ಸುಂಟಿಕೊಪ್ಪ, ಜು. 10 : ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ಕೊಠಡಿ ಕಾಮಗಾರಿ ನಡೆಸುವ ಸಲುವಾಗಿ ಕೆಳ ಭಾಗದಲ್ಲಿ ಸಮತಟ್ಟ್ಟು ಮಾಡಲಾಗಿತ್ತು. ಆದರೆ ಇದಕ್ಕೆ ತಡೆಗೋಡೆ ನಿರ್ಮಿಸದೆ ಇರುವದ ರಿಂದ ಮಣ್ಣು ಕುಸಿದು ಬಿದ್ದಿದ್ದು, 2 ಅಂತಸ್ತಿನ ಕಾಲೇಜು ಕಟ್ಟಡ ಮತ್ತು ಶೌಚಾಲಯ ಇಂದೋ ನಾಳೆಯೋ ಬೀಳುವ ಹಂತಕ್ಕೆ ತಲಪಿದೆ. ಕಳೆದ 3 ವರ್ಷಗಳ ಹಿಂದೆ ಆರಂಭವಾದ ಇಲ್ಲಿನ ಉಲುಗುಲಿ ರಸ್ತೆಯಲ್ಲಿರುವ 2 ಅಂತಸ್ತಿನ ಕಾಲೇಜು ಕಟ್ಟಡಕ್ಕೆ ಕಂಟಕÀ ಒದಗಿ ಬಂದಿದೆ. ಜೂನ್ ತಿಂಗಳಿನ ಪ್ರಾರಂಭದಲ್ಲಿ ಬಂದ ಮಳೆಗೆ ಕುಸಿದು ಬಿದ್ದಿತ್ತು. ಅವೈಜ್ಞಾನಿಕ ಕಾಮಗಾರಿ ಮತ್ತು ಇಂಜಿನಿಯರ್ ಗುತ್ತಿಗೆದಾರರ ನಿರ್ಲಕ್ಷ್ಯದ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಯವರು ತಡೆಗೋಡೆ ನಿರ್ಮಿಸಿಕೊಡುವಂತೆ ಈ ಹಿಂದೆ ಜಿಲ್ಲಾಡಳಿತಕ್ಕೆ ಲಿಖಿತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗ ಮತ್ತೆ ಗಾಳಿ ಮಳೆಗೆ ಕುಸಿದು ಬಿದ್ದಿದ್ದು, ಪಕೃತಿ ವಿಕೋಪದಡಿ ಸರಕಾರದಲ್ಲಿ ಅನುದಾನ ಲಭ್ಯವಿದೆ ಎಂದು ಆಗ ಭೇಟಿ ನೀಡಿದ ಕಂದಾಯ ಸಚಿವರು ಲೋಕೋಪಯೋಗಿ ಸಚಿವರು ಅನುದಾನ ಒದಗಿಸಲಾಗುವದೆಂದು ಹೇಳಿಕೆ ನೀಡಿದ್ದರು. ಆದರೆ ತಡೆಗೋಡೆ ನಿರ್ಮಿಸದೆ ಇದೀಗ ಮಳೆಯ ಆರ್ಭಟಕ್ಕೆ ಕಾಲೇಜಿನ 2 ಅಂತಸ್ತಿನ ಕಟ್ಟಡ ನೆಲ ಸಮವಾಗುವದರಲ್ಲಿ ಸಂಶಯವಿಲ್ಲ ಇದರಿಂದ ವಿದ್ಯಾರ್ಥಿ ಗಳಿಗೆ ಕಾಲೇಜಿನ ಅಧ್ಯಾಪಕರಿಗೆ ಅಪಾಯದ ಮುನ್ಸೂಚನೆ ಕಂಡುಬರುತ್ತಿದೆ. ಕಾಲೇಜಿನ ಮಕ್ಕಳಿಗೆ ಅಧ್ಯಾಪಕರಿಗೆ ಶೌಚಾಲಯ ಇಲ್ಲದಂತಾಗಿದೆ. ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ವೈ.ಎಂ. ಕರುಂಬಯ್ಯ, ಪ್ರಾಚಾರ್ಯರು, ಉಪನ್ಯಾಸಕರು ಈ ಬಗ್ಗೆ ಮತ್ತೊಮ್ಮೆ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಕಾಲೇಜಿನ ಗಂಭೀರ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದರಲ್ಲದೆ ಮುಂದಾಗಲಿರುವ ಅನಾಹುತವನ್ನು ತಪ್ಪಿಸುವ ಸಲುವಾಗಿ ರಕ್ಷಣಾ ಕಾರ್ಯಕೈಗೊಳ್ಳು ವಂತೆ ಮನವಿ ಸಲ್ಲಿಸಿದರು.