೇಶ್ 4 ಚಿನ್ನ, ತಲಾ 1 ಬೆಳ್ಳಿ ಹಾಗೂ ಕಂಚು, ರಿಯಾ ಅಮಿತ್ಪಟೇಲ್ಗೆ 2 ಚಿನ್ನ, 1 ಸಿಲ್ವರ್, ಜಸ್ತಿನ್ ಆಂತೋನಿ ಜೋಸ್ಗೆ 3 ಬೆಳ್ಳಿ, ಆರ್ಶ್ ವಿಮಲ್ಗೆ 3 ಬೆಳ್ಳಿ, ವಿತನ್ ಬೆಳ್ಯಪ್ಪಗೆ 3 ಬೆಳ್ಳಿ ಪಡೆದುಕೊಂಡರು.
ಹರ್ಷಲ್ ಕಾವೇರಿ 6 ಚಿನ್ನದ ಪದಕ ಗೆದ್ದುಕೊಂಡು ಸಾಧನೆ ಮಾಡಿದರು. ಎಸ್. ಯು. ದೇವಯ್ಯ 1 ಚಿನ್ನ, 2 ಬೆಳ್ಳಿ, 1 ಕಂಚು ಪದಕ ಗೆದ್ದುಕೊಂಡರು.
ಓಪನ್ ಸೈಟ್ ವಿಭಾಗದಲ್ಲಿ ಬಿಂದಿಯಾ ಕಾವೇರಮ್ಮ ಅವರಿಗೆ 3 ಚಿನ್ನ, 3 ಬೆಳ್ಳಿ, ಹರ್ಷವರ್ಧನ್ಗೆ 1 ಬೆಳ್ಳಿ, 1 ಕಂಚು, ಮಾಚಯ್ಯ ಬೋಪಣ್ಣಗೆ 1 ಬೆಳ್ಳಿ, 1 ಕಂಚು, ಓಶಿನ್ ಗಣಪತಿಗೆ 1 ಕಂಚು, ಬಾಚೇಟ್ಟೀರ ಕಾವೇರಪ್ಪಗೆ 1 ಬೆಳ್ಳಿ, 1 ಕಂಚು, ಪ್ರದೀಪ್ತಾ ವಿಜಯ್ 2 ಚಿನ್ನ, 1 ಕಂಚು, ಶಾಯಿನೇ ಆನ ಮೆನೆಸಸ್ಗೆ 1 ಕಂಚು, ವೀಕ್ಷಾ ಅಪ್ಪಯ್ಯಗೆ 1 ಚಿನ್ನ, ಎನ್.ಟಿ. ಆಯುಷ್ಗೆ 1 ಕಂಚು, ದೃವ್ ಪೊನ್ನಣ್ಣ 1 ಕಂಚು ಪಡೆದುಕೊಂಡರು. ಡಿ. ಪುನೀತ್ ಕುಮಾರ್ ತರಬೇತುದಾರರಾಗಿ ತಂಡದಲ್ಲಿದ್ದರು. -ವರದಿ - ಸುದ್ದಿಪುತ್ರ