ಮಡಿಕೇರಿ, ಜು. 14: ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನಲ್ಲಿ ಮಡಿಕೇರಿ ತಾಲೂಕಿನ ಇತರ ಸಹಕಾರ ಸಂಘಗಳ ಕ್ಷೇತ್ರದಿಂದ ತೆರವಾಗಿದ್ದ ಒಂದು ಕ್ಷೇತ್ರಕ್ಕೆ ಚುನಾವಣೆ ತಾ. 16 ರಂದು ನಿಗದಿಪಡಿಸಲಾಗಿತ್ತು. ನಾಮಪತ್ರ ಸಲ್ಲಿಸಿದ ಕಡಂಗ ಪ್ಯಾಕ್ಸ್‍ನ ಅಧ್ಯಕ್ಷ ಕೋಡಿರ ಎಂ. ತಮ್ಮಯ್ಯ ಅವರು ಇತರ ಯಾರೂ ನಾಮಪತ್ರ ಸಲ್ಲಿಸದ್ದರಿಂದ ಸಹಕಾರ ಯೂನಿಯನ್‍ನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.