ಸುಂಟಿಕೊಪ್ಪ, ಜು. 12: ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವಕಾಲೇಜಿನ ಒತ್ತಿನಲ್ಲಿ ಬರೆಕುಸಿದು ಬಿದ್ದಿದ್ದು ಕಾಲೇಜು ಕಟ್ಟಡ ಭೂಕುಸಿತಕ್ಕೆ ಒಳಗಾಗಲಿರುವದನ್ನು ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ನೀಡಿ ಪರಿಶೀಲಿಸಿದ್ದಲ್ಲದೆ ತಡೆಗೋಡೆ ಕಾಮಗಾರಿ ಕ್ಷಿಪ್ರಗತಿಯಲ್ಲಿ ಮುಗಿಸಬೇಕೆಂದು ತಾ.ಪಂ. ಎ.ಇ.ಇ. ಜಯರಾಂ ಅವರಿಗೆ ತಾಕೀತು ಮಾಡಿದರು.
ಯಾವದೇ ಅನಾಹುತ ಸಂಭವಿಸದಂತೆ ಎಚ್ಚರ ವಹಿಸಬೇಕು ಕಾಮಗಾರಿಯನ್ನು ಇಂದಿನಿಂದಲೇ ಕೈಗೆತ್ತಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭ ಸೋಮವಾರಪೇಟೆ ತಹಶೀಲ್ದಾರ್ ಮಹೇಶ, ಸುಂಟಿಕೊಪ್ಪ ನಾಡಕಛೇರಿ ಕಂದಾಯ ಪರಿವೀಕ್ಷಕ ಶಿವಪ್ಪ, ಗ್ರಾಮಲೆಕ್ಕಿಗ ಉಮೇಶ, ಕಾಲೇಜಿನ ಪ್ರಾಚಾರ್ಯ ಪಿ.ಎಸ್.ಜಾನ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಪಿಡಿಓ ಮೇದಪ್ಪ ಇದ್ದರು.