ತುಂಬಿದ ಹೊನ್ನಮ್ಮನ ಕೆರೆ : ಶನಿವಾರಸಂತೆ ಬಳಿ ಇರುವ ಐತಿಹಾಸಿಕ ಹಿನ್ನೆಲೆಯುಳ್ಳ ಹೊನ್ನಮ್ಮ ಕೆರೆ ಭರ್ತಿಯಾಗಿದ್ದು, ನೀರು ರಸ್ತೆ ಮೇಲೇರಿದೆ.
- ರವಿತುಂಬುತ್ತಿರುವ ಬೇತ್ರಿ: ಬೇತ್ರಿ ಬಳಿ ಹರಿಯುತ್ತಿರುವ ಕಾವೇರಿ ನದಿ ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ಸೇತುವೆ ಮುಳುಗಡೆಯಾಗುವ ಹಂತಕ್ಕೆ ತಲಪಿದೆ.
- ರಫೀಕ್, ಬೇತ್ರಿಅನಾಗರಿಕರು : ಹೋಂಸ್ಟೇ / ಅತಿಥಿಗೃಹಗಳಲ್ಲಿ ಉಳಿದ ಪದಾರ್ಥಗಳನ್ನು ವಿಲೇವಾರಿ ಮಾಡಲು ಅನಾಗರಿಕರು ಕಂಡುಕೊಂಡ ದಾರಿ ಇದು. ನಗರಸಭೆ ನೌಕರರು ಬೆಳಿಗ್ಗೆಯಿಂದ ಸಂಜೆ ತನಕ ಶುಚಿತ್ವಕ್ಕಾಗಿ ಆಟೋ / ಟ್ರ್ಯಾಕ್ಟರ್‍ಗಳನ್ನು ನಗರದಾದ್ಯಂತ ಸಂಚರಿಸುತ್ತಿದ್ದರೂ, ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ರಸ್ತೆ ಬದಿ ಬಿಸಾಕುವ ಪ್ರಜ್ಞೆ ಇಲ್ಲದ ಜನ ಸರ್ಕಾರವನ್ನು ಬೈಯುತ್ತಾರೆ. ಕಾನ್ವೆಂಟ್ ರಸ್ತೆಯಲ್ಲಿ ಸಿಕ್ಕ ದೃಶ್ಯವಿದು.
- ಪ್ರಶಾಂತ್, ಕೆ.ಆರ್.ಬರೆ ಕುಸಿಯುತ್ತಿದೆ : ಮಡಿಕೇರಿ- ಮೈಸೂರು ರಸ್ತೆಯಲ್ಲಿ 3 ಕಿ.ಮೀ. ದೂರದಲ್ಲಿ ಬರೆ ಕುಸಿಯುತ್ತಿದೆ. ಪ್ರಯಾಣಿಕರು ಎಚ್ಚರ ವಹಿಸಿ.
- ಟಿ.ಜಿ. ಸತೀಶ್, ಮಡಿಕೇರಿ.ಕೊಚ್ಚಿಹೋದ ರಸ್ತೆ : ಕಡಂಗ-ಎಡಪಾಲ ಮುಖ್ಯ ರಸ್ತೆ ಮಧ್ಯೆ ಜಲ ಉಕ್ಕಿ ಹರಿಯುತ್ತಿದ್ದು, ರಸ್ತೆ ಕೊಚ್ಚಿ ಹೋಗಿದೆ. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
- ದಿವಿನ್ ಮುಕ್ಕಾಟಿರ, ಅರಪಟ್ಟುಕಾಡಾನೆ ಧಾಳಿ- ಕಾಫಿ, ಬಾಳೆ ನಾಶ: ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಕಾಂಡನಕೊಲ್ಲಿ ಗ್ರಾಮದ ಮನಿಯಪ್ಪನ ಮಿಥುನ್ ಸೋಮಯ್ಯ ಅವರಿಗೆ ಸೇರಿದ ತೋಟಕ್ಕೆ ನುಸುಳಿದ ಕಾಡಾನೆಗಳು ಬಾಳೆಗಿಡಗಳನ್ನು ತಿಂದು ಹಾಕಿದ್ದು, ಕಾಫಿ ಗಿಡಗಳನ್ನು ನಾಶಪಡಿಸಿವೆ.
- ಮಿಥುನ್ ಪೂವಯ್ಯ