*ಗೋಣಿಕೊಪ್ಪ, ಜು. 12: ಹಾತೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಯಂತಿ ಅವರು ಅವಿರೋಧ ಆಯ್ಕೆಯಾಗಿದ್ದಾರೆ.
ಗ್ರಾ.ಪಂ. ಸಭಾಂಗಣದಲ್ಲಿ ಚುನಾವಣಾಧಿಕಾರಿ ಮತ್ತು ತಾಲೂಕು ದಂಡಾಧಿಕಾರಿ ಗೋವಿಂದರಾಜು ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಬಿ.ಸಿ.ಎಂ.ಎ. ಮಹಿಳಾ ಮೀಸಲಾತಿ ಅಡಿ ಜಯಂತಿ ಅಧ್ಯಕ್ಷ ಸ್ಥಾನಕ್ಕೆ ಬೆಳಿಗ್ಗೆ 10 ಗಂಟೆ 11 ನಿಮಿಷಕ್ಕೆ ನಾಮಪತ್ರ ಸಲ್ಲಿಸಿದರು. ನಂತರ 11.15 ಕ್ಕೆ ನಾಮಪತ್ರ ಪರಿಶೀಲನೆ ಹಾಗೂ 11.20 ಕ್ಕೆ ಜಯಂತಿಯವರನ್ನು ಅಧ್ಯಕ್ಷÀ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
2016 ರಲ್ಲಿ ನಡೆದ ಚುನಾವಣೆಯಲ್ಲಿ ಹಾತೂರು ಗ್ರಾ.ಪಂ. ಅಧ್ಯಕ್ಷರಾಗಿ ಆಶಾಲತ ಅವರು ಆಯ್ಕೆಯಾಗಿ ಎರಡುವರೆ ವರ್ಷಗಳ ಕಾಲ ಆಡಳಿತ ನಡೆಸಿದರು. ಬಿ.ಸಿಎಂ.ಎ. ಮಹಿಳಾ ಮೀಸಲಾತಿ ಅಡಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಇಬ್ಬರು ಮಹಿಳೆಯರು ಆಕಾಂಕ್ಷಿಯಾಗಿದ್ದರು. ಈ ಸಂದರ್ಭ ಪ್ರಮುಖರ ಒಪ್ಪಂದದಂತೆ ಮೊದಲ ಬಾರಿಗೆ ಎರಡುವರೆ ವರ್ಷಗಳು ಅಧ್ಯಕ್ಷರಾಗಿ ಆಡಳಿತ ನಡೆಸಲು ಆಶಾಲತ ಅವರನ್ನು ಆಯ್ಕೆ ಮಾಡಲಾಯಿತು. ನಂತರ ಜಯಂತಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲು ತೀರ್ಮಾನಿಸಲಾಯಿತು. ಈ ಮೊದಲಿನ ಒಪ್ಪಂದಂತೆ ಎರಡುವರೆ ವರ್ಷ ಪೂರೈಸಿದ ನಂತರ ಆಶಾಲತ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರಿಂದ ಅಧ್ಯಕ್ಷ ಸ್ಥಾನಕ್ಕೆ ಮರು ಚುನಾವಣೆ ನಡೆಯಿತು. ಚುನಾವಣೆ ಸಂದರ್ಭ ತಹಶೀಲ್ದಾರ್ ಗೋವಿಂದರಾಜು, ಗೋಣಿಕೊಪ್ಪ ವೃತ್ತ ನಿರೀಕ್ಷಕ ದಿವಾಕರ್, ಪಂಚಾಯಿತಿ ಸದಸ್ಯರುಗಳಾದ ಗುಮ್ಮಟ್ಟಿರ ದರ್ಶನ್ ನಂಜಪ್ಪ, ಆಶಾಲತ, ಕುಲ್ಲಚಂಡ ಚಿಣ್ಣಪ್ಪ, ರೂಪ ಭೀಮಯ್ಯ, ಹೆಚ್.ಡಿ. ಶ್ರೀನಿವಾಸ್, ಪೂವಣ್ಣ, ಕವಿತ, ಮುತ್ತಕ್ಕಿ, ಮೀರಾ, ತೇಜಾ ಪೂವಣ್ಣ, ಮ್ಯಾಥ್ಯು ಸುಭಾಷ್, ಬಿ.ಕೆ. ದಿನೇಶ್, ಎಂ. ಲಕ್ಷ್ಮಿ, ಕೆ.ಎಂ. ರೇಖಾ, ಪಿ.ಎಂ. ಮಾಲಿನಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೆಮ್ಮಯ್ಯ ಮತ್ತು ಸಿಬ್ಬಂದಿಗಳು ಹಾಜರಿದ್ದರು.