ಸೋಮವಾರಪೇಟೆ, ಜು. 13: ಅಖಿಲ ಭಾರತ ಕುರುಹಿನ ಶೆಟ್ಟಿ (ನೇಕಾರ) ವಿದ್ಯಾರ್ಥಿನಿ ನಿಲಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಸಮುದಾಯದ ಬಡ ವಿದ್ಯಾರ್ಥಿನಿಯರಿಗೆ ಉಚಿತ ವಸತಿ ನಿಲಯ ಮತ್ತು ಪಿ.ಜಿ. ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.

ಆರ್ಥಿಕವಾಗಿ ಹಿಂದುಳಿದ ಕುರುಹಿನಶೆಟ್ಟಿ ಸಮುದಾಯದ ವಿದ್ಯಾರ್ಥಿನಿಯರು ಕಾಲೇಜು ವಿದ್ಯಾಭ್ಯಾಸಕ್ಕಾಗಿ ಪರ ಸ್ಥಳಕ್ಕೆ ತೆರಳಬೇಕಾಗಿದ್ದಲ್ಲಿ ವಸತಿ ನಿಲಯ ಅಥವಾ ಪಿ.ಜಿ. ಸೌಲಭ್ಯವನ್ನು ಟ್ರಸ್ಟ್‍ನಿಂದಲೇ ಒದಗಿಸಲಾಗುವದು. ಹೆಚ್ಚಿನ ಮಾಹಿತಿಗಾಗಿ 9480353269, 9342888755 ಸಂಪರ್ಕಿಸಬಹುದಾಗಿದೆ.