ಗೋಣಿಕೊಪ್ಪಲು, ಜು.13 : ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ತಾ.11 ರಂದು ಸಂಜೆ 5 ಗಂಟೆಗೆ ಬಾಳೆಲೆ ಹಾಗೂ ನಿಟ್ಟೂರುವಿಗೆ ಭೇಟಿ ನೀಡಿ ಲಕ್ಷಣ ತೀರ್ಥ ಪ್ರವಾಹ ಸ್ಥಿತಿ ಗತಿ ವೀಕ್ಷಣೆ ಮಾಡಿದರು.
ಬಾಳೆಲೆ ಹಾಗೂ ನಿಟ್ಟೂರು ಗ್ರಾಮದ ಸಂಪರ್ಕ ಸೇತುವೆ ಹಾಗೂ ಎತ್ತರಿಸಲಾದ ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಅಲ್ಲಿನ ಗ್ರಾಮಸ್ಥರು ಸುಮಾರು ರೂ. 5.60 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಸೇತುವೆ ಉದ್ಘಾಟನೆ ಹಾಗೂ ಮಳೆಗಾಲದಲ್ಲಿ ಗದ್ದೆಗಳಲ್ಲಿ ಪ್ರವಾಹ ಸ್ಥಿತಿ ಮತ್ತೆ ತಲೆ ದೋರುತ್ತಿದ್ದು, ಎತ್ತರಿಸಲಾದ ರಸ್ತೆಯ ತಳಭಾಗದಲ್ಲಿ ಲಕ್ಷ್ಮಣತೀರ್ಥ ನದಿ ನೀರು ಹರಿದು ಹೋಗಲು ಮೋರಿಯನ್ನು ಮತ್ತಷ್ಟು ನಿರ್ಮಾಣ ಮಾಡಬೇಕಾಗಿದೆ ಎಂದು ಮನವಿ ಮಾಡಿದರು.
ಈಗ ಎತ್ತರಿಸಲಾದ ರಸ್ತೆಯನ್ನು ಮತ್ತಷ್ಟು ಎತ್ತರಿಸಬೇಕಾಗಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣವಾದಲ್ಲಿ ಉತ್ತಮ ಎಂದು ಸಾರ್ವಜನಿPರುÀ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಪರಿಶೀಲನೆ ಸಂದರ್ಭ ತಹಶೀಲ್ದಾರ್ ಗೋವಿಂದರಾಜು, ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್, ನಿಟ್ಟೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅರಮಣಮಾಡ ಸತೀಶ್ ದೇವಯ್ಯ, ಉಪಾಧ್ಯಕ್ಷ ಪೋರಂಗಡ ಪವನ್ ಚಿಟ್ಟಿಯಪ್ಪ, ಮೇಚಂಡ ವಾಸು, ಮಾಚಂಗಡ ಅಶೋಕ್, ಚೆಕ್ಕೇರ ಅಯ್ಯಪ್ಪ ಮುಂತಾದವರು ಉಪಸ್ಥಿತರಿದ್ದರು.