ಕೂಡಿಗೆ, ಜು. 10: ಯಡವನಾಡು ಗಿರಿಜನ ಹಾಡಿಯ ಮನೆ ಮುಂಭಾಗದಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದೆ. ಗಿರಿಜನ ಕುಪ್ಪುಹಾಡಿಯ ಭಾಸ್ಕರ ಎಂಬವರ ಮನೆಯ ಮುಂದೆ ಹುಲಿಯ ಹೆಜ್ಜೆಗಳು ಪತ್ತೆಯಾಗಿದ್ದು, ಹಾಡಿಯ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.